
CHITRADURGA NEWS | 11 DECEMBER 2025
ಹೊಸದುರ್ಗ: ಭದ್ರಾ ಜಲಾಶಯದ ನೀರು ವಿವಿ ಸಾಗರಕ್ಕೆ ಹರಿದು ಬಂದಿದ್ದರೆ ಅದಕ್ಕೆ ಮುಖ್ಯ ಕಾರಣ ಜಿಲ್ಲೆಯ ರೈತ ಸಂಘ ಹಾಗೂ ಪತ್ರಕರ್ತರ ಸಂಘ ಮತ್ತು ನೀರಾವರಿ ಹೋರಾಟಗಾರರು ಎಂದು ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಡಿಸೆಂಬರ್ 11 | ಹತ್ತಿ ರೇಟ್ ಎಷ್ಟಿದೆ?
ಪಟ್ಟಣದ ಕುಂಚಿಟಿಗ ಮಹಾಸಂಸ್ಥಾನದ ಆವರಣದಲ್ಲಿ ಬುಧವಾರ ಸಂಜೆ ನಡೆದ ಸುಜ್ಞಾನ ಸಂಗಮ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ರೈತ ಸಂಘ, ಪತ್ರಕರ್ತರ ಸಂಘ, ಮಠಾಧೀಶರು ಭದ್ರಾ ಮೇಲ್ದಂಡೆ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಇವರೆಲ್ಲರ ಶ್ರಮದಿಂದ ಭದ್ರಾ ಯೋಜನೆ ಒಂದು ಹಂತಕ್ಕೆ ಬಂದಿದೆ ಎಂದರು.
ಮಾಜಿ ಸಂಸದ ಕೊಂದಡರಾಮಯ್ಯ ಅವರ ರಾಜೀನಾಮೆ ನಂತರ ನಿಷ್ಕ್ರಿಯವಾಗಿದ್ದ ಭದ್ರಾ ಮೇಲ್ದಂಡೆ ಹೋರಾಟಕ್ಕೆ ಅಧ್ಯಕ್ಷರನ್ನಾಗಿ ಜಯಣ್ಣ ಅವರನ್ನು ಮಾಡಿದೆವು. ಮಠಾಧೀಶರು ನೀರಾವರಿ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.
ವಿವಿ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸುವ ಸಂದರ್ಭದಲ್ಲಿ ಎಲ್ಲಾ ಶಾಸಕರು, ರಾಜಕಾರಣಿಗಳು ವಿರೋಧ ಮಾಡಿದರು. ನಂತರ ಸಹಕಾರ ನೀಡಿದರು ಎಂದರು.
ಇದನ್ನೂ ಓದಿ: ಚೆಕ್ ಡ್ಯಾಮ್ ನಲ್ಲಿ ಮುಳುಗಿ ಇಬ್ಬರು ಮೃತ | ಕುರಿ ಮೇಯಿಸಲು ಹೋಗಿದ್ದಾಗ ಘಟನೆ
ಯಾವ ಸರಕಾರಕ್ಕೂ ರೈತರಿಗೆ ನೀರು ಕೊಡಬೇಕೆಂಬ ರಾಜಕೀಯ ಇಚ್ಚಾಶಕ್ತಿ ಇಲ್ಲ. ಪ್ರಾನ್ಸ್, ಕತಾರ್ ನಲ್ಲಿ ಇಂತಿಷ್ಟೇ ಸಮಯದಲ್ಲಿ ಯೋಜನೆ ಮುಗಿಸುತ್ತಾರೆ. ಆದರೆ ಭಾರತದಲ್ಲಿ ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಯುವುದಿಲ್ಲ.
ಅದೇ ರೀತಿಯಾಗಿ ಭದ್ರಾ ಮೇಲ್ದಂಡೆ ಕೆಲಸ ಪೂರ್ಣಗೊಳ್ಳುವುದರೊಳಗೆ ಆರಂಭದಲ್ಲಿ ಮಾಡಿದಂತಹ ಕೆಲಸ ಹಾಳಾಗಿ ಹೋಗಿರುತ್ತದೆ. ಪುನಃ ಆರಂಭದಿಂದ ಕೆಲಸ ಮಾಡಲು ಹೆಚ್ಚುವರಿಯಾಗಿ 20 ಸಾವಿರ ಕೋಟಿ ರುಪಾಯಿ ಹಣ ವ್ಯಯ ಮಾಡಬೇಕಾಗುತ್ತದೆ ಎಂದರು.
ಎಲ್ಲ ದೇಶಗಳೂ ಅಧ್ಯಯನ ಮಾಡಲು ಹೋಗುತ್ತಾರೆ. ವರದಿ ಕೊಡುತ್ತಾರೆ. ದೇಶದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳು ಆಗುತ್ತಿಲ್ಲ. ಜಾತಿ ತಾರತಮ್ಯ ವ್ಯವಸ್ಥೆ ಹೀಗೆ ಮುಂದುವರೆದರೆ ಬರುವ 15 ವರ್ಷಗಳಲ್ಲಿ ರಾಜಕಾರಣಿಗಳು, ಮಠಾಧೀಶರನ್ನು ಬೀದಿಯಲ್ಲಿ ಹೊಡೆಯುವ ಸಂದರ್ಭ ಬರಲಿದೆ ಎಂದರು.
ಇದನ್ನೂ ಓದಿ: ಪತ್ರಿಕೋದ್ಯಮ | ವಾರ್ತಾ ಇಲಾಖೆಯಿಂದ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ
ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ನಾಲ್ಕನೇ ಸ್ತರದಲ್ಲಿ ಕೆಲಸ ಮಾಡುವವರು ಪತ್ರಕರ್ತರು ವೃತ್ತಿಗೆ ದಕ್ಕೆ ಆಗುತ್ತದೆ ಎಂಬ ಕಾರಣಕ್ಕೆ ಸನ್ಮಾನ ಸ್ವೀಕಾರ ಮಾಡುವುದಿಲ್ಲ. ಯಾವುದನ್ನು ನಿರೀಕ್ಷೆ ಮಾಡದೆ ಕಾಯಕ ಮಾಡುತ್ತಾರೆ. ಸರಕಾರ ಇವರಿಗೆ ನಿವೇಶನ ಹಾಗೂ ವಸತಿ ಸೌಕರ್ಯ ಕಲ್ಪಿಸಬೇಕು ಎಂದರು.
ಸಾಮಾಜಿಕ ಹೊಣೆಗಾರಿಕೆ ಹಿನ್ನೆಲೆಯಲ್ಲಿ ಲೇಖನ ಬರೆದಾಗ ಅದರ ವಿರೋಧವನ್ನು ಅನೇಕ ಪತ್ರಕರ್ತರು ಎದುರಿಸಿದ್ದಾರೆ. ಅನೇಕ ಸಲ ಪತ್ರಕರ್ತರ ಮೇಲೆ ಹಲ್ಲೆ, ದೌರ್ಜನ್ಯಗಳಾಗಿವೆ. ಆದರೂ ಸಹ ಜೀವ ಒತ್ತೆ ಇಟ್ಟು ಸಾರ್ವಜನಿಕರ ಒಳಿತಿಗಾಗಿ ಕೆಲಸ ಮಾಡುತ್ತಾರೆ ಎಂದರು.
ಉದ್ಯೋಗ ಅವಕಾಶ ನೀಡಿದ್ದ ಹಿರಿಯೂರು ಸಕ್ಕರೆ ಕಾರ್ಖಾನೆ ಮುಚ್ಚಿದೆ. ಯುವಕರು ಮೊಬೈಲ್ ಗೆ ಆಡಿಟ್ ಆಗಿದ್ದಾರೆ. ಉಚಿತ ಡಾಟ ನೀಡಿ ಯುವಕರನ್ನು ಹಾಳು ಮಾಡಲಾಗುತ್ತಿದೆ. ಅಂತರ್ಜಾಲ ಹಾಗೂ ಮೊಬೈಲ್ ನಿಂದ ದೂರ ಸರಿದಿದ್ದರೆ ಅನಾರೋಗ್ಯಕರ ಸಮಾಜ ನಿರ್ಮಾಣ ಆಗಲಿದೆ ಎಂದು ಆತಂಕ ಸೃಷ್ಟಿ ವ್ಯಕ್ತಪಡಿಸಿದರು.
ಇದನ್ನೂ ಓದಿ: ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಡಿ.21 ರಿಂದ 24 ವರೆಗೆ
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿನಾಯಕ ತೊಡರನಾಳ್ ಮಾತನಾಡಿ, ಸ್ವಾಮೀಜಿ ಎಂದಾಕ್ಷಣ ಐಷಾರಾಮಿ ಜೀವನ ಎಂದುಕೊಳ್ಳುತ್ತೇವೆ. ಆದರೆ ದಾಳಿಂಬೆ ಬೆಳೆದು ಮಠ ಕಟ್ಟಿ ಇಡೀ ರಾಜ್ಯಕ್ಕೆ ಮಾದರಿಯಾದವರು ಶಾಂತವೀರ ಸ್ವಾಮೀಜಿ. ಎಲ್ಲ ಸಮುದಾಯದವರನ್ನು ವಿಶ್ವಾಸಕ್ಕೆ ಪಡೆದು ಇಂದು ಜಾತಿರಹಿತ ಮಠವನಾಗಿ ನಿರ್ಮಾಣ ಮಾಡಿದ್ದಾರೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವೀರೇಶ್ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಯು ಶ್ರೀಮಠದ ಸಂಪರ್ಕ ಹೊಂದುವ ಕಾರ್ಯಕ್ರಮವನ್ನು ಶ್ರೀಗಳು ಪ್ರತಿ ತಿಂಗಳು ಆಯೋಜನೆ ಮಾಡಿದ್ದಾರೆ. ಇಲ್ಲಿ ಸಂಸ್ಕಾರ ಸಿಗಲಿದೆ. ಶಿಕ್ಷಣ, ಧಾರ್ಮಿಕ , ಇತಿಹಾಸ, ಪರಂಪರೆಯ ಜ್ಞಾನ ಸಿಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ರಘು ಮಾತನಾಡಿ, ಜಾತಿ, ಧರ್ಮ ಮೀರಿ ಪ್ರಾಮಾಣಿಕತೆಯಿಂದ ಮಾರ್ಗದರ್ಶನ ನೀಡುತ್ತಾರೆ. ನನ್ನ ಬೆಳವಣಿಗೆಯಲ್ಲಿ ಅವರ ಸಲಹೆ ಮಾರ್ಗದರ್ಶನ ನೀಡಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಕಠಿಣ ಕಾನೂನು ಜಾರಿಗೆ ತರಬೇಕು. ಇಂದು ಶ್ರೀಮಂತರು, ಪ್ರಭಾವಿ ಶಾಲಿಗಳು ತಪ್ಪು ಮಾಡಿ ಕಾನೂನಿನ ಬಂಧನದಿಂದ ಪಾರಾಗುತ್ತಿದ್ದಾರೆ. ಆದರೆ ಮಾಧ್ಯಮಗಳ ಪ್ರಾಮಾಣಿಕ ಕೆಲಸದಿಂದ ಎಷ್ಟೋ ದುರ್ಬಲರಿಗೆ ನ್ಯಾಯ ಸಿಕ್ಕಿದೆ ಎಂದರು.
ಇದನ್ನೂ ಓದಿ: ಅಬಕಾರಿ ಅಧಿಕಾರಿಗಳ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ
ಕಾರ್ಯಕ್ರಮ ಉದ್ಘಾಟಿಸಿ ಶಿಕ್ಷಕ ಕೇಶವಮೂರ್ತಿ ಮಾತನಾಡಿ, ನಮಗೆ 1997 ರಲ್ಲಿ ಶಾಂತವೀರ ಶ್ರೀಗಳ ಪರಿಚಯವಾಯಿತು. ನಾವು ಕಂಡಂತೆ ಗುರುಗಳು ನಿರಂತರವಾಗಿ 25 ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸಾವಿರಾರು ಮಕ್ಕಳಿಗೆ ಪುಸ್ತಕ, ಪೆನ್ನುಗಳನ್ನು ನೀಡುತ್ತಾ ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡುತ್ತಿದ್ದಾರೆ. ಸಂಗೇನಹಳ್ಳಿ ಗ್ರಾಮದಲ್ಲಿ ಪ್ರಾರಂಭವಾದ ಸುಜ್ಞಾನ ಸಂಗಮ ಕಾರ್ಯಕ್ರಮವಿಂದು ಬೃಹತ್ ಮಟ್ಟದಲ್ಲಿ ಬೆಳೆಯುತ್ತಿದೆ. ಗುರುಗಳ ಪ್ರಯತ್ನ ಬಹಳ ದೊಡ್ಡದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಧ್ಯಮ ಅಕಾಡೆಮಿ ಸದಸ್ಯ ಅಹೋಬಳಪತಿ ಮಾತನಾಡಿ, ಧಾರ್ಮಿಕ ಸಂಸ್ಥಾನವನ್ನು ಜನಸ್ನೇಹಿಯಾಗಿ ಕಟ್ಟುವುದು ಬಹಳ ಸವಾಲಿನ ಕೆಲಸ. ಅಂತಹ ಮಹತ್ಕಾರ್ಯವನ್ನ ಶ್ರೀಗಳು ಮಾಡುತ್ತಿದ್ದಾರೆ. ಜನಸಮುದಾಯದ ಸಂಘಟನೆಯ ಮೂಲಕ ಮಾದರಿಯಾಗಿದ್ದಾರೆ. ಒಂದಾನೊಂದು ಕಾಲದಲ್ಲಿ ಪತ್ರಿಕೋದ್ಯಮಕ್ಕೆ ಬಹಳ ಮಹತ್ವವಿತ್ತು. ಸಾಮಾಜಿಕ ಜಾಲತಾಣಗಳಿಂದ ಇಂದು ವಿಕಟನ ಸ್ಥಿತಿಯಲ್ಲಿದೆ.
ಕಾರ್ಮಿಕರು, ವ್ಯಾಪಾರಸ್ಥರು, ರೈತರು ಮತ್ತು ಪತ್ರಕರ್ತಕರು ಸೇರಿದಂತೆ ಎಲ್ಲಾ ವರ್ಗದಲ್ಲಿ ಭದ್ರತೆಯಿಲ್ಲದೆ, ಅಭದ್ರತೆ ಕಾಡುತ್ತಿದೆ. ಕೋವಿಡ್ ಬಂದ ಮೇಲೆ ಮನುಷ್ಯ ಅಮಾನವೀಯತೆ ಕಡೆ ಸಾಗುತ್ತಿದ್ದಾನೆ. ಭೂಮಿಗೋಸ್ಕರ ಏನು ಬೇಕಾದರೂ ಮಾಡುವಂತಹ ಸ್ಥಿತಿಗೆ ಹೋಗಿದ್ದಾನೆ. ಮನುಷ್ಯ ಸಂಬಂಧಗಳು ಕೂಡ ಹದಗೆಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಇದನ್ನೂ ಓದಿ: ನುಲೇನೂರು ಶಂಕರಪ್ಪ ಪ್ರತಿಷ್ಠಾನದಿಂದ ಹಸಿರು ಪ್ರಶಸ್ತಿ ಪ್ರದಾನ
ಕಾರ್ಯಕ್ರಮದ ಮುಖ್ಯಘಟ್ಟವಾಗಿ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳಿಗೆ ಶ್ರೀಮಠದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿನಯ್ ತೊಡರುನಾಳ್, ಉಪಾಧ್ಯಕ್ಷರಾದ ನಾಗತಿಹಳ್ಳಿ ಮಂಜುನಾಥ್, ಮಾರುತಿ, ಕಾರ್ಯದರ್ಶಿಗಳಾದ ವೀರೇಶ್, ನಾಕೀಕೆರೆ ತಿಪ್ಪೇಸ್ವಾಮಿ, ಸಂಘದ ಪದಾಧಿಕಾರಿಗಳಾದ ಅಮಿತ್, ಕುಮಾರ್, ಮಂಜುನಾಥ್, ನವೀನ್ ಕುಮಾರ್, ಪ್ರಸನ್ನ, ರವಿಕುಮಾರ, ವಿಶ್ವನಾಥ್, ಸ್ಥಳೀಯ ಪತ್ರಕರ್ತರಾದ ತುಂಬಿನಕೆರೆ ಬಸವರಾಜ್, ಮಹೇಶ್ ಗೌಡ ಮತ್ತು ಲಕ್ಕಿಹಳ್ಳಿ ಸಿದ್ಧೇಶ್ ಸೇರಿದಂತೆ ಇತರ ಮುಖಂಡರು ಹಾಗೂ ಶ್ರೀ ಮಠದ ಭಕ್ತರು ಪಾಲ್ಗೊಂಡಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
