Connect with us

    ಮೇ.8 ರಿಂದ 10ರವರೆಗೆ ಮುರುಘಾ ಮಠದಲ್ಲಿ ಬಸವ ಜಯಂತಿ

    ಬಸವಣ್ಣ

    ಮುಖ್ಯ ಸುದ್ದಿ

    ಮೇ.8 ರಿಂದ 10ರವರೆಗೆ ಮುರುಘಾ ಮಠದಲ್ಲಿ ಬಸವ ಜಯಂತಿ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 07 MAY 2024

    ಚಿತ್ರದುರ್ಗ: ನಗರದ ಶ್ರೀ ಮುರುಘಾ ರಾಜೇಂದ್ರ ಬೃಹನ್ಮಠದಲ್ಲಿ ಮೇ 8 ರಿಂದ 10ರವರೆಗೆ ಶ್ರೀ ಬಸವೇಶ್ವರ ಜಯಂತಿ ಆಚರಣೆ.

    ಇದನ್ನೂ ಓದಿ: ರಾಶಿ ಅಡಿಕೆ ಬೆಲೆಯಲ್ಲಿ ಮತ್ತೆ ಚೇತರಿಕೆ | ಚನ್ನಗಿರ, ಶಿವಮೊಗ್ಗ ಮಾರುಕಟ್ಟೆಗಳಲ್ಲಿ ಏರಿಕೆ

    ಮೇ.8ರಂದು ಸಂಜೆ 6 ಗಂಟೆಗೆ ವಚನಕಾರರ ದೃಷ್ಟಿಯಲ್ಲಿ ಬಸವಣ್ಣ ವಿಷಯ ಕುರಿತು ಚಿಂತನಗೋಷ್ಠಿ ನಡೆಯಲಿದೆ. ಬೆಂಗಳೂರು ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ವಿಷಯಾವಲೋಕನ ಮಾಡಲಿದ್ದು, ಸಿಂಧನೂರು ಬಸವಕೇಂದ್ರ ಅಧ್ಯಕ್ಷ ವೀರಭದ್ರಪ್ಪ ಕುರಕುಂದಿ ಭಾಗವಹಿಸುವರು.

    ಮೇ. 9ರಂದು ಬೆಳಿಗ್ಗೆ ವಚನ ಕಂಠಪಾಠ ಸ್ಪರ್ಧೆ, 12ನೇ ಶತಮಾನದ ಬಸವಾದಿ ಶರಣರ ವೇಷಭೂಷಣ ಸ್ಪರ್ಧೆ, ರಂಗೋಲಿ ಸ್ಪರ್ಧೆ ಮತ್ತು ಬಸವಾದಿ ಶಿವಶರಣರ ಕುರಿತಾದ ಭಜನಾ ಸ್ಪರ್ಧೆಗಳು ನಡೆಯಲಿವೆ. ಅದೇದಿನ ಸಂಜೆ 6 ಗಂಟೆಗೆ ಶರಣ ಸ್ಥಳದ ನೆಲೆಯಲ್ಲಿ ಬಸವಣ್ಣ ವಿಷಯ ಕುರಿತು ಚಿಂತನ ಗೋಷ್ಠಿ ನಡೆಯಲಿದ್ದು, ಅಶೋಕ ಬರಗುಂಡಿ ಗದಗ ಇವರು ವಿಷಯಾವಲೋಕನ ಮಾಡುವರು. ಬೆಂಗಳೂರು ಬಸವ ಟಿವಿ ಅಧ್ಯಕ್ಷ ಕೃಷ್ಣಪ್ಪ ಮುಖ್ಯಅತಿಥಿಯಾಗಿ ಭಾಗವಹಿಸುವರು.

    ಇದನ್ನೂ ಓದಿ: ಮುರುಘಾ ಮಠದಲ್ಲಿ ಸಾಮೂಹಿಕ ಕಲ್ಯಾಣ | 16 ಜೋಡಿ ದಾಂಪತ್ಯಕ್ಕೆ ಪಾದರ್ಪಣೆ

    ಮೇ.10 ರಂದು ಬೆಳಿಗ್ಗೆ 9.45 ಗಂಟೆಗೆ ಬಸವತತ್ತ್ವ ಧ್ವಜಾರೋಹಣ ಹಾಗೂ ಬಸವಣ್ಣನವರ ಜಯಂತ್ಯೋತ್ಸವ ನಡೆಯಲಿದೆ. ಶ್ರೀ ಮುರುಘರಾಜೇಂದ್ರ ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ, ಅಧ್ಯಕ್ಷತೆ ವಹಿಸುವರು. ಆಡಳಿತ ಮಂಡಳಿಯ ಸದಸ್ಯರುಗಳಾದ ಡಾ. ಪಿ.ಎಸ್. ಶಂಕರ್, ಚಂದ್ರಶೇಖರ್ ಎಸ್.ಎನ್., ಡಾ. ಬಸವಕುಮಾರ ಸ್ವಾಮಿಗಳು ಭಾಗವಹಿಸುವರು.

    ಶಿವಮೊಗ್ಗದ ಪ್ರಭುದೇವ ಜ್ಞಾನಕೇಂದ್ರದ ಶ್ರೀ ಬಸವ ನವಲಿಂಗ ಶರಣರು ಸಾಂಸ್ಕøತಿಕ ನಾಯಕ ಬಸವಣ್ಣ ಕುರಿತು ವಿಷಯಾವಲೋಕನ ಮಾಡುವರು.

    ಇದನ್ನೂ ಓದಿ: ಸಂಶೋಧಕ ಡಾ.ಬಿ ರಾಜಶೇಖರಪ್ಪ ಅವರಿಗೆ ಪ್ರೊ.ಶಿ.ಚೆ.ನಂದೀಮಠ ಪ್ರಶಸ್ತಿ

    ಮೇ.7 ರಂದು ಬೆಳಗ್ಗೆ 8.30 ರಿಂದ 9.30ರವರೆಗೆ ಆಕಾಶವಾಣಿಯಲ್ಲಿ ಬಸವಣ್ಣನವರ ಧಾರ್ಮಿಕ ಪರಿಕಲ್ಪನೆಗಳು ಮತ್ತು ಪ್ರಯೋಗಶೀಲತೆ ಕುರಿತು ಡಾ. ಲೋಕೇಶ್ ಅಗಸನಕಟ್ಟೆ, ಮೇ.8ರಂದು ಬೆಳಗ್ಗೆ 8.30ರಿಂದ 9.30ರವರೆಗೆ ಬಸವಣ್ಣನವರ ಸಾಮಾಜಿಕ ಚಿಂತನೆಗಳು ಕುರಿತು ಡಾ.ಎನ್.ಮಮತ, ಮೇ 9ರಂದು ಬೆಳಗ್ಗೆ 8.30ರಿಂದ 9.30ರವರೆಗೆ ಬಸವಾದಿ ಶರಣರ ಆರ್ಥಿಕ ಚಿಂತನೆಗಳು ಕುರಿತು ಡಾ.ಟಿ.ಆರ್.ಚಂದ್ರಶೇಖರ್ ಮತ್ತು ಮೇ 10ರಂದು ಬೆಳಗ್ಗೆ 8.30ರಿಂದ 9.30ರವರೆಗೆ ಬಸವಣ್ಣನವರ ಚಿಂತನೆಯ ಪ್ರಸ್ತುತತೆ ಕುರಿತು ಚಂದ್ರಶೇಖರ ತಾಳ್ಯ ಅವರು ಚಿಂತನೆ ನೀಡಲಿದ್ದಾರೆ.

    ಇದನ್ನೂ ಓದಿ: ಈರುಳ್ಳಿ ಬೆಳೆಗಾರರ ಮುಖದಲ್ಲಿ ಮಂದಹಾಸ | ರಫ್ತಿಗೆ ಕೇಂದ್ರ ಸರ್ಕಾರದ ಸಮ್ಮತಿ

    ಕಾರ್ಯಕ್ರಮದಲ್ಲಿ ಶ್ರೀ ಬಸವನವಲಿಂಗ ಶರಣರು ಬರೆದಿರುವ ಜಗಜ್ಯೋತಿ ಬಸವಧರ್ಮ ಗ್ರಂಥ ಬಿಡುಗಡೆಯಾಗಲಿದೆ. ನಾಡಿನ ವಿವಿಧ ಭಾಗಗಳ ಧಾರ್ಮಿಕ ಮುಖಂಡರುಗಳು ಭಾಗವಹಿಸುವರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ಮಠ ಪ್ರಕಟಣೆಯಲ್ಲಿ ತಿಳಿಸಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top