
CHITRADURGA NEWS | 02 JUNE 2026
ಚಿತ್ರದುರ್ಗ: ಕಳೆದ ಎರಡು ತಿಂಗಳಿನಿಂದ ಬೇಸಿಗೆ ರಜೆ ಮಜೆಯಲ್ಲಿದ್ದ ಮಕ್ಕಳಿಗೆ ಮರಳಿ ಶಾಲೆಗೆ ಮರಳುವ ಸಮಯ.
ಇದನ್ನೂ ಓದಿ: ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ
ಈಗಾಗಲೇ ಕೆಲ ಖಾಸಗಿ ಶಾಲೆಗಳು ಒಂದು ವಾರದಿಂದ ಶಾಲೆ ತೆರೆದಿದ್ದು, ಅಧಿಕೃತವಾಗಿ ಸರ್ಕಾರಿ ಹಾಗೂ ಇತರೆ ಖಾಸಗಿ ಶಾಲೆಗಳು ಜೂನ್ ಒಂದರಿಂದ ಶಾಲಾರಂಭ ಮಾಡಿದವು.
ರಜೆ ಮಜೆಯಲ್ಲಿ ಮನೆಯಲ್ಲಿದ್ದ ಮಕ್ಕಳನ್ನು ಶಾಲಾ ವಾತಾವರಣಕ್ಕೆ ತರಲು ಇನ್ನಿಲ್ಲದ ತಯಾರಿ ಮಾಡಿಕೊಂಡಿದ್ದ ಶಿಕ್ಷಣ ಇಲಾಖೆ ಹಾಗೂ ಶಿಕ್ಷಣ ಸಂಸ್ಥೆಗಳು ಮಕ್ಕಳನ್ನು ವರ್ಣರಂಜಿತ ವಾತಾವರಣದಲ್ಲಿ, ಹೂಮಳೆ ಸುರಿಸಿ, ಅವರ ನೆಚ್ಚಿನ ಕಾರ್ಟೂನ್‌ಗಳನ್ನು ಪ್ರವೇಶ ದ್ವಾರದಲ್ಲಿ ಹಾಕಿ, ಬಲೂನು ಕಟ್ಟಿ ಸ್ಮರಣೀಯವಾಗಿಸಿದ್ದರು.
ನಗರದ ಪಾರ್ಶ್ವನಾಥ ವಿದ್ಯಾಸಂಸ್ಥೆಯ ಮಕ್ಕಳನ್ನು ಗುಲಾಬಿ ನೀಡಿ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಸ್ವಾಗತಿಸಿದರು. ಇಡೀ ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ ಮಕ್ಕಳ ಪಾಲಿಗೆ ಹಬ್ಬದಂತೆ ಆಚರಿಸಿದರು.
ಇದನ್ನೂ ಓದಿ: ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
ಈ ವೇಳೆ ವಿದ್ಯಾ ಸಂಸ್ಥೆಯ ಅಧ್ಯಕ್ಷ ಬಾಬುಲಾಲ್‍ಜೀ, ಕಾರ್ಯದರ್ಶಿ ಸುರೇಶ್ ಕುಮಾರಿ ಜೀ, ಉಪಾಧ್ಯಕ್ಷ ಮುಖೇಶ್‍ಜೀ, ಸಹ ಕಾರ್ಯದರ್ಶಿ ಸುರೇಶ್ ಪಟಿಯಾತ್‍ಜೀ, ನಿರ್ದೇಶಕ ಜವೇರಿಲಾಲ್‍ಜೀ ಸೇರಿದಂತೆ ಶಾಲೆಯ ಮುಖ್ಯಸ್ಥರು, ಸಿಬ್ಬಂದಿ, ಪೋಷಕರು ಉಪಸ್ಥಿತರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
