
CHITRADURGA NEWS | 05 FEBRUARY 2024
ಚಿತ್ರದುರ್ಗ: ನಗರದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಶಿಕ್ಷಕರು ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 24 ಕಡೆಯ ದಿನವಾಗಿದೆ.
ಬಿಎ, ಎಂಎ, ಬಿ.ಇಡಿ ಪದವಿ ಪಡೆದಿರುವ ಅರ್ಹರಿಗೆ ಇಂಗ್ಲೀಷ್ ಮತ್ತು ಸಮಾಜ ವಿಜ್ಞಾನ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ: ಬಿಜೆಪಿಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳ ನೇಮಕ
ದೈಹಿಕ ಶಿಕ್ಷಕರ ಹುದ್ದೆಗೆ ಬಿಪಿಇಡಿ, ಬಿಎ, ಎಂಎ, ಮ್ಯೂಸಿಕ್ ಪದವೀಧರರಿಗೆ ಮ್ಯೂಸಿಕ್ ಶಿಕ್ಷಕರು ಹಾಗೂ ಡ್ಯಾನ್ಸ್ ವಿಷಯದಲ್ಲಿ ಯಾವುದೇ ಡಿಗ್ರಿ ಆದವರಿಗೆ ಡ್ಯಾನ್ಸ್ ಶಿಕ್ಷಕರ ಹುದ್ದೆ ಖಾಲಿಯಿದೆ.
ಮಾಸ್ಟರ್ ಇನ್ ಯೋಗ ಆದವರಿಗೆ ಯೋಗ ಶಿಕ್ಷಕರ ಹುದ್ದೆ, ಸಿಟಿಟಿಸಿ ಕೋರ್ಸ್ ಆಗಿರುವ ಅಭ್ಯರ್ಥಿಯಿಂದ ಕಂಪ್ಯೂಟರ್ ಶಿಕ್ಷಕರ ಹುದ್ದೆ, ಬಿಎ ಡ್ರಾಯಿಂಗ್ ಆಗಿರುವವರಿಗೆ ಡ್ರಾಯಿಂಗ್ ಶಿಕ್ಷಕರ ಹುದ್ದೆಗಳು ಖಾಲಿಯಿವೆ.
ಮೇಲಿನ ಎಲ್ಲ ಹುದ್ದೆಗಳಿಗೆ ಕನಿಷ್ಟ 2-3 ವರ್ಷ ಸೇವಾ ಅನುಭವ ಇರಬೇಕು.
ಇದನ್ನೂ ಓದಿ: ಚಿತ್ರದುರ್ಗ ನಗರಸಭೆ ಬಜೆಟ್ | ಸಾರ್ವಜನಿಕರ ಸಲಹೆಗಳ ಆಹ್ವಾನ
ಗುಮಾಸ್ತರ ಹುದ್ದೆಗೆ ಯಾವುದೇ ಪದವೀ ಪಡೆದವರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಕನಿಷ್ಟ 1 ವರ್ಷ ಅನುಭವ ಹಾಗೂ ಎಲ್ಲರಿಗೂ ಇಂಗ್ಲೀಷ್ ಸಂವಹನ ಭಾಷೆಯಾಗಿ ತಿಳಿದಿರಬೇಕು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ದೂರವಾಣಿ 08194-295593, 8147937971, 9449399481 ಸಂಪರ್ಕಿಸಲು ಕೋರಿದೆ.
ನಿಮ್ಮ ಅರ್ಜಿಯನ್ನು ಇ-ಮೇಲ್ jbvmrp@gmail.com ಹಾಗೂ jbvmcta@gmail.com ವಿಳಾಸಕ್ಕೆ ಕಳುಹಿಸಬಹುದು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
