By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    MLA K.C.Virendra (Pappi)
    ಚಿತ್ರದುರ್ಗ ತಾಲ್ಲೂಕಿನ 8 ಕೆರೆಗಳಿಗೆ ಸಂಪುಟದ ಅನುಮೋದನೆಗೆ ಶಾಸಕ ವೀರೇಂದ್ರ ಪಪ್ಪಿ ಮನವಿ
    4 minutes ago
    ರೈತರ ನೆಲಕ್ಕೆ ಕಾಲಿಟ್ಟು ಒಣಗಿದ ಬೆಳೆ ವೀಕ್ಷಿಸಿದ CM ಡಿ.ಕೆ.ಶಿವಕುಮಾರ್
    ರೈತರ ನೆಲಕ್ಕೆ ಕಾಲಿಟ್ಟು ಒಣಗಿದ ಬೆಳೆ ವೀಕ್ಷಿಸಿದ ನಾಡದೊರೆ
    1 hour ago
    ಕೇಂದ್ರೀಯ ವಿದ್ಯಾಶಾಲೆಗೆ ಸಂಸದ ಗೋವಿಂದ ಕಾರಜೋಳ ಭೇಟಿ
    ಜಾಲಿಕಟ್ಟೆ ಗ್ರಾಮದ ಬಳಿ ಕೇಂದ್ರೀಯ ವಿದ್ಯಾಲಯ ಸ್ವಂತ ಕಟ್ಟಡ ನಿರ್ಮಾಣ | ಸಂಸದ ಗೋವಿಂದ ಕಾರಜೋಳ 
    2 hours ago
    ಬೆಂಗಳೂರು ವಿಭಾಗ ಮಟ್ಟದ ಪರಿಶೀಲನಾ ಸಭೆ
    ಪ್ರಜಾಸೇವೆ ನೂತನ ಇಲಾಖೆ ಪ್ರಾರಂಭ | ಸಿಎಂ ಡಿಕೆಶಿ 
    2 hours ago
    ಜಮೀನುಗಳಿಗೆ ಭೇಟಿ‌ ನೀಡಿದ ಡಿ.ಕೆ.ಶಿವಕುಮಾರ್
    ಕೋಟೆ ನಾಡಲ್ಲಿ ಸಿಎಂ ರೌಂಡ್ಸ್ | ಜಮೀನುಗಳಿಗೆ ಭೇಟಿ‌ ನೀಡಿದ ಡಿ.ಕೆ.ಶಿವಕುಮಾರ್
    9 hours ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    ನಾಯಿ ತಪ್ಪಿಸಲು ಹೋಗಿ ರಸ್ತೆ ಬದಿ ನಿಂತಿದ್ದವರಿಗೆ ಕಾರು ಡಿಕ್ಕಿ | ಸ್ಥಳದಲ್ಲೇ ಓರ್ವ ಸಾವು
    4 days ago
    LOHITH NITHYASHREE
    ಭೀಕರ ಅಪಘಾತ ಮಾರುತಿ ಗ್ಯಾಸ್‌ನ ಲೋಹಿತ್‌ ಪ್ರಸಾದ್‌ ದಂಪತಿ ಸಾವು | ಹೊಳಲ್ಕೆರೆ ಕಣಿವೆ ಬಳಿ ಕಾರು ಲಾರಿ ನಡುವೆ ಅಪಘಾತ
    2 weeks ago
    ಲಾರಿ-ಬಸ್ ನಡುವೆ ಭೀಕರ ಅಪಘಾತ | 12ಕ್ಕೂ ಹೆಚ್ಚು ಮಂದಿಗೆ ಗಾಯ
    4 weeks ago
    Hosadurga police work
    INSTAGRAM, FECEBOOK ಪರಿಚಯ | ಲೈಂಗಿಕ ದುರ್ಬಳಕೆ ವಂಚನೆ ಮಾಡುತ್ತಿದ್ದ ಆರೋಪಿ ಬಂಧನ | ಚಿನ್ನಾಭರಣ ವಶಕ್ಕೆ
    1 month ago
    ಚಿತ್ರದುರ್ಗ ಅಪರಾಧ
    ಜಾನುಕೊಂಡ ಬಳಿ ಭೀಕರ ಅಪಘಾತ | ಇಬ್ಬರು ಕುರಿಗಾಯಿಗಳು, 14 ಕುರಿ ಧಾರುಣ ಸಾವು
    2 months ago
  • ತಾಲೂಕು
    ತಾಲೂಕುShow More
    ಚಳ್ಳಕೆರೆ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ
    ಜವಾಬ್ದಾರಿ ಅರಿತವರು ಮಾತ್ರ ಪತ್ರಕರ್ತರಾಗಲು ಸಾಧ್ಯ | ಶಾಸಕ ಟಿ.ರಘುಮೂರ್ತಿ
    2 weeks ago
    Bus crashes into divider
    ಡಿವೈಡರ್‌ಗೆ ಅಪ್ಪಳಿಸಿದ ಬಸ್‌ | 28 ಪ್ರಯಾಣಿಕರಿಗೆ ಗಾಯ | ಇಬ್ಬರು ಮೃತ
    2 weeks ago
    ಉಪನ್ಯಾಸ ಹಾಗೂ ಸ್ವಾಗತ ಸಮಾರಂಭ
    ಬಡತನ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಾಸ್ತ್ರ | ಶಾಂತವೀರ ಶ್ರೀ
    4 weeks ago
    ದುರ್ಗಾವರ ಗ್ರಾಮದಲ್ಲಿ ಭಗೀರಥ ಜಯಂತಿ ಆಚರಣೆ
    ದುರ್ಗಾವರ ಗ್ರಾಮದಲ್ಲಿ ಭಗೀರಥ ಜಯಂತಿ ಆಚರಣೆ | ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಭಾಗೀ 
    1 month ago
    ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ | 4 ಬೈಕುಗಳು ವಶಕ್ಕೆ
    1 month ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    arecanut price list
    ಅಡಿಕೆ ಧಾರಣೆ | ಅಡಿಕೆ ಬೆಲೆಯಲ್ಲಿ ಕುಸಿತ
    2 weeks ago
    ARECANUT RATE
    ಅಡಿಕೆ ಧಾರಣೆ | 8 ಜೂನ್‌ | ಇಂದಿನ ಅಡಿಕೆ ರೇಟ್‌
    2 months ago
    ARECANUT RATE
    ಅಡಿಕೆ ಧಾರಣೆ | 6 ಜೂನ್‌ | ಭೀಮಸಮುದ್ರ, ಚನ್ನಗಿರಿ, ತೀರ್ಥಹಳ್ಳಿ ಹಾಗೂ ರಾಜ್ಯದ ಅಡಿಕೆ ರೇಟ್‌
    2 months ago
    ARECANUT RATE
    ಅಡಿಕೆ ಧಾರಣೆ | 5 ಜೂನ್‌ | ಇಂದಿನ ಅಡಿಕೆ ಮಾರುಕಟ್ಟೆ ವಿವರ
    2 months ago
    ARECANUT RATE
    ಭೀಮಸಮುದ್ರ, ಚನ್ನಗಿರಿ, ತೀರ್ಥಹಳ್ಳಿ, ಸಾಗರ ಹಾಗೂ ರಾಜ್ಯದ ಅಡಿಕೆ ರೇಟ್‌
    2 months ago
  • Dina Bhavishya
    Dina BhavishyaShow More
    today bhavishya
    ದಿನ ಭವಿಷ್ಯ | ಜುಲೈ 25 | ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು, ಹಠಾತ್ ಧನಲಾಭ
    15 hours ago
    today bhavishya
    ದಿನ ಭವಿಷ್ಯ | ಜುಲೈ 24 | ಆದಾಯಕ್ಕಿಂತ ಖರ್ಚು ಹೆಚ್ಚು, ಶುಭ ಸುದ್ದಿ
    2 days ago
    ದಿನ ಭವಿಷ್ಯ
    ದಿನ ಭವಿಷ್ಯ | ಜುಲೈ 23 | ಕೈಗೊಂಡ ಕಾರ್ಯಗಳು ಪೂರ್ಣ, ವೃತ್ತಿ ಹಾಗೂ ಉದ್ಯೋಗದಲ್ಲಿ ಅನುಕೂಲಕರ ಪರಿಸ್ಥಿತಿ
    3 days ago
    today bhavishya
    ದಿನ ಭವಿಷ್ಯ | ಜುಲೈ 22 | ಉದ್ಯೋಗದಲ್ಲಿ ಗೊಂದಲದ ವಾತಾವರಣ, ಅರೋಗ್ಯದ ಬಗ್ಗೆ ಕಾಳಜಿ ವಹಿಸಿ
    4 days ago
    today bhavishya
    ದಿನ ಭವಿಷ್ಯ | ಜುಲೈ 21 | ಆರ್ಥಿಕ ಪರಿಸ್ಥಿತಿ ಅನುಕೂಲಕರ, ಉದ್ಯೋಗದಲ್ಲಿ ಕೆಲಸದ ಒತ್ತಡ
    5 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ | ಜುಲೈ 25 | ಹತ್ತಿ ರೇಟ್ ಎಷ್ಟಿದೆ?
    8 hours ago
    ಮಾರುಕಟ್ಟೆ ಧಾರಣೆ | ಜುಲೈ 24 | ಮೆಕ್ಕೆಜೋಳ, ರಾಗಿ ರೇಟ್….
    1 day ago
    ಮಾರುಕಟ್ಟೆ ಧಾರಣೆ | ಜುಲೈ 23 | ಹತ್ತಿ ರೇಟ್ ಎಷ್ಟಿದೆ?
    2 days ago
    ಮಾರುಕಟ್ಟೆ ಧಾರಣೆ | ಜುಲೈ 22 | ಶೇಂಗಾ, ರಾಗಿ ರೇಟ್ ಎಷ್ಟಿದೆ?
    3 days ago
    ಮಾರುಕಟ್ಟೆ ಧಾರಣೆ | ಜುಲೈ 21 | ಹತ್ತಿ ರೇಟ್ ಎಷ್ಟಿದೆ?
    4 days ago
  • ಹೊಳಲ್ಕೆರೆ
    ಹೊಳಲ್ಕೆರೆShow More
    3 ಕೋಟಿ ವೆಚ್ಚದ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಚಾಲನೆ
    3 ಕೋಟಿ ವೆಚ್ಚದ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ
    2 days ago
    ಮಾದಕ ವಸ್ತುಗಳ ಬಳಕೆ ತಡೆಗಟ್ಟುವಿಕೆ ವಿಷಯ ಕುರಿತು ಉಪನ್ಯಾಸಕ ಎಸ್.ಬಸವರಾಜು ಮಾತನಾಡಿದರು
    ಮಾದಕ ವಸ್ತುಗಳ ದುಶ್ಚಟಮುಕ್ತ ಜೀವನದಿಂದ ಉತ್ತಮ ಆರೋಗ್ಯ | ಎಸ್.ಬಸವರಾಜು
    7 days ago
    ಶಾಸಕ ಡಾ.ಎಂ.ಚಂದ್ರಪ್ಪ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ
    ಸಬೂಬು ಹೇಳಿಕೊಂಡು ಕಾಲಹರಣ ಮಾಡಿದರೆ ಸಹಿಸಲ್ಲ | KDP ಸಭೆಯಲ್ಲಿ ಶಾಸಕ ಎಂ.ಚಂದ್ರಪ್ಪ ಅಧಿಕಾರಿಗಳಿಗೆ ಎಚ್ಚರಿಕೆ 
    1 week ago
    ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇಸಿಸಿಇ ತರಬೇತಿ ಕಾರ್ಯಾಗಾರ
    ಹೊಳಲ್ಕೆರೆ : ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇಸಿಸಿಇ ತರಬೇತಿ ಕಾರ್ಯಾಗಾರ
    1 week ago
    ಪುರಾತನ ದೇವಾಲಯದ ಜೀರ್ಣೋದ್ಧಾರ, ವಿಶೇಷ ಪೂಜಾ ಕಾರ್ಯಕ್ರಮ
    ಈಗೀಗ ಮನುಷ್ಯ- ಮನುಷ್ಯರ ನಡುವೆ ಹೊಂದಾಣಿಕೆ, ಸಹಬಾಳ್ವೆ ಇಲ್ಲ | ಡಾ.ಕೇದಾರಲಿಂಗ ಶ್ರೀಗಳು
    2 weeks ago
  • ಹಿರಿಯೂರು
    ಹಿರಿಯೂರುShow More
    Power outage on May 1
    ಜೂನ್ 23 ರಂದು ಹಿರಿಯೂರು ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ
    1 month ago
    ವೈಷ್ಣವ
    ನಾಲ್ಕು ವರ್ಷದ ಬಾಲಕ ಸಾವು | ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಪುತ್ರ
    1 month ago
    Babburu Horticulture college
    ಕೃಷಿ ಪ್ರಾಯೋಗಿಕ ಮರು ಪರೀಕ್ಷೆ ಜೂನ್ 1ಕ್ಕೆ ನಿಗದಿ
    2 months ago
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    3 months ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    5 months ago
  • ಹೊಸದುರ್ಗ
    ಹೊಸದುರ್ಗShow More
    ಉಪನ್ಯಾಸ ಹಾಗೂ ಸ್ವಾಗತ ಸಮಾರಂಭ
    ಬಡತನ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಾಸ್ತ್ರ | ಶಾಂತವೀರ ಶ್ರೀ
    4 weeks ago
    ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ | 4 ಬೈಕುಗಳು ವಶಕ್ಕೆ
    1 month ago
    ಸುಜ್ಞಾನ ಸಂಗಮ, ಜೈನ ಸಮಾಜ ಬಾಂಧವರಿಗೆ ಸನ್ಮಾನ ಸಮಾರಂಭ
    ಸಾತ್ವಿಕತೆ ಇರುವಲ್ಲಿ ಸಹಬಾಳ್ವೆ, ಸೌಹಾರ್ದತೆ ಇರುತ್ತದೆ | ಶಾಂತವೀರ ಶ್ರೀ 
    1 month ago
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ 
    2 months ago
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    2 months ago
  • Life Style
    Life StyleShow More
    damaged skin after waxing
    ವ್ಯಾಕ್ಸಿಂಗ್ ನಂತರ ಹಾನಿಗೊಳಗಾದ ಚರ್ಮವನ್ನು ಗುಣಪಡಿಸಲು ಹೀಗೆ ಮಾಡಿ
    13 hours ago
    Phyllanthus amarus
    ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲನೆಲ್ಲಿ(ಫಿಲಾಂತಸ್ ಅಮರಸ್) ನೀರು ಕುಡಿದರೆ ಏನಾಗುತ್ತದೆ ಗೊತ್ತಾ?
    14 hours ago
    endometrial cancer that plague women
    ಮಹಿಳೆಯರನ್ನು ಕಾಡುವ ಎಂಡೊಮೆಟ್ರಿಯಲ್ ಕ್ಯಾನ್ಸರ್‍ನ ಲಕ್ಷಣಗಳ ಬಗ್ಗೆ ತಿಳಿಯಿರಿ
    2 days ago
    cow's milk to children
    ಒಂದು ವರ್ಷದೊಳಗಿನ ಮಕ್ಕಳಿಗೆ ಹಸುವಿನ ಹಾಲು ನೀಡಿದರೆ ಏನಾಗುತ್ತದೆ ಗೊತ್ತಾ?
    2 days ago
    Damaged electronic item
    ಹಾಳಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಮನೆಯಲ್ಲಿ ಇಡುವುದರಿಂದ ಏನಾಗುತ್ತದೆ ಗೊತ್ತಾ?
    3 days ago
Reading: ಭದ್ರೆಗಾಗಿ ಬೀದಿಗಿಳಿದ ಹಸಿರು ಪಡೆ | ಸಂಸದ ನಾರಾಯಣಸ್ವಾಮಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಸತ್ಯಾಗ್ರಹ
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

ಭದ್ರೆಗಾಗಿ ಬೀದಿಗಿಳಿದ ಹಸಿರು ಪಡೆ | ಸಂಸದ ನಾರಾಯಣಸ್ವಾಮಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಸತ್ಯಾಗ್ರಹ

chitradurganews.com
Last updated: 5 February 2024 22:23
chitradurganews.com
2 years ago
Share
ಭದ್ರೆಗಾಗಿ ಬೀದಿಗಿಳಿದ ಹಸಿರು ಪಡೆ
ಭದ್ರೆಗಾಗಿ ಬೀದಿಗಿಳಿದ ಹಸಿರು ಪಡೆ
SHARE

CHITRADURGA NEWS | 06 FEBRUARY 2024

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಮಹತ್ವಾಕಾಂಕ್ಷಿ ಯೋಜನೆ ಭದ್ರಾ ಮೇಲ್ದಂಡೆಗೆ ಕೇಂದ್ರ ಸರ್ಕಾರ ಕಳೆದ ಬಜೆಟ್‍ನಲ್ಲಿ ಅನುದಾನ ಘೋಷಣೆ ಮಾಡಿ, ಈವರೆಗೆ ಬಿಡುಗಡೆ ಮಾಡದ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಜಿಲ್ಲಾ ಪಂಚಾಯಿತಿ ಆವರಣದಲ್ಲಿರುವ ಸಂಸದ ಎ.ನಾರಾಯಣಸ್ವಾಮಿ ಅವರ ಕಚೇರಿ ಎದುರು ಅನಿರ್ಧಿಷ್ಠಾವಧಿ ಧರಣಿ ಆರಂಭಿಸಿದ್ದಾರೆ.

ಸೋಮವಾರ ನಗರದ ಕನಕ ವೃತ್ತದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸಿದ ನೂರಾರು ರೈತರು, ಯೋಜನೆಗೆ ಅನುದಾನ ನೀಡದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದರು.

ಇದನ್ನೂ ಓದಿ: ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಕಳೆದ ಬಜೆಟ್‍ನಲ್ಲಿಯೇ 5300 ಕೋಟಿ ರೂ.ಗಳನ್ನು ಘೋಷಣೆ ಮಾಡಿದೆ. ಆದರೆ, ಈವರೆಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ. ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡುವುದಾಗಿ ಹೇಳಿದ್ದವರು, ಈಗ ಅದನ್ನೂ ಮಾಡಿಲ್ಲ ಎಂದು ದೂರಿದರು.

ಸಂಸದ ನಾರಾಯಣಸ್ವಾಮಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಸತ್ಯಾಗ್ರಹ
ಸಂಸದ ನಾರಾಯಣಸ್ವಾಮಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಸತ್ಯಾಗ್ರಹ

ಈಗ ಕೇಂದ್ರ ಸರ್ಕಾರ ಯೋಜನೆಗೆ ಕನಿಷ್ಟ ಒಂದು ಸಾವಿರ ಕೋಟಿಯನ್ನಾದರೂ ಬಿಡುಗಡೆ ಮಾಡುವವರೆಗೆ ಧರಣಿ ಮುಗಿಸುವುದಿಲ್ಲ. ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಯಿಂದ ಒಂದೊಂದು ದಿನ ರೈತರು ಬರುವಂತೆ ಮಾಡಲಾಗುತ್ತಿದೆ ಎಂದು ರೈತ ಸಂಘದವರು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳ ನೇಮಕ

ಅನುದಾನ ಬಿಡುಗಡೆ ಆಗುವವರೆಗೆ ಜಾಗ ಬಿಡಲ್ಲ:

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮಾತನಾಡಿ, ಭದ್ರಾಮೇಲ್ದಂಡೆ ಯೋಜನೆಗಾಗಿ ಕಳೆದ 30-40 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಐದು ವರ್ಷಗಳಾದರೂ ಏಕೆ ನಯಾ ಪೈಸೆಯನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿಲ್ಲ. ಮೊದಲನೆ ಕಂತಿನ ಹಣ ಬಿಡುಗಡೆಯಾಗುವತನಕ ಜಾಗ ಬಿಟ್ಟು ಕದಲುವುದಿಲ್ಲ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಗಳನ್ನು ಘೋಷಿಸಿರುವುದನ್ನು ಬಿಟ್ಟರೆ ಇದುವರೆಗೂ ಹಣ ಬಿಡುಗಡೆಯಾಗಿಲ್ಲ. ಒಂದೊಂದು ಚುನಾವಣೆಯಲ್ಲೂ ವಿವಿಧ ಪಕ್ಷಗಳು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿಕೊಂಡು ರೈತರನ್ನು ವಂಚಿಸುತ್ತ ಬರುತ್ತಿವೆ. ಕಳೆದ ಬಜೆಟ್‍ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಗಳನ್ನು ತೆಗೆದಿಟ್ಟಿರುವುದಾಗಿ ಭಾಷಣ ಮಾಡಿದರು. ಹಣ ಮಾತ್ರ ಏಕೆ ನೀಡುತ್ತಿಲ್ಲ ಎಂದು ಜಿಲ್ಲೆಯ ಶಾಸಕರು, ಕೇಂದ್ರ ಮಂತ್ರಿ ಹಾಗೂ ಪ್ರಧಾನ ಮಂತ್ರಿಯನ್ನು ಪ್ರಶ್ನಿಸಿದರು.?

ಇದನ್ನೂ ಓದಿ: ಚಿತ್ರದುರ್ಗ ನಗರಸಭೆ ಬಜೆಟ್ ಸಾರ್ವಜನಿಕರಿಂದ ಅಲಹೆಗಳ ಆಹ್ವಾನ

ರಾಜ್ಯಾದ್ಯಂತ ಭೀಕರ ಬರಗಾಲವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಾಟಕವಾಡುತ್ತಿವೆ. ಎಲ್ಲಾ ತಕರಾರಿದೆಯೋ ಅಲ್ಲಿ ತ್ವರಿತವಾಗಿ ಕೆಲಸ ಮಾಡಬೇಕು. ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸಿದರೆ ಬೋರ್‍ವೆಲ್‍ಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತದೆ. ರೈತ ಕುಲ ಬೇಡಿದ ಕುಲವಲ್ಲ. ಕೊಟ್ಟ ಕುಲ. 64 ಲಕ್ಷ ಜೀವರಾಶಿಗಳನ್ನು ಸಾಕಿ ಸಲಹಿದ್ದೇವೆ. ರೈತರು ಮತ್ತು ಯೋಧರನ್ನು ನೆನಸಿಕೊಂಡು ದೇಶದ ಜನ ಊಟ ಮಾಡಬೇಕು. ಸಾವಯವ ಕೃಷಿ ಕಡೆ ರೈತರು ಗಮನ ಹರಿಸಬೇಕು. ಸಾಲಕ್ಕೆ ನಾವು ಹೊಣೆಗಾರರಲ್ಲ. ಸರ್ಕಾರ ಜವಾಬ್ದಾರಿ. ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಸಾಲ ವಸೂಲಿಗೆ ಹಳ್ಳಿಗೆ ಬಂದರೆ ದೇವರ ಕಂಬಕ್ಕೆ ಕಟ್ಟಿ ಎಂದು ರೈತರಿಗೆ ಹೆಚ್.ಆರ್.ಬಸವರಾಜಪ್ಪ ಕರೆ ನೀಡಿದರು.

ಇದು ನಮ್ಮ ಜೀವನ್ಮರಣದ ಹೋರಾಟ:

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ, ಕಳೆದ ಹದಿನೈದು ವರ್ಷಗಳಿಂದ ಎಲ್ಲಾ ರಾಜಕಾರಣಿಗಳು ಅಧಿಕಾರ ನಡೆಸಿ ಕೈಚೆಲ್ಲಿದ್ದಾಯಿತು. ಭದ್ರಾಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿಲ್ಲ. ಭದ್ರಾಮೇಲ್ದಂಡೆ ಯೋಜನೆ ಇಂದಲ್ಲ ನಾಳೆ ಪೂರ್ಣಗೊಂಡು ಜಿಲ್ಲೆಗೆ ನೀರು ಹರಿಯುತ್ತದೆಂದು ದೇವೇಂದ್ರನ ಆನೆ ರೀತಿ ನೋಡುತ್ತಿದ್ದೇವೆ. ಹಾಗಾಗಿ ಕೇಂದ್ರ ಮಂತ್ರಿ ಕಚೇರಿ ಮುಂಭಾಗ ಅಹೋರಾತ್ರಿ ಧರಣಿಗೆ ಮುಂದಾಗಿದ್ದೇವೆ. ಅಬ್ಬಿನಹೊಳಲು ಬಳಿ 1.6 ಆರು ಕಿ.ಮೀ. ನಷ್ಟು ಸಮಸ್ಯೆಯಿರುವುದನ್ನು ಸರಿಪಡಿಸಿ ಶೀಘ್ರವೇ ಯೋಜನೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಭದ್ರೆಗಾಗಿ ಬೀದಿಗಿಳಿದ ಹಸಿರು ಪಡೆ
ಭದ್ರೆಗಾಗಿ ಬೀದಿಗಿಳಿದ ಹಸಿರು ಪಡೆ

ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಹೆಚ್ಚಿನ ಪರಿಹಾರ ಕೊಡಬೇಕು. ತುಂಗಾದಿಂದ ಭದ್ರೆಗೆ ಎರಡು ಕಡೆ ಲಿಫ್ಟ್ ಕೆಲಸ ಪೂರ್ಣವಾಗಬೇಕು. ಜಿಲ್ಲೆಯಲ್ಲಿ ಎಲ್ಲಾ ಕೆರೆಗಳಿಗೆ ನೀರು ಹರಿಸಬೇಕು. ಒಂದು ತಿಂಗಳ ಹಿಂದೆ ಎಂ.ಪಿ.ಕಚೇರಿಗೆ ಮುತ್ತಿಗೆ ಹಾಕುವುದಾಗಿ ತಿಳಿಸಿದ್ದೆವು. ಇದುವರೆವಿಗೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.

ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ದೇವಮೂಲೆಯಿಂದ ಪ್ರಚಾರ ಆರಂಭಿಸಿದ ಎಂ.ಸಿ.ರಘುಚಂದನ್

ಜಿಲ್ಲೆಯ ಅಭಿವೃದ್ದಿ ಮುಖ್ಯವೆ ವಿನಃ ರಾಜಕಾರಣ ಪ್ರಮುಖವಾಗಬಾರದು. ಇದು ನಮ್ಮ ಜೀವನ್ಮರಣದ ಹೋರಾಟ. ಹಣ ಬಿಡುಗಡೆಯಾಗುವತನಕ ಧರಣಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್, ಪ್ರಧಾನ ಕಾರ್ಯದರ್ಶಿ ಆರ್.ಬಿ.ನಿಲಿಂಗಪ್ಪ, ಅಪ್ಪರಸನಹಳ್ಳಿ ಬಸವರಾಜ್, ಸುಲ್ತಾನಿಪುರ ರಾಮರೆಡ್ಡಿ, ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಸೋಮಗುದ್ದು ರಂಗಸ್ವಾಮಿ, ಹೆಚ್.ಸಿದ್ದಪ್ಪ, ಕುರುಬರಹಳ್ಳಿ ಶಿವಣ್ಣ, ಚಿಕ್ಕಬ್ಬಿಗೆರೆ ನಾಗರಾಜ್, ವನಜಮ್ಮ, ನಾಗರತ್ನ, ಕಮಲಮ್ಮ, ಮಂಜುಳ, ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಎಲ್ಲಾ ತಾಲ್ಲೂಕು ಅಧ್ಯಕ್ಷರು, ವಿವಿಧ ಜನಪರ ಸಂಘಟನೆಗಳು ಧರಣಿಯಲ್ಲಿ ಪಾಲ್ಗೊಂಡಿದ್ದವು.

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:Bhadra Upper BankCentral GovtChitradurgaIndefinite sit-inKarnataka State Farmers AssociationMP office siegeಅನಿರ್ಧಿಷ್ಟಾವಧಿ ಧರಣಿಎಂಪಿ ಕಚೇರಿಗೆ ಮುತ್ತಿಗೆಕರ್ನಾಟಕ ರಾಜ್ಯ ರೈತ ಸಂಘಕೇಂದ್ರ ಸರ್ಕಾರಚಿತ್ರದುರ್ಗಭದ್ರಾ ಮೇಲ್ದಂಡೆ
Share This Article
Facebook Email Print
Previous Article ಅಡಿಕೆ ಸಿಪ್ಪೆಯಿಂದ ಕಾಂಪೋಸ್ಟ್ ತಯಾರಿ | ಸುಧಾರಿತ ಅಡಿಕೆ ಬೇಸಾಯ ತರಬೇತಿ | ಆಸಕ್ತ 50 ರೈತರಿಗೆ ಅವಕಾಶ
Next Article ಹೊಳಲ್ಕೆರೆಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯ ಚೆಕ್‍ಬೌನ್ಸ್ ಕೇಸ್ | ಗ್ರಾಮ ಲೆಕ್ಕಾಧಿಕಾರಿಗೆ ಜೈಲು ಶಿಕ್ಷೆ
Leave a Comment

Leave a Reply Cancel reply

Your email address will not be published. Required fields are marked *

MLA K.C.Virendra (Pappi)
ಚಿತ್ರದುರ್ಗ ತಾಲ್ಲೂಕಿನ 8 ಕೆರೆಗಳಿಗೆ ಸಂಪುಟದ ಅನುಮೋದನೆಗೆ ಶಾಸಕ ವೀರೇಂದ್ರ ಪಪ್ಪಿ ಮನವಿ
ಮುಖ್ಯ ಸುದ್ದಿ
ರೈತರ ನೆಲಕ್ಕೆ ಕಾಲಿಟ್ಟು ಒಣಗಿದ ಬೆಳೆ ವೀಕ್ಷಿಸಿದ CM ಡಿ.ಕೆ.ಶಿವಕುಮಾರ್
ರೈತರ ನೆಲಕ್ಕೆ ಕಾಲಿಟ್ಟು ಒಣಗಿದ ಬೆಳೆ ವೀಕ್ಷಿಸಿದ ನಾಡದೊರೆ
ಮುಖ್ಯ ಸುದ್ದಿ
ಕೇಂದ್ರೀಯ ವಿದ್ಯಾಶಾಲೆಗೆ ಸಂಸದ ಗೋವಿಂದ ಕಾರಜೋಳ ಭೇಟಿ
ಜಾಲಿಕಟ್ಟೆ ಗ್ರಾಮದ ಬಳಿ ಕೇಂದ್ರೀಯ ವಿದ್ಯಾಲಯ ಸ್ವಂತ ಕಟ್ಟಡ ನಿರ್ಮಾಣ | ಸಂಸದ ಗೋವಿಂದ ಕಾರಜೋಳ 
ಮುಖ್ಯ ಸುದ್ದಿ
ಬೆಂಗಳೂರು ವಿಭಾಗ ಮಟ್ಟದ ಪರಿಶೀಲನಾ ಸಭೆ
ಪ್ರಜಾಸೇವೆ ನೂತನ ಇಲಾಖೆ ಪ್ರಾರಂಭ | ಸಿಎಂ ಡಿಕೆಶಿ 
ಮುಖ್ಯ ಸುದ್ದಿ
© Chitradurga News 2025 | Powered By Karnatakabest.com

Loading Comments...

    Welcome Back!

    Sign in to your account

    Username or Email Address
    Password

    Lost your password?

    Not a member? Sign Up