ಕ್ರೈಂ ಸುದ್ದಿ
ನಸುಕಿನಲ್ಲಿ ಖಾಸಗಿ ಬಸ್ ಪಲ್ಟಿ | ಭೀಕರ ಅಪಘಾತ | ಸ್ಥಳದಲ್ಲೇ ಮೂವರ ದುರ್ಮರಣ

CHITRADURGA NEWS | 07 2024
ಚಿತ್ರದುರ್ಗ: ಯುಗಾದಿ ಅಮಾವಾಸ್ಯೆಗೆ ಮುನ್ನಾ ದಿನ, ಭಾನುವಾರ ಬೆಳ್ಳಂ ಬೆಳಗ್ಗೆ ಹೊಳಲ್ಕೆರೆ ಬಳಿ ಸ್ಲೀಪರ್ ಕೋಚ್ ಬಸ್ ಪಲ್ಟಿಯಾಗಿದ್ದು, ಸ್ಥಳದಲ್ಲೇ ಮೂರು ಜನ ಮೃತಪಟ್ಟಿದ್ದಾರೆ.
ನಸುಕಿನ 4 ಗಂಟೆ ಸುಮಾರಿಗೆ ಹೊಳಲ್ಕೆರೆ ಬಳಿಯಿರುವ ಕಣಿವೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬಸ್ ಪಲ್ಟಿಯಾಗಿದೆ.

ಇದನ್ನೂ ಓದಿ: ಕೀ ಓಟರ್ಸ್ ಮೇಲೆ ಕಣ್ಣಿಟ್ಟ ಕಾರಜೋಳ
ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟ್ಟಿದ್ದ ಸ್ಲೀಪರ್ ಕೋಚ್ ಸೀಬರ್ಡ್ ಬಸ್ಸಿನಲ್ಲಿ ಸುಮಾರು 50 ಜನ ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಇದರಲ್ಲಿ 38 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೂರು ಜನರ ಮೃತ ದೇಹಗಳನ್ನು ಹೊಳಲ್ಕೆರೆ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡ 38 ಜನರನ್ನು ಹೊಳಲ್ಕೆರೆ, ಚಿತ್ರದುರ್ಗ, ಶಿವಮೊಗ್ಗ ಮತ್ತಿತರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಒಮ್ಮೆ ‘ಬಾದಾಮಿ’ ನೆನಪಿಸಿಕೊಳ್ಳಲಿ | ಗೋ ಬ್ಯಾಕ್ ಹೇಳಿಕೆಗೆ ತಿರುಗೇಟು ನೀಡಿದ ಕೆ.ಎಸ್.ನವೀನ್
ಹೊಳಲ್ಕೆರೆ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಿನೋದ್ ಸಜ್ಜನ್ ನೇತೃತ್ವದಲ್ಲಿ ತ್ವರತಿಗತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತ ಸ್ಥಳಕ್ಕೆ ನಸುಕಿನಲ್ಲೇ ಹೊಳಲ್ಕೆರೆ ಪೊಲೀಸರು ಭೇಟಿ ನೀಡಿ ಗಾಯಗೊಂಡವರನ್ನು ರಕ್ಷಣೆ ಮಾಡಿದ್ದಾರೆ. ಪಿಎಸ್‍ಐ ಸುರೇಶ್, ಸಿಪಿಐ ಚಿಕ್ಕಣ್ಣನವರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | 6 ಏಪ್ರಿಲ್ | ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ರೇಟ್
ಕಣಿವೆಯಲ್ಲಿ ಪಲ್ಟಿಯಾಗಿದ್ದ ಬಸ್ಸನ್ನು ಕ್ರೇನ್ ಮೂಲಕ ಮೇಲೆತ್ತಿ ರಕ್ಷಣಾ ಕಾರ್ಯಾಚರಣೆಯನ್ನು ಬೆಳಗಾಗುವುದರಲ್ಲಿ ಮಾಡಲಾಗಿದೆ.
ಸದರಿ ಬಸ್ ಪಲ್ಟಿ ಪ್ರಕರಣ ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಚಿತ್ರದುರ್ಗದಿಂದ ಹೊಳಲ್ಕೆರೆ ಕಡೆಗೆ ಹೋಗುವಾಗ ಹನುಮಂತ ದೇವರ ಕಣಿವೆ ಎಂದೇ ಹೆಸರಾಗಿರುವ ಈ ಕಣಿವೆ ಪುಟ್ಟ ಘಾಟ್ ಸೆಕ್ಷನ್ ಮಾದರಿಯಲ್ಲಿದ್ದು, ಪದೇ ಪದೇ ಇಲ್ಲಿ ಅಪಘಾತ ಸಂಭವಿಸುತ್ತಿವೆ.
