ಕ್ರೈಂ ಸುದ್ದಿ
ಹೆದ್ದಾರಿಯಲ್ಲಿ ಟಯರ್ ಸ್ಫೋಟ | ವಾಹನ ಪಲ್ಟಿ | ಓರ್ವ ಮೃತ

CHITRADURGA NEWS | 29 MARCH 2024
ಚಿತ್ರದುರ್ಗ: ಹೆಣ್ಣು ನೋಡುವ ಶಾಸ್ತ್ರಕ್ಕೆ ಬರುತ್ತಿದ್ದ ಕುಟಂಬ ತಳಕು ಸಮೀಪದ ಹೊಸಹಳ್ಳಿ ಕ್ರಾಸ್ ಬಳಿ ಅಪಘಾತಕ್ಕೆ ತುತ್ತಾಗಿದೆ.
ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಮದ ಜಡೆಪ್ಪ ಅವರ ಮಗ ಚೇತನ್‌ಗೆ ಚಳ್ಳಕೆರೆ ನಗರದಲ್ಲಿ ಹೆಣ್ಣುನೋಡುವ ಉದ್ದೇಶದಿಂದ ಕುಟುಂಬದ 13 ಸದಸ್ಯರು ತೂಫಾನ್ ವಾಹನದಲ್ಲಿ ಚಳ್ಳಕೆರೆಗೆ ಬರುತ್ತಿದ್ದರು. ಈ ವೇಳೆ ಚಳ್ಳಕೆರೆ ತಾಲ್ಲೂಕಿನ ತಳಕು ಸಮೀಪದ ಹೊಸಹಳ್ಳಿ ಕ್ರಾಸ್ ಬಳಿ ವಾಹನದ ಟಯರ್ ಸ್ಫೋಟಗೊಂಡು ತೂಫಾನ್ ಪಲ್ಟಿ ಹೊಡೆದಿದೆ.ಈ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಕ್ಲಿಕ್ ಮಾಡಿ ಓದಿ: ನೀರಿಗಾಗಿ ಜಲಾಶಯದ ನಾಲೆ ಒಡೆದ ರೈತರು | ಇಂದು ಹುಳಿಯಾರು – ಹಿರಿಯೂರು ರೈತರ ಸಭೆ

ಬಳ್ಳಾರಿಯ ವಿ.ರಮೇಶ್ (50) ಮೃತ ವ್ಯಕ್ತಿ. ಚಾಲಕ ಸೇರಿ ವಾಹನದಲ್ಲಿದ್ದ 12 ಜನರು ಗಾಯಗೊಂಡಿದ್ದಾರೆ. ಸಾರ್ವಜನಿಕರು ಹೆದ್ದಾರಿ ಆಂಬುಲೆನ್ಸ್ ಮೂಲಕ ಗಾಯಾಳಗಳನ್ನು ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಮೇಶ್ ಅವರು ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ಖಚಿತ ಪಡಿಸಿದ್ದಾರೆ. ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ. ಕುಮಾರಸ್ವಾಮಿ, ಡಿವೈಎಸ್ಪಿ ಟಿ.ಬಿ.ರಾಜಣ್ಣ ಭೇಟಿ ನೀಡಿ ಪರಿಶೀಲಿಸಿದರು.
