CHITRADURGA NEWS | 01 MARCH 2026
ಚಿತ್ರದುರ್ಗ: ಮಹಾತ್ಮ ಗಾಂಧಿಜೀಯವರ ಆಶಯದಂತೆ ಪ್ರತಿ ಗ್ರಾಮದಲ್ಲೂ ಒಂದು ಶಾಲೆ, ಒಂದು ಗ್ರಾಮ ಪಂಚಾಯಿತಿ ಹಾಗೂ ಒಂದು ಸಹಕಾರ ಸಂಘವಿದ್ದರೆ ಗ್ರಾಮಾಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಜೆ.ಆರ್.ರವಿಕುಮಾರ್ ತಿಳಿಸಿದರು.
ಇದನ್ನೂ ಓದಿ: ಕುಡಿಯಲು ಹಣ ಕೊಡದಿದ್ದಕ್ಕೆ ಹೆತ್ತ ತಾಯಿಯನ್ನೇ ಕೊಂದ ಪಾಪಿಗೆ ಜೀವಾವಧಿ ಶಿಕ್ಷೆ
ನಗರದ ಸಹಕಾರ ಭವನದಲ್ಲಿ ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲೆಯಲ್ಲಿನ ಎಲ್ಲಾ ಸಹಕಾರ ಸಂಘಗಳಿಗೆ ಮಾತೃ ಸಂಸ್ಥೆಯಾಗಿದೆ. ಜಿಲ್ಲೆಯ 1087 ಸಹಕಾರ ಸಂಘಗಳಿಗೆ ಸಹಕಾರ ಶಿಕ್ಷಣ ತರಬೇತಿ ಮತ್ತು ಪ್ರಚಾರ ಮಾಡುವುದು ಮೂಲ ಉದ್ದೇಶವಾಗಿದೆ ಎಂದರು.
ಜಿಲ್ಲೆಯಲ್ಲಿ 1087 ಸಹಕಾರ ಸಂಘಗಳಲ್ಲಿ 779 ಮಾತ್ರ ಕಾರ್ಯನಿರತವಾಗಿದ್ದು, ಇನ್ನುಳಿದ ಸಹಕಾರ ಸಂಘಗಳು ಸ್ಥಗಿತ ಮತ್ತು ಸಮಾಪನೆಗೊಂಡಿವೆ. ನೂತನ ಸಹಕಾರ ಕಾಯ್ದೆ ತಿದ್ದುಪಡಿ ಪ್ರಕಾರ ಎಲ್ಲಾ ಸಹಕಾರ ಸಂಘಗಳು ಜಿಲ್ಲಾ ಸಹಕಾರ ಯೂನಿಯನ್ನಿಗೆ ಕಡ್ಡಾಯವಾಗಿ ಸದಸ್ಯತ್ವನ್ನು ಕಡ್ಡಾಯವಾಗಿ ಹೊಂದಲು ತಿಳಿಸಿದರು.
ಇದನ್ನೂ ಓದಿ: ದ್ವಿತೀಯ ಪಿಯುಸಿ | ಕನ್ನಡ ಪರೀಕ್ಷೆಯಲ್ಲಿ 291 ವಿದ್ಯಾರ್ಥಿಗಳು ಗೈರು
ಜಿಲ್ಲೆಯಲ್ಲಿ 779 ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿಯವರೆಗೆ ಯೂನಿಯನ್ನಿಗೆ ಕೆವಲ 352 ಸಹಕಾರ ಸಂಘಗಳು ಸದಸ್ಯತ್ವವನ್ನ ಹೊಂದಿದ್ದು, ಇನ್ನು 427 ಸಹಕಾರ ಸಂಘಗಳು ಬಾಕಿ ಉಳಿದುಕೊಂಡಿವೆ. ಎಲ್ಲರೂ ಜಿಲ್ಲಾ ಸಹಕಾರ ಯೂನಿಯನ್ ಸದಸ್ಯತ್ವ ಹೊಂದುವ ಮೂಲಕ ಇಲ್ಲಿ ನೀಡುವ ಮಾಹಿತಿ, ತರಬೇತಿಗಳನ್ನು ಪಡೆಯಲು ಮನವಿ ಮಾಡಿದರು.
ಯೂನಿಯನ್ ನಿರ್ದೇಶಕ ಆರ್.ಮಲ್ಲೇಶಪ್ಪ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಚುನಾವಣೆ ನಡೆದಿದ್ದು, ಹೊಸದಾಗಿ ಆಯ್ಕೆಯಾದ ಆಡಳಿತ ಮಂಡಳಿಗೆ ಸಹಕಾರ ಸಂಘಗಳ ಕಾಯ್ದೆ, ಕಾನೂನುಗಳ ತಿದ್ದುಪಡಿ ಬಗ್ಗೆ ಮಾಹಿತಿ ಇದ್ದರೆ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದು ತಿಳಿಸಿದರು.
ಸಹಕಾರ ಸಂಘಗಳು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಾಹಕಋ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಅದನ್ನು ಅರ್ಥ ಮಾಡಿಕೊಂಡು ಸಂಘವನ್ನು ಮುನ್ನಡೆಸಬೇಕು ಎಂದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಫೆಬ್ರವರಿ 28 | ಹತ್ತಿ ರೇಟ್ ಎಷ್ಟಿದೆ?
ನಿರ್ದೇಶಕ ಆರ್.ರಾಮರೆಡ್ಡಿ ಮಾತನಾಡಿ, ಸಹಕಾರ ಯೂನಿಯನ್ ಎಲ್ಲಾ ಸಹಕಾರ ಸಂಘಗಳಿಗೆ ನಿರಂತರ ತರಬೇತಿಯನ್ನು ಆಯೋಜಿಸುತ್ತಿದ್ದೇವೆ. ಚಳ್ಳಕೆರೆ, ಹಿರಿಯೂರು ಮತ್ತು ಮೊಳಕಾಲ್ಮೂರು ತಾಲ್ಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಬಂದಿರುವ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಾಹಕರುಗಳು ಈ ಕಾರ್ಯಾಗಾರವನ್ನು ಅರ್ಥ ಮಾಡಿಕೊಂಡು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಹೆಚ್.ಎಂ.ಮಂಜುನಾಥಪ್ಪ, ಸಹಾಯಕ ನಿಬಂಧಕ ರಮೇಶ್ ಹೆಚ್. ಉಪನ್ಯಾಸಕ ವಿ.ಜಿ.ಕುಲಕರ್ಣಿ, ಮುಖ್ಯ ಕಾರ್ಯನಿರ್ವಹಣಾಧಿಮಾರಿ ಜಯಶ್ರೀ ಪಿ. ಹುನಗುಂದ, ವ್ಯವಸ್ಥಾಪಕಿ ಸೌಮ್ಯ ಉಪಸ್ಥಿತರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
