ಮುಖ್ಯ ಸುದ್ದಿ
ಹೊಸದುರ್ಗ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಮತ್ತೊಂದು ಆಡಿಯೋ ವೈರಲ್ | ಡಿಸಿ ದಿವ್ಯಪ್ರಭು ಹಾಗೂ ಹೊಸದುರ್ಗ ಶಾಸಕರ ಬಗ್ಗೆ ಆರೋಪ

CHITRADURGA NEWS | 15 JANUARY 2024
ಚಿತ್ರದುರ್ಗ: ಮಾಜಿ ಸಚಿವ, ಹೊಸದುರ್ಗದ ಮಾಜಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಮತ್ತೊಮ್ಮೆ ಆಡಿಯೋ ಮೂಲಕ ಸದ್ದು ಮಾಡಿದ್ದು, ಜಿಲ್ಲಾಧಿಕಾರಿ ದಿವ್ಯಪ್ರಭು ಹಾಗೂ ಪರೋಕ್ಷವಾಗಿ ಹೊಸದುರ್ಗದ ಹಾಲಿ ಶಾಸಕರು ಹಾಗೂ ಅವರ ಬೆಂಬಲಿಗರ ವಿರುದ್ಧ ಆರೋಪ ಮಾಡಿದ್ದಾರೆ.
ನಾನು ಶಾಸಕನಾಗಿ ಆಡಳಿತ ಪಕ್ಷದಲ್ಲಿದ್ದಾಗ ಹೆಜ್ಜೆ ಹೆಜ್ಜೆಗೂ ಕಿರಿ ಕಿರಿ ಮಾಡುತ್ತಿದ್ದರು. ಆದರೆ, ಈ ಕೇಳುವವರೇ ಇಲ್ಲದಂತಾಗಿದೆ ಎಂದಿರುವ ಆಡಿಯೋ ವೈರಲ್ ಆಗಿದೆ. ಗೂಳಿಹಟ್ಟಿ ಶೇಖರ್ ಅವರ ವಾಟ್ಸಪ್ ಸ್ಟೇಟಸ್‍ನಲ್ಲೂ ಈ ಆಡಿಯೋ ಹಾಕಿಕೊಂಡಿದ್ದಾರೆ.
ಹಿಂದೆ ಟ್ರ್ಯಾಕ್ಟರ್‍ಗಳಲ್ಲಿ ಮಣ್ಣು ಸಾಗಿಸಿದರೂ ಗಣಿ ಇಲಾಖೆಯವರು ಬಂದು ದಂಡ ಹಾಕಿ ದೂರು ದಾಖಲಿಸುತ್ತಿದ್ದರು. ಈಗ ಇಟ್ಟಿಗೆ ಫ್ಯಾಕ್ಟರಿ, ಲೇಔಟ್‍ಗಳಿಗೆ ರಾಜಾರೋಷವಾಗಿ ಮಣ್ಣು, ಮರಳು ಸಾಗಾಣೆ ಮಾಡಿದರೂ ಒಂದೇ ಒಂದು ಕೇಸು ಹಾಕುತ್ತಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮುರುಳಿ ಪುನರಾಯ್ಕೆ
ನಾನು ಶಾಸಕನಾಗಿದ್ದಾಗ ಹೊಸದುರ್ಗದಲ್ಲಿ ಟ್ರ್ಯಾಕ್ಟರ್‍ಗಳಲ್ಲಿ ಮಣ್ಣು ಹೊಡೆದರೆ ಡಿಸಿಗೆ ದೂರು ಹೋಗುತ್ತಿತ್ತು. ಡಿಸಿ ದಿವ್ಯಪ್ರಭು ಮೇಡಂ ಅಲ್ಲಿಂದ ಅಧಿಕಾರಿಗಳನ್ನು ಕಳಿಸಿ ದೂರು ದಾಖಲಿಸುತ್ತಿದ್ದರು.
ಈಗ ಅದೇ ಜಿಲ್ಲಾಧಿಕಾರಿ ಇದ್ದಾರೆ. ಸರ್ಕಾರ, ಶಾಸಕರು ಮಾತ್ರ ಬದಲಾಗಿದ್ದಾರೆ. ಡಿಸಿಗೆ ಯಾವ ದೂರು ಹೋಗುತ್ತಿಲ್ಲ. ಇದೇ ವ್ಯತ್ಯಾಸ. ಹೊಸದುರ್ಗದ ಜನತೆ ಇದನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.
ನಾನು ಶಾಸಕನಾಗಿದ್ದಾಗ ನನ್ನ ತಮ್ಮನೇ ಮಣ್ಣು ಹೊಡಯುತ್ತಿದ್ದಾಗ ತಹಶೀಲ್ದಾರ್ 50 ಸಾವಿರ ದಂಡ ಹಾಕಿದ್ದರು. ನಾನೇ ಸ್ಥಳಕ್ಕೆ ಹೋಗಿ ದಂಡ ಕಟ್ಟಿದ್ದೆ.
ಈಗ ಹೊಸದುರ್ಗ ಸುತ್ತಮುತ್ತಾ ಶಾಸಕರ ಕಡೆಯವರೇ ಲೇಔಟ್ ಮಾಡುತ್ತಿದ್ದಾರೆ. ಅವರಿಗೆ ಮರಳು, ಮಣ್ಣು ಬೇಕಾಗಿದೆ. ಹಾಗಾಗಿ ಹಗಲು ರಾತ್ರಿ, ಮರಳು ಹೊಡೆಯುತ್ತಿದ್ದಾರೆ.
ನೀವೆಲ್ಲಾ 500 ರೂ. ತಗೊಂಡು ಮತ ಹಾಕಿದವರು. ನಿಮಗೆ ಇದೆಲ್ಲಾ ಗೊತ್ತಾಗಲ್ಲ. ನಮ್ಮ ಜನರಿಗೆ ಕೇಳಲು ಹಕ್ಕಿಲ್ಲ ಈಗ ಪಾಪ ಎಂದಿದ್ದಾರೆ.
