
CHITRADURGA NEWS | 25 DECEMBER 2025
ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕು ತುರುವನೂರು ಹೋಬಳಿ ಬೆಳಗಟ್ಟ ಗ್ರಾಮದ ಪುಷ್ಪಾ (25) ಅವರು ಅನುಮಾನಾಸ್ಪದ ಸಾವಿಗಿಡಾಗಿದ ಹಿನ್ನಲೆಯಲ್ಲಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.
ಇದನ್ನೂ ಓದಿ: ಅಡಿಕೆ ಧಾರಣೆ | ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಬೆಲೆ ಚೇತರಿಕೆ

ತುರುವನೂರು ಹೋಬಳಿಯ ಬೆಳಗಟ್ಟ ಗ್ರಾಮದ ಪುಷ್ಪಾ (25) ಎಂಬ ಯುವತಿ ಪರಿಶಿಷ್ಟ ಜಾತಿ, ಅದೇ ಗ್ರಾಮದ ಹರೀಶ್ (28) ಪರಿಶಿಷ್ಟ ಜಾತಿ(ಪರಿಶಿಷ್ಟ ಜಾತಿಯ ಮತ್ತೊಂದು ವರ್ಗ) ಇವರೊಂದಿಗೆ 4 ವರ್ಷಗಳ ಕೆಳಗೆ ವಿವಾಹವಾಗಿರುತ್ತಾರೆ.
ಡಿ.22 ರಂದು ಕಾಟೀಹಳ್ಳಿ ಗ್ರಾಮದಲ್ಲಿನ ಮನೆಯಲ್ಲಿರುವ ಕೊಟ್ಟಿಗೆಯಲ್ಲಿ ಅನುಮಾನಸ್ಪದವಾಗಿ ಮಹಿಳೆ ಸಾವಿಗೀಡಾಗಿದ್ದು, ಸ್ಥಳೀಯ ಮಾಧ್ಯಮಗಳ ಮೂಲಕ ಮಾಹಿತಿ ತಿಳಿದುಕೊಂಡು, ಸಮಾಜ ಕಲ್ಯಾಣ ಇಲಾಖಾಧಿಕಾರಿಗಳು ಸಾವಿಗೀಡಾದ ಮಹಿಳೆಯ ಕುಟುಂಬಸ್ಥರನ್ನು ಭೇಟಿ ಮಾಡಿ, ಅವರ ತಂದೆಯಾದ ಸೋಮಣ್ಣ (56), ತಾಯಿ ಪೆನ್ನಮ್ಮ (50), ಅಕ್ಕ ಶೃತಿ, ಸುಮ, ಸೊಸೆಯಾದ ಶ್ರೀದೇವಿ ಅವರುಗಳನ್ನು ಭೇಟಿ ಮಾಡಿ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಕುಟುಂಬಸ್ಥರು ತೀವ್ರ ಆಕ್ರಂದನ ವ್ಯಕ್ತಪಡಿಸಿದ್ದು, ನನ್ನ ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡಲು ಉಚಿತ ಕಾನೂನು ಸೇವಾ ವ್ಯವಸ್ಥೆಯನ್ನು ಮಾಡಲು ಹಾಗೂ ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವುದರಿಂದ ಇಲಾಖೆಯಿಂದ ಸಹಾಯ ಮಾಡಲು ಕೋರಿದರು.
ಇದನ್ನೂ ಓದಿ: ಗರ್ಭಿಣಿ ಮಗಳನ್ನು ತಂದೆಯೇ ಹತ್ಯೆ ಮಾಡಿರುವ ಘಟನೆಗೆ ಮಾದಾರ ಚನ್ನಯ್ಯ ಶ್ರೀ ತೀವ್ರ ಖಂಡನೆ
ಸಾವಿಗೀಡಾದ ಮಹಿಳೆಯ ಕುಟುಂಬಸ್ಥರಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿಯಮಾನುಸಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಹಾಗೂ ಮೇಲ್ವಿಚಾರಣೆಯನ್ನು ಮಾಡಲಾಗುವುದು. ಯಾವುದೇ ಕ್ಷಣದಲ್ಲಿ ಸೂಕ್ತ ರಕ್ಷಣೆ ಮತ್ತು ಭದ್ರತೆ ನೀಡಲು ಸಂಬಂಧಪಟ್ಟವರಿಗೆ ತಿಳಿಸಲಾಗುವುದು.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸೇವಾ ಕಾನೂನು ಪ್ರಾಧಿಕಾರದಿಂದ ಅಗತ್ಯ ನೆರವು ಮತ್ತು ಕುಟುಂಬಕ್ಕೆ ಇಲಾಖೆಯಿಂದ ಯಾವುದಾದರೂ ಸೌಲಭ್ಯಗಳಿದ್ದಲ್ಲಿ ಒದಗಿಸಿಕೊಡಲಾಗುವುದು ಎಂದು ಕುಟುಂಬಸ್ಥರಿಗೆ ಭರವಸೆ ನೀಡಲಾಯಿತು.
ಇದನ್ನೂ ಓದಿ: ಎರಡನೇ ಶಬರಿಮಲೆಯಾದ ಚಿತ್ರದುರ್ಗ ಅಯ್ಯಪ್ಪಸ್ವಾಮಿ ದೇವಸ್ಥಾನ | ಇರುಮುಡಿ ಹೊತ್ತು ಬರುತ್ತಿದ್ದಾರೆ ಭಕ್ತರು
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕರಾದ ಮಲ್ಲಿಕಾರ್ಜುನ್, ಸಹಾಯಕ ನಿರ್ದೇಶಕರಾದ ಓ.ಪರಮೇಶ್ವರಪ್ಪ, ನಿಲಯಪಾಲಕರಾದ ಬಿ.ಹೆಚ್. ನಾಗರಾಜ ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
