
CHITRADURGA NEWS | 18 JANUARY 2024
ಚಿತ್ರದುರ್ಗ: ಕಾನೂನಿನಲ್ಲಿ ಲಂಚ ಕೊಡುವುದು ಹಾಗೂ ತೆಗೆದುಕೊಳ್ಳುವುದು ಎರಡೂ ಅಪರಾಧ. ಹೀಗಾಗಿ 50 ಲಕ್ಷ ರೂ. ಲಂಚ ಕೊಡಿಸಿದ್ದೇನೆ ಎಂದು ಹೇಳಿರುವ ಹೊಸದುರ್ಗ ಶಾಸಕರಾದ ಬಿ.ಜಿ.ಗೋವಿಂದಪ್ಪ ಅವರ ವಿಚಾರದಲ್ಲಿ ಈಗ ಕಾನೂನು ಮಾತನಾಡಬೇಕಾಗುತ್ತದೆ ಎಂದು ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ ಹೇಳಿದ್ದಾರೆ.
ಹೊಸದುರ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಲಂಚ ಕೊಡಿಸಿರುವುದಾಗಿ ಹೇಳಿಕೆ ನೀಡಿರುವ ಶಾಸಕರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಬೇಕಾದ ಸಂದರ್ಭ ಎದುರಾಗಿದೆ. ನಾನು ಕೂಡಾ ಕಾನೂನು ಕ್ರಮಕ್ಕೆ ಒತ್ತಾಯ ಮಾಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಹೊಸದುರ್ಗ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಮತ್ತೊಂದು ಆಡಿಯೋ ವೈರಲ್
ಬಿ.ಜಿ.ಗೋವಿಂದಪ್ಪ ಅವರು ಮಾಜಿ ಶಾಸಕರಾಗಿದ್ದಾಗ 50 ಲಕ್ಷ ರೂ. ಲಂಚ ಕೊಡಿಸಿದ್ದೆ ಎನ್ನುವ ಹೇಳಿಕೆ ತಾಲೂಕಿನ ಜನರಲ್ಲಿ ಆತಂಕ ಮೂಡಿಸಿದೆ. ಒಬ್ಬ ಜನಪ್ರತಿನಿಧಿಯಾಗಿ ಇಂತಹ ಹೇಳಿಕೆ ನೀಡಿದ್ದಾರೆ. ಕಾನೂನು ಅಡಿಯಲ್ಲಿ ಲಂಚ ಕೊಡುವುದು ತೆಗೆದುಕೊಳ್ಳುವುರು ಎರಡೂ ಅಪರಾಧ. ಹೀಗಾಗಿ ಸರಿಯಾದ ಉತ್ತರ ಕೊಡಬೇಕಾಗಿದೆ ಎಂದರು.
ಗೋವಿಂದಪ್ಪನವರು ಈ ಹಿಂದೆ ಶಾಸಕರಾಗಿದ್ದಾಗ ಮತ್ತು ಈಗ ಅವರದ್ದೇ ಆಡಳಿತಾವಧಿಯಲ್ಲಿ ತಾಲೂಕಿನ ಪ್ರತಿ ಇಲಾಖೆಯಲ್ಲೂ ಲಂಚಾವತಾರ ನಡೆಯುತ್ತಿದೆ. ಬೇಕಾದರೆ ಸಾಕ್ಷ್ಯ ಕೊಡಬಲ್ಲೆ. ಸಾಕಷ್ಟು ಜನ ಬಂದು ನಮ್ಮ ಬಳಿ ಹೇಳಿಕೊಳ್ಳುತ್ತಿದ್ದಾರೆ. ಈಗಲೂ ಭ್ರಷ್ಟಾಚಾರ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಇವರೇ ಲಂಚ ಕೊಡಿಸಿದ್ದೆ ಎನ್ನುತ್ತಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಇದನ್ನೂ ಓದಿ: ಆಡಿಯೋ ಮಾಡಿ ಬಿಡುವುದು ಯಾವ ಗಟ್ಟಿತನ | ನೇರವಾಗಿ ಬಂದು ಮಾತನಾಡಲಿ
ಈ ಹಿಂದೆ ಮಾಜಿ ಶಾಸಕರಾಗಿದ್ದಾಗ, ತಮ್ಮ ಅಳಿಯ ಹಾಗೂ ನೆಂಟರಿಷ್ಟರ ಹೆಸರಿನಲ್ಲಿ ಮಂಜೂರಾಗಿದ್ದ 19 ಕೋಟಿ ರೂ. ಸಾಲಕ್ಕೆ ಮಾರ್ಟ್‍ಗೇಜ್ ಮಾಡಿಸಲು 1 ಲಕ್ಷ ರೂ. ಲಂಚ ಕೊಟ್ಟಿದ್ದೆ ಎಂದು ಒಮ್ಮೆ ಹೇಳಿದ್ದರು. ಈ 19 ಕೋಟಿ ಯಾವ ಜಮೀನು ಹಾಗೂ ಯಾವ ಬ್ಯಾಂಕಿನಲ್ಲಿ ಯಾವ ಆಧಾರದಲ್ಲಿ ಮಂಜೂರಾಗಿದೆ ಎನ್ನುವುದನ್ನು ಜನರಿಗೆ ತಿಳಿಸಬೇಕು ಎಂದು ಲಿಂಗಮೂರ್ತಿ ಒತ್ತಾಯಿಸಿದ್ದಾರೆ.
ಶಾಸಕರು, ಮಾಜಿ ಶಾಸಕರೇ ಲಂಚ ಕೊಟ್ಟಿದ್ದೇವೆ ಎಂದರೆ, ಇವರು ಹೇಗೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತಾರೆ ಎನ್ನುವುದು ತಾಲೂಕಿನ ಜನರ ಪ್ರಶ್ನೆಯಾಗಿದೆ. ಹಾಲಿ ಶಾಸಕರಿಗೆ ಅಧಿಕಾರ ಇದೆ. ಅವರು ಕಡಿವಾಣ ಹಾಕಬೇಕು. ಹಿಂದೆ ಏನು ನಡೆದಿದೆ, ಈಗ ಏನು ನಡೆಯುತ್ತಿದೆ, ತಪ್ಪು ಮಾಡಿದವರಿಗೆ ಶಿಕ್ಷೆಯೂ ಆಗಿದೆ. ಕೆಲವೊಮ್ಮೆ ತಪ್ಪು ಮಾಡಿಯೂ ತಪ್ಪಿಸಿಕೊಂಡವರಿದ್ದಾರೆ ಇದು ಆಡಳಿತದ ವೈಫಲ್ಯ ಎಂದರು.
ಇದನ್ನೂ ಓದಿ: ಹೊಸದುರ್ಗ ಹಾಲಿ-ಮಾಜಿ ಶಾಸಕರ ಟಾಕ್‍ವಾರ್ | ಮುಖಾಮುಖಿ ಚರ್ಚೆಗೆ ಒಪ್ಪಿದ ಗೂಳಿಹಟ್ಟಿ ಶೇಖರ್
ಶಾಸಕರು ಈಗ ಸುಮ್ಮನೆ ಜನರಿಗೆ ಮಂಕುಬೂದಿ ಹಾಕುವಂತೆ ಮಾತನಾಡುವ ಬದಲು ಇವರ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆಯೋ ಇಲ್ಲವೋ ಎನ್ನುವುದನ್ನು ನೋಡಿ ಕ್ರಮ ತೆಗೆದುಕೊಳ್ಳಲಿ.
ನಾನು ಖನಿಜ ನಿಗಮದ ಅಧ್ಯಕ್ಷನಾಗಿದ್ದಾಗ ರೈತರು ಮನೆ ಕಟ್ಟಲು ಹಾಗೂ ದೇವಸ್ಥಾನಗಳ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ ಹಂತದಲ್ಲೇ ಉಚಿತವಾಗಿ ಮರಳು ಕೊಡಬೇಕು ಎಂಬ ನೀತಿ ಮಾಡಲಾಗಿತ್ತು. ಆದರೆ, ಈ ಸರ್ಕಾರದಲ್ಲಿ ಅದು ಜಾರಿಯಾಗಿಲ್ಲ ಎಂದು ಹೇಳಿದರು.
ಮರಳು ದಂಧೆ ಮಾಡುವರ ಮೇಲೆ ಯಾವ ಕೇಸುಗಳನ್ನೂ ಹಾಕಿಲ್ಲ. ಕಣ್ಣೊರೆಸುವ ತಂತ್ರ ಎಂಬಂತೆ ಅಲ್ಲಲ್ಲಿ ಕೆಲ ದೂರು ಬಿಟ್ಟರೆ ಈಗಲೂ ಮರಳು ದಂಧೆ ನಡೆಯುತ್ತಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
