By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ಡಿಜಿಟಲ್ ಡೆಮಾಗ್ರಫಿ ಮತ್ತು ಆರ್ಟಿಫಿಷಿಯಲ್ ಇನ್‌ಟೆಲಿಜನ್ಸ್ ಕಾರ್ಯಾಗಾರ
    ಡಿಜಿಟಲ್ ಡೆಮಾಗ್ರಫಿ ಮತ್ತು ಆರ್ಟಿಫಿಷಿಯಲ್ ಇನ್‌ಟೆಲಿಜನ್ಸ್ ಕಾರ್ಯಾಗಾರ ಯಶಸ್ವಿ
    11 hours ago
    ವಿಧಾನಸಭಾ ಕ್ಷೇತ್ರದ ಬಿಜೆಪಿ ನಗರ ಮಂಡಲದ ಮಾಸಿಕ ಸಭೆ
    ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ನಗರ ಮಂಡಲದ ಮಾಸಿಕ ಸಭೆ 
    11 hours ago
    Rain
    ಕೋಟೆನಾಡಿಗೆ ಕಾಲಿಟ್ಟ ಮುಂಗಾರು ಮಳೆ | ಹದವಾಗಿ ಸುರಿದ ರೋಹಿಣಿ
    11 hours ago
    Rudset Institute
    ರುಡ್‍ಸೆಟ್‍ | ಉಚಿತ ಸಮಗ್ರ ಕೃಷಿ ತರಬೇತಿ
    17 hours ago
    ಸಾವಯವ ಕೃಷಿ ಮತ್ತು ಜೇನು ಕೃಷಿ ಕುರಿತು ತರಬೇತಿ
    ಸಾವಯುವ ಕೃಷಿ ಪದ್ದತಿಯಿಂದ ಮುಂದಿನ ಪೀಳಿಗೆ ದಾರಿದೀಪ | ಸಹಾಯಕ ಕೃಷಿ ನಿರ್ದೇಶಕ ರಜನೀಕಾಂತ
    17 hours ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    ಚಿತ್ರದುರ್ಗ ಅಪರಾಧ
    ಜಾನುಕೊಂಡ ಬಳಿ ಭೀಕರ ಅಪಘಾತ | ಇಬ್ಬರು ಕುರಿಗಾಯಿಗಳು, 14 ಕುರಿ ಧಾರುಣ ಸಾವು
    3 days ago
    Accident near molakalmuru
    ಮೊಳಕಾಲ್ಮೂರು ಬಳಿ ಮತ್ತೊಂದು ಅಪಘಾತ | ಚಳ್ಳಕೆರೆಯ 5 ಜನ ಸಾವು | ಒಂದೇ ದಿನದ ಅಂತರದಲ್ಲಿ ಜಿಲ್ಲೆಯಲ್ಲಿ ಹತ್ತು ಸಾವು
    1 week ago
    ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ | 5 ಜನರ ದುರ್ಮರಣ
    2 weeks ago
    Accident between bike and car
    ಬೈಕ್‌ – ಕಾರು ನಡುವೆ ಅಪಘಾತ | ಸ್ಥಳದಲ್ಲೇ ಇಬ್ಬರು ಮೃತ
    2 weeks ago
    ಬೈಕ್ – ಕಾರ್ ನಡುವೆ ಭೀಕರ ಅಪಘಾತ | ಬೈಕ್ ಸವಾರರು ಇಬ್ಬರು ಸಾವು
    2 months ago
  • ತಾಲೂಕು
    ತಾಲೂಕುShow More
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ 
    6 days ago
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    6 days ago
    ವಾಲಿಬಾಲ್ ಹೊನಲು ಬೆಳಕಿನ ಪಂದ್ಯಾವಳಿ
    ಸೋಲು ಮುಂದಿನ ಗೆಲುವಿಗೆ ಪ್ರೇರಣೆ | ಸಾಣೇಹಳ್ಳಿ ಶ್ರೀ 
    2 weeks ago
    ರಂಗಶಾಲಾ ನಾಟಕೋತ್ಸವ
    ಸಾಣೇಹಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ರಂಗಶಾಲಾ ನಾಟಕೋತ್ಸವ
    2 weeks ago
    ಕುಂಚಿಟಿಗ ಮಠದಲ್ಲಿ ವಿಶ್ವ ತಾಯಂದಿರ ದಿನಾಚರಣೆ
    ತಾಯಂದಿರ ದಿನಾಚರಣೆ ವಿಶೇಷ | ಕುಂಚಿಟಿಗ ಮಠದಲ್ಲಿ ಮಾತೃ ಸಂಗಮ
    4 weeks ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    ARECANUT RATE
    ಅಡಿಕೆ ಧಾರಣೆ | 6 ಜೂನ್‌ | ಭೀಮಸಮುದ್ರ, ಚನ್ನಗಿರಿ, ತೀರ್ಥಹಳ್ಳಿ ಹಾಗೂ ರಾಜ್ಯದ ಅಡಿಕೆ ರೇಟ್‌
    1 day ago
    ARECANUT RATE
    ಅಡಿಕೆ ಧಾರಣೆ | 5 ಜೂನ್‌ | ಇಂದಿನ ಅಡಿಕೆ ಮಾರುಕಟ್ಟೆ ವಿವರ
    2 days ago
    ARECANUT RATE
    ಭೀಮಸಮುದ್ರ, ಚನ್ನಗಿರಿ, ತೀರ್ಥಹಳ್ಳಿ, ಸಾಗರ ಹಾಗೂ ರಾಜ್ಯದ ಅಡಿಕೆ ರೇಟ್‌
    3 days ago
    ARECANUT RATE
    ಅಡಿಕೆ ಧಾರಣೆ | 4 ಜೂನ್‌ | ಇಂದಿನ ರಾಶಿ, ಚಾಲಿ, ಕೆಂಪಡಕೆ ರೇಟ್‌
    4 days ago
    Adike rate
    ಅಡಿಕೆ ಧಾರಣೆ | 2 ಜೂನ್‌ | ಯಾವ ಅಡಿಕೆಗೆ ಎಷ್ಟು ರೇಟ್‌ ?
    5 days ago
  • Dina Bhavishya
    Dina BhavishyaShow More
    ದಿನ ಭವಿಷ್ಯ
    ದಿನ ಭವಿಷ್ಯ | ಜೂನ್ 07 | ಪ್ರಯಾಣದಲ್ಲಿ ಅಡೆತಡೆಗಳು, ಆರೋಗ್ಯದ ಕಡೆ ಜಾಗೃತಿ ವಹಿಸಿ
    23 hours ago
    ದಿನ ಭವಿಷ್ಯ
    ದಿನ ಭವಿಷ್ಯ | ಜೂನ್ 06 | ಉದ್ಯೋಗಗಳಲ್ಲಿ ನಿರುತ್ಸಾಹ ವಾತಾವರಣ, ಕೈಗೊಂಡ ಕೆಲಸದಲ್ಲಿ ಯಶಸ್ಸು
    2 days ago
    ದಿನ ಭವಿಷ್ಯ
    ದಿನ ಭವಿಷ್ಯ | ಜೂನ್ 05 | ಉದ್ಯೋಗಿಗಳಿಗೆ ಅಧಿಕಾರಿಗಳ ಬೆಂಬಲ, ವ್ಯವಹಾರದಲ್ಲಿ ನಿರೀಕ್ಷಿತ ಪ್ರಗತಿ
    3 days ago
    ದಿನ ಭವಿಷ್ಯ
    ದಿನ ಭವಿಷ್ಯ | ಜೂನ್ 04 | ವೃತ್ತಿಪರ ವ್ಯವಹಾರಗಳಲ್ಲಿ ಲಾಭ, ದೂರ ಪ್ರಯಾಣದ ಸೂಚನೆ
    4 days ago
    ದಿನ ಭವಿಷ್ಯ
    ದಿನ ಭವಿಷ್ಯ | ಜೂನ್ 03 | ಮಾನಸಿಕ ಒತ್ತಡ, ಅರೋಗ್ಯದಲ್ಲಿ ಜಾಗೃತಿ ವಹಿಸಿ
    5 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಜೂನ್ 05 | ಮೆಕ್ಕೆಜೋಳ, ರಾಗಿ, ಶೇಂಗಾ ರೇಟ್..
    3 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಜೂನ್ 01 | ಮೆಕ್ಕೆಜೋಳ, ರಾಗಿ ರೇಟ್..
    7 days ago
    ಮಾರುಕಟ್ಟೆ ಧಾರಣೆ
    ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್..
    1 week ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಮೇ.29 | ಮೆಕ್ಕೆಜೋಳ, ರಾಗಿ, ಶೇಂಗಾ ರೇಟ್..
    1 week ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಮೇ.27 | ರಾಗಿ, ಶೇಂಗಾ ರೇಟ್..
    2 weeks ago
  • ಹೊಳಲ್ಕೆರೆ
    ಹೊಳಲ್ಕೆರೆShow More
    ಆರೋಗ್ಯ ಕ್ಷೇಮ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
    ನೂತನ ಆರೋಗ್ಯ ಕ್ಷೇಮ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಚಂದ್ರಪ್ಪ ಭೂಮಿಪೂಜೆ 
    3 days ago
    ಸಿ.ಸಿ.ರಸ್ತೆ ಕಾಮಗಾರಿಗೆ ಭೂಮಿ ಪೂಜೆ
    ಮೂರ್ನಾಲ್ಕು ದಿನಗಳಲ್ಲೇ ತಾಳಿಕಟ್ಟೆ ಕೆರೆಗೆ‌ ನೀರು | ಶಾಸಕ‌ ಎಂ.ಚಂದ್ರಪ್ಪ
    1 week ago
    ಪೂರ್ವಭಾವಿ ಸಭೆ
    ಹೊಳಲ್ಕೆರೆ ಜಿಲ್ಲೆಯಲ್ಲಿಯೇ ಮಾದರಿ ಕ್ಷೇತ್ರ | ಶಾಸಕ ಎಂ.ಚಂದ್ರಪ್ಪ 
    1 month ago
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ | ಸಿದ್ಧಯ್ಯನಕೋಟೆ ಶ್ರೀ, ಎಚ್.ಆಂಜನೇಯ ಭಾಗೀ 
    2 months ago
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ 
    2 months ago
  • ಹಿರಿಯೂರು
    ಹಿರಿಯೂರುShow More
    Babburu Horticulture college
    ಕೃಷಿ ಪ್ರಾಯೋಗಿಕ ಮರು ಪರೀಕ್ಷೆ ಜೂನ್ 1ಕ್ಕೆ ನಿಗದಿ
    2 weeks ago
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    2 months ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    4 months ago
    Power Cut chitradurga News (3)
    ಹಿರಿಯೂರು | ಇಂದು ವಿದ್ಯುತ್ ವ್ಯತ್ಯಯ
    4 months ago
    Shree SHADAKSHARAMUNI SWAMIJI
    ಆದಿಜಾಂಬವ ಶಾಖಾ ಮಠದ ಹೆಸರಿನ ಸಭೆಗೆ ನಮ್ಮ ಸಮ್ಮತಿ ಇಲ್ಲ | ದಾವಣಗೆರೆಯಲ್ಲಿ ಫೆ.14 ರಂದು ಕರೆದಿರುವ ಸಭೆಗೆ ಸ್ಪಷ್ಟೀಕರಣ | ಶ್ರೀ ಷಡಾಕ್ಷರಮುನಿ ಸ್ವಾಮೀಜಿ
    4 months ago
  • ಹೊಸದುರ್ಗ
    ಹೊಸದುರ್ಗShow More
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ 
    6 days ago
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    6 days ago
    ವಾಲಿಬಾಲ್ ಹೊನಲು ಬೆಳಕಿನ ಪಂದ್ಯಾವಳಿ
    ಸೋಲು ಮುಂದಿನ ಗೆಲುವಿಗೆ ಪ್ರೇರಣೆ | ಸಾಣೇಹಳ್ಳಿ ಶ್ರೀ 
    2 weeks ago
    ರಂಗಶಾಲಾ ನಾಟಕೋತ್ಸವ
    ಸಾಣೇಹಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ರಂಗಶಾಲಾ ನಾಟಕೋತ್ಸವ
    2 weeks ago
    ಕುಂಚಿಟಿಗ ಮಠದಲ್ಲಿ ವಿಶ್ವ ತಾಯಂದಿರ ದಿನಾಚರಣೆ
    ತಾಯಂದಿರ ದಿನಾಚರಣೆ ವಿಶೇಷ | ಕುಂಚಿಟಿಗ ಮಠದಲ್ಲಿ ಮಾತೃ ಸಂಗಮ
    4 weeks ago
  • Life Style
    Life StyleShow More
    Purple seed powder
    ಖಾಲಿ ಹೊಟ್ಟೆಯಲ್ಲಿ ನೇರಳೆ ಬೀಜದ ಪುಡಿಯನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ಕುಡಿದರೆ ಏನಾಗುತ್ತದೆ ಗೊತ್ತಾ?
    22 hours ago
    rose water
    ರೋಸ್ ವಾಟರ್ ಬೆರೆಸಿದ ನೀರಿನಲ್ಲಿ ಸ್ನಾನ ಮಾಡಿದರೆ ಈ ಪ್ರಯೋಜನ ಪಡೆಯಬಹುದು
    23 hours ago
    Apply beetroot to your hair
    ಕೂದಲಿಗೆ ಬೀಟ್‌ರೂಟ್ ಹಚ್ಚಿ ಈ ಅದ್ಭುತ ಪ್ರಯೋಜನಗಳನ್ನು ಪಡೆಯಿರಿ
    2 days ago
    eat mango during pregnancy
    ಗರ್ಭಾವಸ್ಥೆಯಲ್ಲಿ ಮಾವು ತಿನ್ನುವುದು ಸುರಕ್ಷಿತವೇ? 
    2 days ago
    mango or mango fruit
    ಮಾವಿನ ಕಾಯಿ ಮತ್ತು ಮಾವಿನ ಹಣ್ಣಿನಲ್ಲಿ ಯಾವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ?
    3 days ago
Reading: ನಾಳೆಯಿಂದ ತೋಟಗಾರಿಕೆ ಇಲಾಖೆಯಲ್ಲಿ ಫಲ-ಪುಷ್ಪ ಪ್ರದರ್ಶನ | ಈ ಬಾರಿ ಏನೇನು ಇರಲಿದೆ.. ಸಿಇಒ ಕೊಟ್ರು ಮಾಹಿತಿ
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

ನಾಳೆಯಿಂದ ತೋಟಗಾರಿಕೆ ಇಲಾಖೆಯಲ್ಲಿ ಫಲ-ಪುಷ್ಪ ಪ್ರದರ್ಶನ | ಈ ಬಾರಿ ಏನೇನು ಇರಲಿದೆ.. ಸಿಇಒ ಕೊಟ್ರು ಮಾಹಿತಿ

News Desk Chitradurga News
Last updated: 19 February 2026 19:37
News Desk Chitradurga News
4 months ago
Share
33ನೇ ಫಲ-ಪುಷ್ಪ ಪ್ರದರ್ಶನ ಕುರಿತು ಪತ್ರಿಕಾಗೋಷ್ಠಿ
33ನೇ ಫಲ-ಪುಷ್ಪ ಪ್ರದರ್ಶನ ಕುರಿತು ಪತ್ರಿಕಾಗೋಷ್ಠಿ
SHARE

CHITRADURGA NEWS | 19 FEBRUARY 2026

ಚಿತ್ರದುರ್ಗ: ಚಿತ್ರದುರ್ಗ ನಗರದ ವಿ.ಪಿ.ಬಡಾವಣೆಯಲ್ಲಿರುವ ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದಲ್ಲಿ ಇದೇ ಫೆಬ್ರವರಿ 20 ರಿಂದ 22 ರವರೆಗೆ ಮೂರು ದಿನಗಳ ಕಾಲ 33ನೇ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ತಿಳಿಸಿದರು.

ಇದನ್ನೂ ಓದಿ: ಆಕಾಶವಾಣಿಯಲ್ಲಿ ಅರೆಕಾಲಿಕ ವರದಿಗಾರರ ಹುದ್ದೆ | ಅರ್ಜಿ ಅಹ್ವಾನ

ನಗರದ ಜಿಲ್ಲಾ ತೋಟಗಾರಿಕೆ ಕಚೇರಿಯಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ, ಜಿಲ್ಲಾ ತೋಟಗಾರಿಕೆ ಸಂಘದ ಸಂಯುಕ್ತಾಶ್ರಯದಲ್ಲಿ 33ನೇ ಫಲ-ಪುಷ್ಪ ಪ್ರದರ್ಶನ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ ಹೊರಮಠ, ಒಳಮಠ ದೃಶ್ಯ ಹಾಗೂ ಶ್ರೀ ತಿಪ್ಪೇರುದ್ರಸ್ವಾಮಿಯವರ ಭವ್ಯ ಕಲಾಕೃತಿ, ಸಾಹಿತಿ ಬಿ.ಎಲ್. ವೇಣು, ಜಾನೂರ್ ಕಲಾಕೃತಿಗಳು, ಐತಿಹಾಸಿಕ ಕೋಟೆ, ಒಂಟಿಕಲ್ಲು ಬಸವಣ್ಣ ಹಾಗೂ ವೀರವನಿತೆ ಒನಕೆ ಓಬವ್ವರ ಮರಳು ಕಲೆ ಪ್ರದರ್ಶನ, ಜೇನು ನೊಣಗಳ ಪರಾಗಸ್ಪರ್ಶ ಕಲಾಕೃತಿ, ಸಾಲುಮರದ ತಿಮ್ಮಕ್ಕ ಕಲಾಕೃತಿಗಳು 33ನೇ ಫಲ-ಪುಷ್ಪ ಪ್ರದರ್ಶನದ ಈ ಬಾರಿಯ ವಿಶೇಷ ಆಕರ್ಷಣೆ ಆಗಲಿದೆ ಎಂದು ತಿಳಿಸಿದರು.

ಜಿಲ್ಲಾ ಫಲ-ಪುಷ್ಪ ಪ್ರದರ್ಶನವನ್ನು ಪ್ರತಿ ವರ್ಷವೂ ಆಚರಿಸುತ್ತಿದ್ದು, ವಿವಿಧ ಜಾತಿಯ ಹೂಗಳು, ಹಣ್ಣುಗಳು, ತರಕಾರಿಗಳು, ಮತ್ತು ಹಲವು ವಿಶೇಷ ಬಗೆಯ ಅಲಂಕಾರಿಕಾ ಗಿಡಗಳನ್ನು ಬೆಳೆಸಿ ಪ್ರದರ್ಶಿಸಲಾಗುತ್ತಿದೆ. ಫಲ-ಪುಷ್ಪ ಪ್ರದರ್ಶನದಲ್ಲಿ ಹೂವಿನ ಗಿಡಗಳ ಬೃಹತ್ ಪ್ರದರ್ಶನ, ಕುಬ್ಜ ಮರ ಗಿಡಗಳು, ತರಕಾರಿ ಕೆತ್ತನೆ, ಅಲಂಕಾರಿಕಾ ಗಿಡಗಳ ಜೋಡಣೆ ಹಾಗೂ ಜಿಲ್ಲೆಯ ರೈತರು ಬೆಳೆದಿರುವ ಹಣ್ಣು ಮತ್ತು ತರಕಾರಿಗಳ ಪ್ರದರ್ಶನ ಏರ್ಪಡಿಸಿ, ವಿವಿಧ ಸ್ಪರ್ಧೆಗಳನ್ನೂ ಸಹ ಹಮ್ಮಿಕೊಳ್ಳಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಫೆಬ್ರವರಿ 19 | ಹತ್ತಿ ರೇಟ್ ಎಷ್ಟಿದೆ?

ಜಟಕಾ ಬಂಡಿ (ಟಾಂಗಾ), ಹುಡುಗ, ಹುಡುಗಿ, ಟಾಂಗಾ ಹಾಗೂ ಕುದುರೆ ಕಲಾಕೃತಿಗಳಿಗೆ ಹೂವಿನಿಂದ ಅಲಂಕಾರ ಮಾಡಿ ವಿಶೇಷವಾಗಿ ಪ್ರದರ್ಶಿಸಲಾಗುವುದು. ಚಿತ್ರದುರ್ಗ ಕೋಟೆಯ ಆಕರ್ಷಣೆಗಳಲ್ಲಿ ಒಂದಾದ ಉಯ್ಯಾಲೆ ಕಂಬದ ಕಲಾಕೃತಿಯನ್ನು ವಿಶೇಷವಾಗಿ ಪ್ರದರ್ಶಿಸಲಾಗುವುದು. 

ಕ್ರಿಕೆಟ್ ಪ್ರಿಯರಿಗೆ ಮನರಂಜನೆಗೋಸ್ಕರ ಪ್ರಸ್ತುತ ನಡೆಯುತ್ತಿರುವ ಟಿ-20 ವಲ್ರ್ಡ್ ಕಪ್‍ನಲ್ಲಿ ಆಡುತ್ತಿರುವ ನಮ್ಮ ಭಾರತ ತಂಡಕ್ಕೆ ಗೆಲುವು ಸಾಧಿಸಲು ಶುಭಾಷಯ ಕೋರುವ ಪರಿಕಲ್ಪನೆಯ ಉದ್ದೇಶದಿಂದ ತಂಡದ ಸದಸ್ಯರ ಮುಖಗಳ ಕಲಾಕೃತಿಗಳನ್ನು ಕಲ್ಲಂಗಡಿಯಲ್ಲಿ ಕೆತ್ತನೆ ಮಾಡಿ ಪ್ರದರ್ಶಿಸಲಾಗುವುದು. 

ಜಿಲ್ಲೆಯ ರೈತರು ಬೆಳೆದಿರುವ ಹೂ, ತರಕಾರಿ, ಹಣ್ಣು, ಹಾಗೂ ಇತರೆ ವಿಶೇಷವಾದ ತೋಟಗಾರಿಕೆ ಉತ್ಪನ್ನಗಳನ್ನು ಫಲ-ಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು. ಸುಮಾರು 500 ಕ್ಕೂ ಹೆಚ್ಚು ವಿವಿಧ ಜಾತಿಯ ಉತ್ಪನ್ನಗಳನ್ನು ಪ್ರದರ್ಶಿಸಲು ತೀರ್ಮಾನಿಸಲಾಗಿರುತ್ತದೆ. ಉತ್ತಮವಾಗಿ ಬೆಳೆದ ರೈತರಿಗೆ ಬಹುಮಾನಗಳನ್ನು ಕೊಡುವುದರಿಂದ ತೋಟಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಮತ್ತಷ್ಟು ಉತ್ತೇಜನ ನೀಡಿದಂತಾಗುತ್ತದೆ ಎಂದರು.

ಇದನ್ನೂ ಓದಿ: ಬಸವ ಜಯಂತಿ ಆರಂಭಿಸಿದ ಹರ್ಡೇಕರ್ ಮಂಜಪ್ಪ | 140ನೇ ಜಯಂತಿ ಆಚರಣೆ

ಫಲ-ಪುಷ್ಪ ಪ್ರದರ್ಶನದಲ್ಲಿ ವಿವಿಧ ಪುಷ್ಪ ಜೋಡಣೆಗಳಿಗೆ ಹಲವು ಬಗೆಯ ವಿಶೇಷ ಹೂಗಳನ್ನು ಬಳಸುತ್ತಿರುವುದರ ಜೊತೆಗೆ ಕುಂಡದಲ್ಲಿ ಬೆಳೆದ ಚಿತ್ತಾಕರ್ಷಕ ವರ್ಣಗಳಿಂದ ಕೂಡಿದ ಸುಮಾರು 70 ಕ್ಕೂ ಹೆಚ್ಚು ಬಗೆಯ ವಿವಿಧ ಜಾತಿಯ ಹೂವಿನಗಿಡಗಳನ್ನು ಬೆಳಯಲಾಗಿದೆ. 

ಮೆಲಾಪೋಡಿಯಂ, ಕ್ಲಿಯೋಂ (ಸ್ಪೈಡರ್), ಹಾಲಿಯಾಕ್, ಗಾಕ್ಸೀನಿಯ, ಕೆಲಂಚಾ, ಇಂಪೇಷನ್ಸ್ (ಮಿಕ್ಸ್‍ಡ್), ಡಾಲಿಯಾ, ಸಾಲ್ವಿಯಾ (ಕೆಂಪು, ನೀಲಿ, ಬಿಳಿ,) ಚೆಂಡು ಹೂ, ಚಿಂತಾಮಣಿ ಚೆಂಡು ಹೂ, ಪೆಟೂನಿಯಾ (ಸಿಂಗಲ್ ಮತ್ತು ಡಬಲ್ ವರ್ಲ್), ಕಾಸ್‍ಮಾಸ್ ಮಿಕ್ಸ್ (ಡ್ವಾರ್ಫ್ ಮತ್ತು ಟಾಲ್), ಬಾಲ್ಸಂ, ಜಿರೇನಿಯಂ ಮಿಕ್ಸ್, ಆಂಟಿರಿನಮ್ ಮಿಕ್ಸ್ ಡಯಾಂತಸ್ ಮಿಕ್ಸ್, ಕ್ಯಾಲೊಂಡುಲಾ, ಗಜೇನಿಯ ಮಿಕ್ಸ್ , ಪೆಂಟಾಸ್ ಮಿಕ್ಸ್, ಯುಪೋರ್ಬಿಯ ಮಿಲ್ಲಿ, ಬಿಗೋನಿಯಾ, ವಿಂಕಾ, ವರ್‍ಬೆನಾ ಇತ್ಯಾದಿ ವಿವಿಧ ಪುಷ್ಪ ಸಸಿಗಳು, 70 ಕ್ಕೂ ಹೆಚ್ಚು ಬಗೆಯ ತಳಿಗಳು, ಪ್ರದರ್ಶಿಸುವುದರೊಂದಿಗೆ ಪುಷ್ಪ ರಸಿಕರಿಗೆ ಪ್ರದರ್ಶನವು ಮುದ ನೀಡಲಿದೆ ಎಂದು ತಿಳಿಸಿದರು.

ಚಿತ್ರದುರ್ಗದ ಖ್ಯಾತ ಚಿತ್ರಕಲಾವಿದರಿಂದ ಅಕ್ರಾಲಿಕ್, ಜಲವರ್ಣ ಹಾಗೂ ಆಯಿಲ್ ಮಾಧ್ಯಮದ ಚಿತ್ರಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ನೀರು ಹರಿಯುವಂತೆ ಇರುವ ಜಲಪಾತಗಳನ್ನು ಫಲ-ಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಜಿಲ್ಲಾ ಬಂಜಾರ(ಲಂಬಾಣಿ) ಸಂಘದ ಪದಾಧಿಕಾರಿಗಳ ಆಯ್ಕೆ | ನಾಗೇಂದ್ರ ನಾಯ್ಕ್‌ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ

ಪ್ರದರ್ಶನದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳಿಂದ ತಮ್ಮ ಇಲಾಖೆ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದರಿಂದ ಒಂದೇ ಸೂರಿನಡಿ ಎಲ್ಲಾ ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳ ಮಾಹಿತಿ ರೈತರಿಗೆ ಹಾಗೂ ಆಸಕ್ತ ಸಾರ್ವಜನಿಕರಿಗೆ ದೊರೆಯುತ್ತದೆ. ಪ್ರದರ್ಶನದ ಅಂಗವಾಗಿ ನಗರದ ವಿವಿಧ ಶಾಲೆಗಳ ಶಾಲಾ ಮಕ್ಕಳಿಗೆ ಜಾನಪದ ಹಾಗೂ ಭಾವಗೀತೆ ಸ್ಪರ್ಧೆ, ಚಿತ್ರಕಲಾ ಸ್ಟರ್ಧೆ, ಪ್ರಬಂಧ ಸ್ಪರ್ಧೆ, ಹಣ್ಣು ಮತ್ತು ಹೂ ತರಕಾರಿಗಳನ್ನು ಬಳಸಿ ಪ್ಯಾನ್ಸಿ ಡ್ರಸ್ಸ್ ಸ್ಪರ್ಧೆ, ಚಿಕ್ಕ ಮಕ್ಕಳಿಗೆ ಹಣ್ಣು ಮತ್ತು ತರಕಾರಿಗಳ ಗುರುತಿಸುವ ಸ್ಪರ್ಧೆಗಳನ್ನು ಏರ್ಪಡಿಸಿ ಉತ್ತೇಜನ ನೀಡಲಾಗುವುದು. 

ನಗರದ ಸಾರ್ವಜನಿಕರಿಗೆ ರಂಗೋಲಿ ಸ್ಪರ್ಧೆ, ಮನೆಯ ಆವರಣದಲ್ಲಿ ವಿವಿಧ ಜಾತಿಯ ಅಲಂಕಾರಿಕ ಕುಂಡಗಳ ಜೋಡಣೆ ಮತ್ತು ಮನೆ, ಸಂಸ್ಥೆಗಳ ಆವರಣದಲ್ಲಿ ಉದ್ಯಾನವನಗಳನ್ನು ನಿರ್ಮಿಸಿದವರಿಗೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಮಾರೋಪದ ಸಮಾರಂಭದಲ್ಲಿ ಬಹುಮಾನಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಚಿತ್ರದುರ್ಗದ ಜನತೆ ಹಾಗೂ ಸುತ್ತಮುತ್ತಲಿನ ತಾಲ್ಲೂಕಿನ ಜನರು ತಮ್ಮ ಮಕ್ಕಳೊಂದಿಗೆ ವಾರಾಂತ್ಯದಲ್ಲಿ ಈ ಸುಂದರ ಫಲ-ಪುಷ್ಪ ಪ್ರದರ್ಶನ ವೀಕ್ಷಿಸಲು ಬರಬೇಕು ಎಂದು ಜಿ.ಪಂ ಸಿಇಒ ಡಾ. ಆಕಾಶ್ ಮನವಿ ಮಾಡಿದರು.

ಇದನ್ನೂ ಓದಿ: ಫೆ.21 ರಂದು ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ದಿಶಾ ಸಭೆ

ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕೆ ಜಂಟಿ ನಿರ್ದೇಶಕಿ ಜಿ.ಸವಿತಾ, ರಾಜ್ಯವಲಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಟಿ.ತೋಟಯ್ಯ, ಜಿಲ್ಲಾ ತೋಟಗಾರಿಕೆ ಸಂಘದ ಜಂಟಿ ಕಾರ್ಯದರ್ಶಿ ಗಿರೀಶ್, ಖಜಾಂಚಿ ನಾಗರಾಜ್ ಬೇದ್ರೆ, ಹಿರಿಯ ಸಲಹೆಗಾರ ಜಿ.ಎಸ್.ಉಜ್ಜೀನಪ್ಪ, ನಿರ್ದೇಶಕರಾದ ಸುಮನಾ ಅಂಗಡಿ, ಸತ್ಯನಾರಾಯಣ ನಾಯ್ಡು, ಶ್ವೇತಾ ವಿಶ್ವನಾಥ್, ರೀನಾ ವೀರಭದ್ರಪ್ಪ ಸೇರಿದಂತೆ ಮತ್ತಿತರರು ಇದ್ದರು.

ನಾಳೆ ಉದ್ಘಾಟನಾ ಸಮಾರಂಭ: 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ, ಜಿಲ್ಲಾ ತೋಟಗಾರಿಕೆ ಸಂಘ ಸಂಯುಕ್ತಾಶ್ರಯದಲ್ಲಿ ಇದೇ ಫೆ.20 ರಿಂದ 22 ರವರೆಗೆ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದ್ದು, ಫೆ.20ರಂದು ಸಂಜೆ 6ಕ್ಕೆ ನಗರದ ವಿ.ಪಿ.ಬಡಾವಣೆಯ ತೋಟಗಾರಿಕೆ ಇಲಾಖೆ ಆವರಣದಲ್ಲಿ “33ನೇ ಫಲ-ಪುಷ್ಪ ಪ್ರದರ್ಶನದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:ChitradurgaChitradurga newsFruit and Flower ShowHorticulture Departmentಚಿತ್ರದುರ್ಗಚಿತ್ರದುರ್ಗ ನ್ಯೂಸ್ತೋಟಗಾರಿಕೆ ಇಲಾಖೆಫಲ-ಪುಷ್ಪ ಪ್ರದರ್ಶನ
Share This Article
Facebook Email Print
Previous Article ARECANUT RATE ಅಡಿಕೆ ಧಾರಣೆ | 19 ಫೆಬ್ರವರಿ | ರಾಶಿ, ಕೆಂಪುಗೋಟು, ಕೋಕೊ, ಚಾಲಿ ಇನ್ನಿತರೆ ಅಡಿಕೆ ರೇಟ್‌
Next Article ರಾಜ್ಯ ಬಜೆಟ್ | ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಮೀಸಲಿಡುವಂತೆ DCM ಗೆ ಮನವಿ ರಾಜ್ಯ ಬಜೆಟ್ | ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಮೀಸಲಿಡುವಂತೆ DCM ಗೆ ಮನವಿ 
Leave a Comment

Leave a Reply Cancel reply

Your email address will not be published. Required fields are marked *

ಡಿಜಿಟಲ್ ಡೆಮಾಗ್ರಫಿ ಮತ್ತು ಆರ್ಟಿಫಿಷಿಯಲ್ ಇನ್‌ಟೆಲಿಜನ್ಸ್ ಕಾರ್ಯಾಗಾರ
ಡಿಜಿಟಲ್ ಡೆಮಾಗ್ರಫಿ ಮತ್ತು ಆರ್ಟಿಫಿಷಿಯಲ್ ಇನ್‌ಟೆಲಿಜನ್ಸ್ ಕಾರ್ಯಾಗಾರ ಯಶಸ್ವಿ
ಮುಖ್ಯ ಸುದ್ದಿ
ವಿಧಾನಸಭಾ ಕ್ಷೇತ್ರದ ಬಿಜೆಪಿ ನಗರ ಮಂಡಲದ ಮಾಸಿಕ ಸಭೆ
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ನಗರ ಮಂಡಲದ ಮಾಸಿಕ ಸಭೆ 
ಮುಖ್ಯ ಸುದ್ದಿ
Rain
ಕೋಟೆನಾಡಿಗೆ ಕಾಲಿಟ್ಟ ಮುಂಗಾರು ಮಳೆ | ಹದವಾಗಿ ಸುರಿದ ರೋಹಿಣಿ
ಮುಖ್ಯ ಸುದ್ದಿ
Rudset Institute
ರುಡ್‍ಸೆಟ್‍ | ಉಚಿತ ಸಮಗ್ರ ಕೃಷಿ ತರಬೇತಿ
ಮುಖ್ಯ ಸುದ್ದಿ
© Chitradurga News 2025 | Powered By Karnatakabest.com

Loading Comments...

    Welcome Back!

    Sign in to your account

    Username or Email Address
    Password

    Lost your password?

    Not a member? Sign Up