
CHITRADURGA NEWS | 01 MARCH 2026
ಚಿತ್ರದುರ್ಗ: ಶೈಕ್ಷಣಿಕ ಪ್ರವಾಸದ ನಿಮಿತ್ತ ಉತ್ತರಖಂಡ ರಾಜ್ಯದ ತೆಹ್ರಿ ಗರ್ವಾಲ್ ಜಿಲ್ಲೆ ಡಯಟ್ ಪ್ರಾಚಾರ್ಯರು ಮತ್ತು ಉಪನ್ಯಾಸಕರ ತಂಡ ಕರ್ನಾಟಕದ ವಿವಿಧ ಡಯಟ್ಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದೆ.
ಇದನ್ನೂ ಓದಿ: ಕುಡಿಯಲು ಹಣ ಕೊಡದಿದ್ದಕ್ಕೆ ಹೆತ್ತ ತಾಯಿಯನ್ನೇ ಕೊಂದ ಪಾಪಿಗೆ ಜೀವಾವಧಿ ಶಿಕ್ಷೆ

ಚಿತ್ರದುರ್ಗ ಡಯಟ್ಗೆ ಭೇಟಿ ನೀಡಿ ಶೈಕ್ಷಣಿಕ ಚಟುವಟಿಕೆಗಳ ಮಾಹಿತಿ ಪಡೆದರು. ಕವಾಡಿಗರಹಟ್ಟಿ ಪಿ.ಎಂ.ಶ್ರೀ ಸ.ಹಿ.ಪ್ರಾ.ಶಾಲೆಗೆ ಭೇಟಿ ನೀಡಿ ಮಕ್ಕಳ ಕಲಿಕಾ ಚಟುವಟಿಕೆ ವೀಕ್ಷಿಸಿದರು.
ಈ ವೇಳೆ ತೆಹ್ರಿ ಡಯಟ್ನ ಪ್ರಾಚಾರ್ಯ ಸುಮೆರ್ ಸಿಂಗ್ ಮಾತನಾಡಿ, ಶಾಲೆಯಲ್ಲಿ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರ ನಡುವೆ ಸಹಕಾರ, ಸಮನ್ವಯತೆ ಅತ್ಯುತ್ತಮವಾಗಿದೆ. ಮಕ್ಕಳ ಕಲಿಕೆ, ಆತ್ಮವಿಶ್ವಾಸದಿಂದ ಓದುವ, ಕಲಿಕಾ ಚಟುವಟಿಕೆಗಳಲ್ಲಿ ಭಾಗವಹಿಸುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರದುರ್ಗ ಜಿಲ್ಲೆಯ ಆಹಾರ ಪದ್ಧತಿ ಮತ್ತು ಸಂಸ್ಕೃತಿ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ದ್ವಿತೀಯ ಪಿಯುಸಿ | ಕನ್ನಡ ಪರೀಕ್ಷೆಯಲ್ಲಿ 291 ವಿದ್ಯಾರ್ಥಿಗಳು ಗೈರು
ಚಿತ್ರದುರ್ಗ ಡಯೆಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್, ಉಪ ಪ್ರಾಚಾರ್ಯ ಎಸ್.ನಾಗಭೂಷಣ್, ಉಪನ್ಯಾಸಕ ಎಸ್.ಬಸವರಾಜು, ಸಿ.ಆರ್.ಪಿ ತಿಮ್ಮರಾಜು, ತೆಹ್ರಿ ಡಯಟ್ನ ಉಪನ್ಯಾಸಕರಾದ ದೇವೇಂದ್ರ ಸಿಂಗ್, ದೀಪಕ್ ರತನ್, ಡಾ.ವೀರ್ಸಿಂಗ್ ಡಾ.ಮನ್ವೀರ್ ಸಿಂಗ್, ವಿನೋದ್ ಪ್ರಸಾದ್, ರಾಜೇಂದ್ರ ಪ್ರಸಾದ್, ಸುಮನ್, ಸೀಮಾ ಶರ್ಮಾ, ನಿರ್ಮಲಾ ಸಿಂಗ್, ಮುಖ್ಯ ಶಿಕ್ಷಕ ರುದ್ರಮುನಿ ಮತ್ತು ಶಿಕ್ಷಕರು ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
