
ಚಿತ್ರದುರ್ಗ ನ್ಯೂಸ್.ಕಾಂ:
ನನಗೆ ಈ ವಿಚಾರ ಬೆಳೆಸಲು ಇಷ್ಟವಿರಲಿಲ್ಲ. ನನಗೆ ಅಭಿಮಾನವಿದೆ. ಯಾರೋ ಹೇಳಿಕೊಟ್ಟಿದ್ದಾರೆ ಎಂದು ಮಾತನಾಡಲು ನಾನು ಸಣ್ಣ ಹುಡುಗನಲ್ಲ ಎಂದು ಹೊಸದುರ್ಗ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಮತ್ತೊಂದು ಆಡಿಯೋವನ್ನು ತಮ್ಮ ವಾಟ್ಸಪ್ ಸ್ಟೇಟಸ್‍ಗೆ ಹಾಕಿಕೊಂಡಿದ್ದಾರೆ.
ಮೂರು ದಿನಗಳ ಹಿಂದಷ್ಟೇ ಆರೆಸ್ಸೆಸ್ಸ್ ಕೇಂದ್ರ ಕಚೇರಿ ನಾಗಪುರದಲ್ಲಿರುವ ಡಾ.ಹೆಡಗೇವಾರ್ ಮ್ಯೂಸಿಯಂ ಪ್ರವೇಶ ನಿರಾಕರಣೆ ವಿಚಾರವಾಗಿ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಸ್ಪಷ್ಟನೆ ನೀಡಬೇಕು ಎಂದು ಆಡಿಯೋ ಒಂದನ್ನು ಹರಿಬಿಟ್ಟಿದ್ದರು.

ಇದನ್ನೂ ಓದಿ: ಮಠ, ಪೀಠದ ಅಧಿಕಾರ ಮರಳಿ ಪಡೆದ ಮುರುಘಾ ಶರಣರು
ಈ ಆಡಿಯೋ ರಾಜ್ಯದ್ಯಂತ ಸದ್ದು ಮಾಡಿತು, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಟ್ವೀಟ್ ಮಾಡಿದರು. ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಅನೇಕರು ಪರ, ವಿರೋಧವಾಗಿ ಪ್ರತಿಕ್ರಿಯಿಸಿದರು.
ಅಂತಿಮವಾಗಿ ಆರೆಸ್ಸೆಸ್ಸ್ ಕರ್ನಾಟಕ ಘಟಕದಿಂದ ಗೂಳಿಹಟ್ಟಿ ಶೇಖರ್ ಎತ್ತಿರುವ ವಿಚಾರಗಳ ಬಗ್ಗೆ ಸ್ಪಷ್ಟನೆಯನ್ನೂ ನೀಡಲಾಯಿತು. ಆರೆಸ್ಸೆಸ್ಸ್ ಸದಾ ಎಲ್ಲರನ್ನೂ ತೆರೆದ ಮನಸ್ಸಿನಿಂದ ಸ್ವಾಗತಿಸುತ್ತದೆ. ಇಲ್ಲಿ ಅಸ್ಪøಶ್ಯತೆ ಇಲ್ಲ ಎಂದಿತ್ತು.
ಆದರೆ, ಶುಕ್ರವಾರ ರಾತ್ರಿ ಗೂಳಿಹಟ್ಟಿ ಶೇಖರ್ ಈ ಸಂಬಂಧ ಮತ್ತೊಂದು ಆಡಿಯೋ ಮಾಡಿ ಹೊರಗೆ ಬಿಟ್ಟಿದ್ದು, ಅದರಲ್ಲಿ ಈ ವಿಚಾರವನ್ನು ಬೆಳೆಸುವುದು ನನಗೆ ಇಷ್ಟವಿರಲಿಲ್ಲ. ನನಗೆ ಅಭಿಮಾನವಿದೆ. ಯಾರೋ ಹೇಳಿದಂತೆ ಮಾತನಾಡಲು ನಾನು ಸಣ್ಣ ಹುಡುಗನಲ್ಲ ಎಂದು ಆರೆಸ್ಸೆಸ್ಸ್ ಹೆಸರು ಹೇಳದೆ ಪ್ರಸ್ತಾಪ ಮಾಡಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ-ತುಮಕೂರು ನಡುವೆ ಏರ್‍ಪೋರ್ಟ್(AIRPORT) ನಿರ್ಮಾಣಕ್ಕೆ ಚಿಂತನೆ
ತಮ್ಮ ಹೇಳಿಕೆ ಸಂಬಂಧ ರಾಜ್ಯದ ಹಲವು ನಾಯಕರು ಮಾಡಿದ ಟೀಕೆ, ಟಿಪ್ಪಣಿಗಳಿಗೆ ಪ್ರತಿಕ್ರಿಯೆ ರೂಪದಲ್ಲಿ ಈ ಆಡಿಯೋ ಇದ್ದು, ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಎಸ್.ಸುರೇಶ್ ಕುಮಾರ್, ಮಾಜಿ ಶಾಸಕ ರಾಜೀವ್, ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ ಹಾಗೂ ತಮ್ಮನ್ನು ಕುರಿತು ಪ್ರತಿಕ್ರಿಯೆ ನೀಡಿದವರಿಗೆ ಮಾಜಿ ಶಾಸಕ ಗೂಳಿಹಟ್ಟಿ ಶೆಖರ್ ತಿರುಗೇಟು ನೀಡಿದ್ದಾರೆ.
ನಾನು ಅಲ್ಲಿಗೆ ಹೋಗಿದ್ದ ಸಿಸಿ ಟಿವಿ ಫೂಟೇಜ್ ರಿಲೀಸ್ ಮಾಡಿಸಿ. ನಿಮ್ಮ ಮನೆಗಳಲ್ಲಿ ಕಸ ಹೊಡೆಯುತ್ತೇನೆ, ಗೇಟ್ ಕಾಯುತ್ತೇನೆ ಎಂದು ಸವಾಲು ಹಾಕಿದ್ದಾರೆ.
ನಾನು ಹೋಗಿದ್ದು, ಅತ್ಯಂತ ಸೂಕ್ಷ್ಮ ಪ್ರದೇಶಕ್ಕೆ ಹೋಗಿದ್ದು, ಅತಿಯಾದ ಗೌರವ ಕೊಡುತ್ತೇನೆ. ಆದರೆ, ನಾನು ಅಲ್ಲಿ ಒಳಗೆ ಹೋಗಿರುವ ದೃಶ್ಯಾವಳಿ ಕೊಡಿಸಿದರೆ ನನ್ನ ಮೇಲೆ ಕಮೆಂಟ್ ಮಾಡಿದವರ ಮನೆಗಳಲ್ಲಿ ಕೆಲಸ ಮಾಡುತ್ತೇನೆ.
8 ತಿಂಗಳ ಹಿಂದೆಯೇ ಈ ವಿಷಯವನ್ನು ನಾನು ಹೇಳಿದ್ದರೆ ಇನ್ನೊಂದಿಷ್ಟು ಸೀಟುಗಳನ್ನು ಕಳೆದುಕೊಳ್ಳುತ್ತಿದ್ದಿರಿ. ಹಾಗಾಗಿ ನೀವೆಲ್ಲಾ ಯಾರನ್ನೋ ಮೆಚ್ಚಿಸಲು ಮಾತನಾಡಬೇಡಿ ಎಂದು ಗೂಳಿಹಟ್ಟಿ ಮತ್ತೆ ಕುಟುಕಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
