Connect with us

    POLICE: ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲೆಸ್ತೇನ್ ಪರ ಘೋಷಣೆ, ಭಾವುಟ ಪ್ರದರ್ಶನ | ನಗರ ಠಾಣೆಯಲ್ಲಿ ದೂರು ದಾಖಲು

    ಕ್ರೈಂ ಸುದ್ದಿ

    POLICE: ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲೆಸ್ತೇನ್ ಪರ ಘೋಷಣೆ, ಭಾವುಟ ಪ್ರದರ್ಶನ | ನಗರ ಠಾಣೆಯಲ್ಲಿ ದೂರು ದಾಖಲು

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 16 SEPTEMBER 2024

    ಚಿತ್ರದುರ್ಗ: ಈದ್ ಮಿಲಾದ್ ಹಬ್ಬದ ಅಂಗವಾಗಿ ನಗರದಲ್ಲಿ ನಡೆದ ಬೃಹತ್ ಮೆರವಣಿಗೆ ವೇಳೆ ಕೆಲ ಯುವಕರು ಪ್ಯಾಲೇಸ್ತೇನ್ ಪರ ಘೋಷಣೆ ಕೂಗಿ, ಪ್ಯಾಲೆಸ್ತಿನಿ ಧ್ವಜ ಪ್ರದರ್ಶಿಸಿದ ಘಟನೆ ನಡೆದಿದೆ.

    ಸಂಭ್ರಮದಿಂದ ನಡೆಯುತ್ತಿದ್ದ ಈದ್ ಮಿಲಾದ್ ಮೆರವಣಿಗೆಯಲ್ಲಿ ನಗರದ ಗಾಂಧಿ ವೃತ್ತದ ಬಳಿ ಮಧ್ಯಾಹ್ನ 3 ಗಂಟೆ ವೇಳೆಗೆ ಕೆಲ ಯುವಕರು ಘೋಷಣೆ ಕೂಗಿ ಭಾವುಟ ಹಿಡಿದು ಓಡಾಡಿರುವ ವೀಡಿಯೋಗಳು ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿವೆ.

    ಇದನ್ನೂ ಓದಿ: ನಗರಸಭೆ ಉಪಾಧ್ಯಕ್ಷೆ ಸೇರಿ ನಾಲ್ವರು ಬಿಜೆಪಿಯಿಂದ ಉಚ್ಛಾಟನೆ

    ಸ್ಥಳದಲ್ಲಿದ್ದ ಪೊಲೀಸರು (POLICE) ಪ್ಯಾಲೆಸ್ತೇನಿ ಧ್ವಜ ವಶಕ್ಕೆ ಪಡೆದುಕೊಂಡಿದ್ದಾರೆ. ಘೋಷಣೆ ಕೂಗಿದವರ ಪತ್ತೆಗೆ ಮುಂದಾಗಿದ್ದಾರೆ. ಈ ಬಗ್ಗೆ ಚಿತ್ರದುರ್ಗ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾಹಿತಿ ನೀಡಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಕ್ರೈಂ ಸುದ್ದಿ

    To Top