ಕ್ರೈಂ ಸುದ್ದಿ
ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಅಪಘಾತ

CHITRADURGA NEWS | 17 SEPTEMBER 2024
ಚಿತ್ರದುರ್ಗ: ಚಾಲಕನ ನಿಯಂತ್ರಣ ಕಳೆದುಕೊಂಡ KSRTC ಬಸ್ ರಸ್ತೆ ಪಕ್ಕದಲ್ಲಿದ್ದ ಹಳ್ಳಕ್ಕೆ ನುಗ್ಗಿರುವ ಘಟನೆ ಚಳ್ಳಕೆರೆ ತಾಲೂಕಿನಲ್ಲಿ ನಡೆದಿದೆ.
ಚಳ್ಳಕೆರೆಯಿಂದ ತಿಪ್ಪಾರೆಡ್ಡಿಹಳ್ಳಿಗೆ ಹೋಗುವಾಗ, ಕಾಮಸಮುದ್ರ ಬಳಿ ಅಪಘಾತ ನಡೆದಿದ್ದು, ಬಹುತೇ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ಬಂಗಾರದ ಸರ ಕದ್ದ ಕಳ್ಳಿ | ಬಸ್ ನಿಲ್ದಾಣದಿಂದ ಎಸ್ಕೇಪ್
ಬಸ್ಸಿನಲ್ಲಿ ಅಂದಾಜು 30 ಜನ ಪ್ರಯಾಣಿಸುತ್ತಿದ್ದು, ಬಸ್ ಹಳ್ಳಕ್ಕೆ ನುಗ್ಗಿದ ರಭಸಕ್ಕೆ ಬಸ್ಸಿನ ಮುಂಭಾಗ ಜಖಂ ಆಗಿದೆ. ಈ ವೇಳೆ ಮೂರು ಜನರಿಗೆ ಕೈ ಕಾಲುಗಳಿಗೆ ಗಾಯವಾಗಿದೆ. ಸಾಕಷ್ಟು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಅಪಘಾತ
ಗಾಯಾಳುಗಳನ್ನು ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಪರಶುರಾಮಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಕರುವಿನಕಟ್ಟೆ ಸರ್ಕಲ್ ಶಿಕ್ಷಣದ ಶಕ್ತಿ ಕೇಂದ್ರವಾಗಿತ್ತು | ಸಿಪಿಐ ತಿಪ್ಪೇಸ್ವಾಮಿ
