
CHITRADURGA NEWS | 11 DECEMBER 2025
ಚಿತ್ರದುರ್ಗ: ಇದೇ ಡಿಸೆಂಬರ್ 13 ಮತ್ತು 14 ರಂದು ಮಾನವನ ಕುತೂಹಲ ಕೆರಳಿಸುವ ವಿಸ್ಮಯ ನಡೆಯಲಿದೆ.
ಇದನ್ನೂ ಓದಿ: ಭದ್ರೆ ನೀರು ಜಿಲ್ಲೆಗೆ ಹರಿಯಲು ಯಾರೆಲ್ಲಾ ಕಾರಣ ಗೊತ್ತಾ | ನೀರಾವರಿ ಯೋಜನೆ ಕುರಿತು ಶ್ರೀ ಶಾಂತವೀರ ಸ್ವಾಮೀಜಿ ಮುಕ್ತ ಮಾತು
ಈ ಎರಡು ದಿನಗಳ ರಾತ್ರಿ 9 ರಿಂದ ಬೆಳಗಿನ ಜಾವ 4 ಗಂಟೆಯವರೆಗೆ ಪೂರ್ವ ದಿಕ್ಕಿನಲ್ಲಿ ಜೆಮಿನಿ(ಮಿಥುನ) ನಕ್ಷತ್ರರಾಶಿಯ ಕಡೆಯಿಂದ ಪ್ರತಿ ಗಂಟೆಗೆ 25 ರಿಂದ 50 ಉಲ್ಕೆಗಳು ಮಳೆಯ ರೂಪದಲ್ಲಿ ಭೂಮಿಯ ಕಡೆ ಬೀಳುವ ಸುಂದರ ನೋಟ ಕಾಣಸಿಗಲಿದೆ.
ಈ ಉಲ್ಕಾಪಾತದ ಮೂಲ 3200 ಪೈತಾನ್ ಕ್ಷುದ್ರಗ್ರಹ. 100 ವರ್ಷಗಳ ಹಿಂದೆ ತನ್ನ ವೇಗ ಬದಲಿಸಿಕೊಂಡು ಸೂರ್ಯನ ಸಮೀಪ ಹಾರಾಟ ಮಾಡುತ್ತಿರುವ ಈ ಬಂಡೆ.
ಲೋಹಗಳಿಂದಾದ ಕ್ಷುದ್ರಗ್ರಹ, ಸೂರ್ಯನ ತಾಪಕ್ಕೆ ಕರಗುತ್ತಾ ಧೂಳು ಹಾಗೂ ಚಿಕ್ಕ ಚಿಕ್ಕ ಕಲ್ಲಿನ ಕಣಗಳನ್ನು ಬಾಹ್ಯಾಕಾಶದಲ್ಲಿ ಚೆಲ್ಲುತ್ತಿದೆ.
ಇದನ್ನೂ ಓದಿ: ಅಬಕಾರಿ ಅಧಿಕಾರಿಗಳ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ
ಈ ಸಮಯದಲ್ಲಿ ವಿದುದ್ದೀಪಗಳ ಹಾಗೆ ಬೆಳಕು ಕಾಣುವ ಈ ಅಪರೂಪದ ದೃಶ್ಯಗಳನ್ನು ನೋಡಲು ಮರೆಯಬೇಡಿ ಎಂದು ಹವ್ಯಾಸಿ ಖಗೋಳ ವೀಕ್ಷಕ ಹಾಗೂ ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಎಚ್.ಎಸ್.ಟಿ. ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
