
CHITRADURGA NEWS | 11 DECEMBER 2025
ಚಿತ್ರದುರ್ಗ: ಪ್ರಗತಿಪರ ರೈತ ಬಿ.ಜಿ.ಕೆರೆ ವೀರಭದ್ರಪ್ಪ ಅವರ ತೋಟಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ನುಗ್ಗಿ ಕಲ್ಪರಸ(ನೀರಾ) ಇಳಿಸುವ ಪರಿಕರ ಹಾಗೂ ಫಲಕ ಕಿತ್ತು ಹಾಕಿರುವುದನ್ನು ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಪ್ರತಿಭಟಿಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಡಿಸೆಂಬರ್ 11 | ಹತ್ತಿ ರೇಟ್ ಎಷ್ಟಿದೆ?
ರೈತ ಮೋರ್ಚಾ ಜಿಲ್ಲಾಧ್ಯಕ್ಷ ಟಿ.ವೆಂಕಟೇಶ್ ಯಾದವ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ರೈತರು ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೊಳಕಾಲ್ಮೂರು ತಾಲೂಕಿನ ಬಿ.ಜಿ.ಕೆರೆಯಲ್ಲಿ ಪ್ರಗತಿಪರ ರೈತ ಎಸ್.ಸಿ.ವೀರಭದ್ರಪ್ಪ ಅವರ ತೋಟ ವಸುಂಧರಾ ಫಾರಂ ಗೆ ಅಬಕಾರಿ ಇಲಾಖೆ ಅಧಿಕಾರಿಗಳು ನುಗ್ಗಿ ಕಲ್ಪರಸ (ನೀರಾ) ಇಳಿಸುವ ವಸ್ತುಗಳು, ಫಲಕಗಳನ್ನು ಕಿತ್ತು ಹಾಕಿ ದೂರು ದಾಖಲಿಸುವುದಾಗಿ ಎಚ್ಚರಿಕೆ ನೀಡಿರುವುದನ್ನು ಖಂಡಿಸಿದರು.
ಅಬಕಾರಿ ಇಲಾಖೆ ಅಧಿಕಾರಿಗಳ ವರ್ತನೆಯಿಂದ ಹಿರಿಯ ರೈತರಾದ ಬಿ.ಜಿ.ಕೆರೆ ವೀರಭದ್ರಪ್ಪ ಅವರು ನೊಂದಿದ್ದಾರೆ. ಕೂಡಲೇ ಅಬಕಾರಿ ಇಲಾಖೆ ಅಧಿಕಾರಿಗಳು ವೀರಭದ್ರಪ್ಪ ಅವರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಚೆಕ್ ಡ್ಯಾಮ್ ನಲ್ಲಿ ಮುಳುಗಿ ಇಬ್ಬರು ಮೃತ | ಕುರಿ ಮೇಯಿಸಲು ಹೋಗಿದ್ದಾಗ ಘಟನೆ
ಕಲ್ಪರಸ (ನೀರಾ) ಹೆಸರಿನಲ್ಲಿ ಉತ್ಪಾಧಿಸುತ್ತಿರುವ ಈ ವಸ್ತುವಿನಿಂದ ಸಮಾಜದ ಸ್ವಾಸ್ಸ್ಥ್ಯ ಆರೋಗ್ಯಕರವಾಗಿರುತ್ತದೆ. ಆರೋಗ್ಯಯುತ ಅಂಶಗಳನ್ನು ಒಳಗೊಂಡಿದೆ. ಹಿಂದಿನ ಋಷಿ ಪರಂಪರೆ, ವೈದ್ಯಕೀಯ ಪರಂಪರೆ, ಕೃಷಿ ಪರಂಪರೆ ಈ ಎಲ್ಲಾ ಇತಿಹಾಸಗಳನ್ನು ನೋಡಿದಾಗ ಈ ನೀರಾ (ಕಲ್ಪರಸ)ವನ್ನು ಸೇವಿಸಿ ಅನುಭವಿಸಿದಾಗ ಈ ಮನುಷ್ಯ ಸಂಕುಲಕ್ಕೆ ಆರೋಗ್ಯಕರ ಅಂಶಗಳು ಇದರಲ್ಲಿ ಇರುವುದು ಕಂಡು ಬಂದಿದೆ ಎಂದು ತಿಳಿಸಿದರು.
ಇವತ್ತಿನ ಹಲವು ರೋಗಗಳಿಗೆ ಮತ್ತು ಮನುಷ್ಯಕ್ಕೆ ದೇಹಕ್ಕೆ ಬೇಕಾಗುವಂತಹ ಹಲವಾರು ವಿಟಿಮಿನ್‍ಗಳ (ಖನಿಜಾಂಶ) ಇದರಲ್ಲಿವೆ ಎಂದು ಹಲವಾರು ಬಾರಿ ಸಾಬೀತಾಗಿ ದೃಢಪಟ್ಟಿದೆ ಎಂಬ ಮಾಹಿತಿ ಇದೆ. ಇದರ ಉಪ ಉತ್ಪನ್ನವಾದಂತಹ ನೀರಾ ಬೆಲ್ಲ ಉತ್ತಮವಾದ ಗುಣಮಟ್ಟ ಹೊಂದಿದೆ. ಹಾಗಾಗಿ ನೀರಾ (ಕಲ್ಪರಸ) ದಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ರೈತರು ತಿಳಿಸಿದರು.
ಈದರಿಂದ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಉತ್ತಮವಾದಂತಹ ಒಂದು ಕೃಷಿ ಪರಂಪರೆಯಾಗಿದೆ. ಹಾಗಾಗಿ ತತಕ್ಷಣ ತಾವುಗಳು ಸ್ಥಳೀಯವಾಗಿ ಉತ್ಪಾದಿಸುತ್ತಿರುವ ನೀರಾ (ಕಲ್ಪರಸ)ವನ್ನು ರೈತರಿಗೆ ಇನ್ನಷ್ಟು ಉತ್ಪಾದಿಸಲು ಪ್ರೋತ್ಸಾಹ ನೀಡಬೇಕು ಹಾಗೂ ಸರ್ಕಾರಕ್ಕೆ ಚಿತ್ರದುರ್ಗ ಜಿಲ್ಲೆಯಲ್ಲಿ ನೀರಾ (ಕಲ್ಪರಸ)ವನ್ನು ಉತ್ಪಾದಿಸುವಂತ ರೈತರ ರಕ್ಷಣೆಗೆ ಮುಂದಾಗಬೇಕೆಂದು ಮನವಿ ಮಾಡಲಾಯಿತು.
ಇದನ್ನೂ ಓದಿ: ಪತ್ರಿಕೋದ್ಯಮ | ವಾರ್ತಾ ಇಲಾಖೆಯಿಂದ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ
ತಮ್ಮ ತೋಟಗಳಲ್ಲಿ ಅನುಮತಿ ಇಲ್ಲದೆ ರೈತರು ಕಲ್ಪರಸ(ನೀರಾ) ಇಳಿಸಲು ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಕಾಯಿ ರಾಮದಾಸ್, ಮುಖಂಡರಾದ ಲೋಕೇಶ್, ಶ್ರೀರಾಮರೆಡ್ಡಿ, ನಾಗರಾಜ್ ಬೇದ್ರೆ, ಮಲ್ಲೇಶ್, ಶಾಂತಮ್ಮ, ನಾಗರಾಜ್, ಪ್ರಭಾಕರ್, ಸಿದ್ಧಾರ್ಥ, ಬಸುರಾಜ್, ಹರೀಶ್, ಪಲ್ಲವಿ ಪ್ರಸನ್ನ, ರೇಖಾ ಇತರರು ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
