ಮುಖ್ಯ ಸುದ್ದಿ
ನೀರಿಗಾಗಿ ಜಲಾಶಯದ ನಾಲೆ ಒಡೆದ ರೈತರು | ಇಂದು ಹುಳಿಯಾರು – ಹಿರಿಯೂರು ರೈತರ ಸಭೆ

CHITRADURGA NEWS | 29 MARCH 2024
ಚಿತ್ರದುರ್ಗ: ಹುಳಿಯಾರು ಹೋಬಳಿ ಬೋರನಕಣಿವೆ ಜಲಾಶಯದ ಬಳಿ ಹಳ್ಳಕ್ಕೆ ನೀರು ಹರಿಸಲು ಹಿರಿಯೂರು ತಾಲ್ಲೂಕಿನ ರೈತರು ಸ್ಥಳೀಯರ ವಿರೋಧದ ನಡುವೆಯೂ ನಾಲೆ ಒಡೆದಿದ್ದಾರೆ.
ಕ್ಲಿಕ್ ಮಾಡಿ ಓದಿ: ಯಡಿಯೂರಪ್ಪ ವಿರುದ್ಧ ಗುಡುಗಿದ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ
ಹುಳಿಯಾರು ಸಮೀಪದ ಬೋರನಕಣಿವೆ ಜಲಾಶಯದಿಂದ ಹಿರಿಯೂರು ತಾಲ್ಲೂಕಿನ ಗಾಯತ್ರಿ ಜಲಾಶಯಕ್ಕೆ ಕುಡಿಯುವ ನೀರಿಗಾಗಿ ಮೂರು ದಿನ ನಿರಂತರವಾಗಿ ನೀರು ಹರಿಸಲು ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದರು. ಈ ವಿಚಾರವಾಗಿ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಕೂಡ ಪತ್ರ ಬರೆದು, ಗಾಯತ್ರಿ ಜಲಾಶಯಕ್ಕೆ 27 ಕಿ.ಮೀ ಹಳ್ಳದ ಮೂಲಕ ಬೋರನಕಣಿವೆ ಜಲಾಶಯದಿಂದ ಸುಮಾರು ಮೂರು ಅಡಿ ನೀರು ಹರಿಸುವಂತೆ ಪತ್ರ ಬರೆದಿದ್ದರು.

ಕ್ಲಿಕ್ ಮಾಡಿ ಓದಿ: ನಿವೇಶನ ಹಂಚಿಕೆಗೆ ಆಗ್ರಹಿಸಿ ರಸ್ತೆ ಬಂದ್ | ಸರ್ಕಾರದ ವಿರುದ್ಧ ಆಕ್ರೋಶ
ಹುಳಿಯಾರು ಭಾಗದ ರೈತರ ವಿರೋಧದ ನಡುವೆಯೂ ಹಿರಿಯೂರಿನ ರೈತರು ಗುರುವಾರ ಮುಂಜಾನೆಯಿಂದ ಸಂಜೆವರೆಗೆ ಬೋರನಕಣಿವೆ ಜಲಾಶಯದ ಹಳ್ಳಕ್ಕೆ ನೀರು ಹರಿಸಲು ಕಾಲುವೆ ಒಡೆದು ಅಡ್ಡಲಾಗಿ ಮರಳು ಚೀಲಗಳನ್ನು ಇಟ್ಟಿದ್ದರು. ಸಂಜೆ ವೇಳೆ ವಿಷಯ ತಿಳಿದ ಸ್ಥಳೀಯ ರೈತರು ಜಲಾಶಯದ ಬಳಿ ವಿರೋಧ ವ್ಯಕ್ತಪಡಿಸಿದರು.
ಪೊಲೀಸರ ಮಧ್ಯಸ್ಥಿಕೆಯಲ್ಲಿ ಶುಕ್ರವಾರ ರೈತರು ಸಭೆ ಸೇರಿ ಗಾಯತ್ರಿ ಜಲಾಶಯಕ್ಕೆ ನೀರು ಬಿಡುವ ಬಗ್ಗೆ ತೀರ್ಮಾನಿಸಲಿದ್ದಾರೆ ಎಂದು ತಿಳಿದು ಬಂದಿದೆ.
