CHITRADURGA NEWS | 17 SEPTEMBER 2024
ಚಿತ್ರದುರ್ಗ: ನಗರದ ಹೊಳಲ್ಕೆರೆ ರಸ್ತೆಯಲ್ಲಿ ನೆಲೆಸಿರುವ ಶ್ರೀ ಗೌರಸಂದ್ರ ಮಾರಮ್ಮ(Gaurasandra Maramma) ದೇವಿಯ ಜಾತ್ರಾ ಮಹೋತ್ಸವ(jathra mahothsava) ಮಂಗಳವಾರ ಅದ್ಧೂರಿಯಾಗಿ ನೆರವೇರಿತು.
ಕ್ಲಿಕ್ ಮಾಡಿ ಓದಿ: Short circuit: ಶಾರ್ಟ್ ಸರ್ಕೀಟ್ | ಎಲೆಕ್ಟ್ರಿಕಲ್ ಪರಿಕರಗಳಿಗೆ ಹಾನಿ
ಮಹೋತ್ಸವದ ಅಂಗವಾಗಿ ಮಂಗಳವಾರ ದೇವಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ, ಹಿಟ್ಟಿನ ಆರತಿ ಸೇವೆ ನಡೆಯಿತು.
ಜಾತ್ರಾ ಮಹೋತ್ಸವದ ಪ್ರಯುಕ್ತ ಗರ್ಭಗುಡಿಯ ದೇವಿಯ ಮೂರ್ತಿಗೆ ಆಭರಣಗಳು ಸೇರಿದಂತೆ ನಾನಾ ವಿನ್ಯಾಸಗಳ ವೈವಿದ್ಯಮಯ ಸೀರೆಗಳನ್ನು ಪೋಣಿಸಿ ಹಾಗೂ ಬಗೆ ಬಗೆಯ ಪುಷ್ಪಗಳಿಂದ ಮನಮೋಹಕವಾಗಿ ಸಿಂಗರಿಸಲಾಗಿತ್ತು. ಅದೇ ರೀತಿ ಉತ್ಸವ ಮೂರ್ತಿಗೂ ನಾನಾ ಪುಷ್ಪಗಳಿಂದ ಸುಂದರವಾಗಿ ಅಲಂಕಾರ ಮಾಡಲಾಗಿತ್ತು.
ಬೆಳಗ್ಗೆಯಿಂದ ರಾತ್ರಿವರೆಗೆ ನಗರದ ನಾನಾ ಬಡಾವಣೆಗಳ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ, ಸರದಿ ಸಾಲಿನಲ್ಲಿ ನಿಂತು ಹೂವು, ಹಣ್ಣು, ಕಾಯಿ, ಅಕ್ಕಿ, ಬೇಳೆ, ಬೆಲ್ಲ ಮೀಸಲು ಅರ್ಪಿಸಿ, ಭಕ್ತಿ ಸಮರ್ಪಿಸಿದರು. ಕೆಲ ಭಕ್ತರು ಬೇವಿನ ಸೀರೆ ಹುಟ್ಟು ಹರಕೆ ತೀರಿಸಿದರು.
ಕ್ಲಿಕ್ ಮಾಡಿ ಓದಿ: POLICE: ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲೆಸ್ತೇನ್ ಪರ ಘೋಷಣೆ, ಭಾವುಟ ಪ್ರದರ್ಶನ | ನಗರ ಠಾಣೆಯಲ್ಲಿ ದೂರು ದಾಖಲು
ಚಳ್ಳಕೆರೆ ತಾಲೂಕಿನ ಗೌರಸಂದ್ರ ಮಾರಮ್ಮ ದೇವಿಯ ಜಾತ್ರೆ ನಡೆದು 15 ದಿನಕ್ಕೆ ಜಿಲ್ಲಾ ಕೇಂದ್ರ ಚಿತ್ರದುರ್ಗದ ದೇವಸ್ಥಾನದಲ್ಲೂ ಒಂದು ವಾರ ಕಾಲ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ.
ಈಗಾಗಲೇ ಕಳೆದ ಶುಕ್ರವಾರ ರಂದು ವದಲಿಂಗಿತ್ತಿ ಶಾಸ್ತçದ ಬಳಿಕ ಸೆ.16ರ ರಾತ್ರಿ ಐತಿಹಾಸಿಕ ಚಂದ್ರವಳ್ಳಿ ಕೆರೆಯಲ್ಲಿ ಹೊಳೆ ಪೂಜೆ ನೆರವೇರಿಸಲಾಯಿತು. ಮಂಗಳವಾರ ಹಿಟ್ಟಿನ ಆರತಿ, ಬೇವಿನ ಸೀರೆ ನೆರವೇರಿದ್ದು, ಸೆ.18ರ ರಾತ್ರಿ 8 ಗಂಟೆಗೆ ಅಗ್ನಿಕುಂಡ, ಸೆ.19ರ ಬೆಳಗ್ಗೆ 11ಕ್ಕೆ ಓಕಳಿ ಕಾರ್ಯ ನಡೆಯಲಿದ್ದು, ನಂತರ ಮುರುಘರಾಜೇಂದ್ರ ಮಠ ಮತ್ತು ಭಕ್ತಾಧಿಗಳ ಮನೆಗಳಲ್ಲಿ ದೇವಿಗೆ ಪೂಜೆ ಸಲ್ಲಿಸಲಾಗುವುದು ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
