Connect with us

    Lok Sabha Election ಅಖಾಡಕ್ಕೆ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಪ್ರವೇಶ | ಮೂರು ದಿನ ಪ್ರವಾಸ

    ಮುಖ್ಯ ಸುದ್ದಿ

    Lok Sabha Election ಅಖಾಡಕ್ಕೆ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಪ್ರವೇಶ | ಮೂರು ದಿನ ಪ್ರವಾಸ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 29 MARCH 2024
    ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರು ಶುಕ್ರವಾರ ಅಖಾಡಕ್ಕೆ ಧುಮುಕುತ್ತಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಮೂಲಕ ಲೋಕಸಭೆ ಕ್ಷೇತ್ರವನ್ನು ಅಧಿಕೃತವಾಗಿ ಪ್ರವೇಶಿಸುತ್ತಿದ್ದಾರೆ. ಶುಕ್ರವಾರ ಮಧ್ಯಾಹ್ನದಿಂದ ಭಾನುವಾರ ಮಧ್ಯಾಹ್ನದವರೆಗೂ ಸರಣಿ ಸಭೆ, ಮಠಗಳ ಭೇಟಿ ನಡೆಸಲಿದ್ದಾರೆ.

    ಶುಕ್ರವಾರ ಮಧ್ಯಾಹ್ನ1.30ಕ್ಕೆ ಸಿದ್ದಾಗಂಗಾ ಮಠಕ್ಕೆ ಭೇಟಿ ನೀಡಿ ಗದ್ದುಗೆ ದರ್ಶನ ಹಾಗೂ ಸ್ವಾಮಿಜೀ ಆಶೀರ್ವಾದ ಪಡದದು ಪ್ರಸಾದ ಸ್ವೀಕರಿಸಿ ಮಧ್ಯಾಹ್ನ 3 ಗಂಟೆಗೆ ಶಿರಾ ನಗರಕ್ಕೆ ಆಗಮಿಸಲಿದ್ದಾರೆ. ಕಾರ್ಯಕರ್ತರಿಂದ ಸ್ವಾಗತ ಸ್ವೀಕರಿಸಿ ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ.

    ಮಧ್ಯಾಹ್ನ 4 ಗಂಟೆಗೆ ಹಿರಿಯೂರು ನಗರಕ್ಕೆ ಆಗಮಿಸಲಿದ್ದು, ಕಾರ್ಯಕರ್ತರಿಂದ ಸ್ವಾಗತ ಸ್ವೀಕರಿಸಿ ತೇರುಮಲ್ಲೇಶ್ವರ ಸ್ವಾಮಿ ದೇವರ ದರ್ಶನ ಪಡೆದು, ಡಾ.ಬಿ.ಆರ್‌.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಚಿತ್ರದುರ್ಗಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

    ಕ್ಲಿಕ್ ಮಾಡಿ ಓದಿ: ನೀರಿಗಾಗಿ ಜಲಾಶಯದ ನಾಲೆ ಒಡೆದ ರೈತರು | ಇಂದು ಹುಳಿಯಾರು – ಹಿರಿಯೂರು ರೈತರ ಸಭೆ

    ಸಂಜೆ 5 ಗಂಟೆಗೆ ಚಿತ್ರದುರ್ಗ ನಗರಕ್ಕೆ ಆಗಮಿಸಿ ಸರಣಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ 8 ಗಂಟೆವರೆಗೆ ಬಿಜೆಪಿ ಚುನಾವಣಾ ಕಾರ್ಯಾಲಯಕ್ಕೆ ಭೇಟಿ, ಕಾರ್ಯಕರ್ತರಿಂದ ಸ್ವಾಗತ. ಮದಕರಿ ನಾಯಕ, ವೀರ ವನಿತೆ ಒನಕೆ ಓಬವ್ವ, ಡಾ.ಬಿ.ಆರ್‌.ಅಂಬೇಡ್ಕರ್‌, ಸಂಗೊಳ್ಳಿ ರಾಯಣ್ಣ ಹಾಗೂ ಕನಕದಾಸ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ.

    ಬಳಿಕ ರಾಜ ಉತ್ಸವಾಂಬ, ನೀಲಕಂಠಶ್ವರ ದೇವರ ದರ್ಶನ ಪಡೆದು ಕಬೀರನಾಂದ ಆಶ್ರಮಕ್ಕೆ ತೆರಳಲಿದ್ದಾರೆ. ಅಲ್ಲಿಂದ ನೇರವಾಗಿ ಯಾದವ ಮಠ, ಮುರುಘರಾಜೇಂದ್ರ ಬೃಹನ್ಮಠ, ಇಮ್ಮಡಿ ಸಿದ್ಧರಾಮೇಶ್ವರ ಮಠ, ಛಲವಾದಿ ಗುರು ಪೀಠ, ಮಡಿವಾಳ ಮಚಿದೇವ ಮಠ, ಕೇತೇಶ್ವರ ಗುರು ಪೀಠ, ಸೇವಾಲಾಲ್ ಬಂಜಾರ ಗುರು ಪೀಠ ಹಾಗು ಮದಾರ ಚನ್ನಯ್ಯ ಮಠಕ್ಕೆ ಭೇಟಿ ನೀಡಲಿದ್ದಾರೆ. ರಾತ್ರಿ 8 ಗಂಟೆಗ ಐಶ್ವರ್ಯ ಪೋರ್ಟ್‌ನಲ್ಲಿ ಜಿಲ್ಲಾ ಪ್ರಮುಖರ ಸಭೆ ನಡೆಸಲಿದ್ದಾರೆ.

    ಮಾರ್ಚ್‌ 30 ರ ಬೆಳಿಗ್ಗೆ 8.30ಕ್ಕೆ ಶಾಸಕ ಎಂ. ಚಂದ್ರಪ್ಪ, 9 ಗಂಟೆಗೆ ಮಾಜಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಮನೆಗೆ ಭೇಟಿ ನೀಡಲಿದ್ದಾರೆ. 10 ಗಂಟೆಗೆ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಭೀಮಸಮುದ್ರ ನಿವಾಸಕ್ಕೆ ಆಗಮಿಸಲಿದ್ದಾರೆ.

    11 ಗಂಟೆಗೆ ಸಿರಿಗೆರೆ ತರಳುಬಾಳು ಬೃಹನ್ಮಠಕ್ಕೆ ಭೇಟಿ ನೀಡಿ ಹೊಳಲ್ಕೆರೆ ಶಕ್ತಿ ಗಣಪತಿ ದೇವರ ದರ್ಶನ ಪಡೆಯಲಿದ್ದಾರೆ. ಬಳಿಕ ಹೊಸದುರ್ಗದ ಭಗೀರಥ ಗುರು ಪೀಠ, ಸಾಣೇಹಳ್ಳಿ ಮಠ, ಕಾಗಿನೆಲೆ ಗುರು ಪೀಠ ಹಾಗೂ ಕುಂಚಿಟಿಗ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಲಿದ್ದಾರೆ.

    ಕ್ಲಿಕ್ ಮಾಡಿ ಓದಿ: ಯಡಿಯೂರಪ್ಪ ವಿರುದ್ಧ ಗುಡುಗಿದ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ‌

    ಸಂಜೆ 4.30ಕ್ಕೆ ಚಳ್ಳಕೆರೆ ತಾಲ್ಲೂಕಿನ ದೊಡ್ಡರಿ ಮಠಕ್ಕೆ ಆಗಮಿಸಲಿದ್ದಾರೆ. 5.30ಕ್ಕೆ ಮಾಜಿ ಶಾಸಕ ನೇರ್ಲಗುಂಟೆ ಎಸ್‌ತಿಪ್ಪೇಸ್ವಾಮಿ ಮನೆಗೆ ಭೇಟಿ ನಿಡಿ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ದೇವರ ದರ್ಶನಕ್ಕೆ ತೆರಳಲಿದ್ದಾರೆ.

    ಮಾರ್ಚ್‌ 31 ರಂದು ಬೆಳಿಗ್ಗೆ 10.30ಕ್ಕೆ ಚಿತ್ರದುರ್ಗ ನಗರದ ಎಸ್‌.ಎಸ್‌.ಕೆ.ಎಸ್‌ ಸಮುದಾಯ ಭವನದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರ ಸಮನ್ವಯ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಮಂಡಲ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಮತ್ತು ಸಂಚಾಲಕರು, ಪ್ರಬಾರಿಗಳ ಸಭೆ, ಜಿಲ್ಲಾ ಹಾಗೂ ವಿಧಾನ ಸಭಾ ಕ್ಷೇತ್ರಗಳ ಚುನಾವಣಾ ನಿರ್ವಹಣ ಸಮಿತಿಗಳ ಸಭೆ ನಡೆಸಿ ಮಧ್ಯಾಹ್ನ 3 ಗಂಟೆಗೆ ದಾವಣಗೆರೆಗೆ ತೆರಳಿದ್ದಾರೆ.

    ವಾಲ್ಮೀಕಿ ಗುರು ಪೀಠ, ಪಂಚಮಸಾಲಿ ಗುರು ಪೀಠ, ಕನಕ ಗುರು ಪೀಠ, ನಂದಿಗುಡಿ ಮಠ ಹಾಗೂ ವೇಮನ ಗುರು ಪೀಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆಯಲಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top