ಚಿತ್ರದುರ್ಗ ನ್ಯೂಸ್.ಕಾಂ:
ನನ್ನ ವಾಯ್ಸ್ ಒಂಥರಾ ಇರುತ್ತೆ ಅಂತಾ ಮಾಜಿ ಶಾಸಕ ರಾಜೀವ್ ಅವರು ಹೇಳಿದ್ದಾರೆ. ರಾಜೀವಣ್ಣ ನೀವು ಪಿಂಚಣಿ ತೆಗೆದುಕೊಳ್ಳುತ್ತಿರಲ್ಲಾ ಅದು ನಮ್ಮಂಥಾ ಕುಡುಕರಿಂದ ತೆಗೆದುಕೊಳ್ಳುತ್ತಿದ್ದೀರಿ ಎಂದು ಹೊಸದುರ್ಗ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಪ್ರತಿಕ್ರಿಯಿಸಿದ್ದಾರೆ.
ಈ ಸಂಬಂಧ ಆಡಿಯೋ ಮಾಡಿ ವಾಟ್ಸಪ್ ಸ್ಟೇಟಸ್‍ಗೆ ಹಾಕಿಕೊಂಡಿರುವ ಗೂಳಿಹಟ್ಟಿ ಶೇಖರ್, ಕುಡಿತದಿಂದ ಒಂದು ವರ್ಷಕ್ಕೆ 36 ಸಾವಿರ ಕೋಟಿ ರಾಜ್ಯ ಸರ್ಕಾರಕ್ಕೆ ಆದಾಯವಿದೆ. ನನಗೂ ಪೆನ್ಶನ್ ಬರುತ್ತೆ. ಈ ಹಣ ಬರುವುದು ಇದೇ ಹಣದಿಂದ. ಸರ್ಕಾರ ಮುದ್ರಣ ಮಾಡುವುದಿಲ್ಲ. ಹಾಗಾಗಿ ಲಘುವಾಗಿ ಮಾತನಾಡಬಾರದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಠ, ಪೀಠದ ಅಧಿಕಾರ ಮರಳಿ ಪಡೆದ ಮುರುಘಾ ಶರಣರು
ರಾಜೀವಣ್ಣ ನಾನು ಗೆದ್ದಿರುವುದು ಸಾಮಾನ್ಯ ಕ್ಷೇತ್ರದಲ್ಲಿ. ನನ್ನ ಸಮುದಾಯ ಈ ಕ್ಷೇತ್ರದಲ್ಲಿ 3-4 ಸಾವಿರ ಇರಬಹುದು ಅಷ್ಟೇ. ಮೀಸಲು ಕ್ಷೇತ್ರದಲ್ಲಿ ಗೆದ್ದಿಲ್ಲ. 38 ವರ್ಷಕ್ಕೆ ನಾನು ಮಂತ್ರಿಯಾಗಿದ್ದೆ. ಮತ್ತೊಬ್ಬರನ್ನು ಮೆಚ್ಚಿಸಲು ನಾನು ರೆಡಿಯಿಲ್ಲ.
35 ವರ್ಷಕ್ಕೆ ನಾನು ಮರ್ಡರ್ ಆಗಬೇಕಿತ್ತು, ಇಲ್ಲ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಆದರೆ, 55 ವರ್ಷ ಬದುಕಿರುವುದು ಗ್ರೇಟ್ ಎಂದು ಹೇಳಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

