By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ಭೂ ಒಡೆತನ ಯೋಜನೆ
    ಭೂ ಒಡೆತನ ಯೋಜನೆಯಡಿ ಆಸಕ್ತ ಭೂ ಮಾಲೀಕರಿಂದ ಜಮೀನು ಖರೀದಿ
    33 minutes ago
    ಅಂಚೆ ಜೀವ ವಿಮೆ ಪ್ರತಿನಿಧಿಗಳ ನೇಮಕಾತಿ | ನೇರ ಸಂದರ್ಶನ
    34 minutes ago
    ನೆಲ್ಲಿಕಟ್ಟೆ ಗ್ರಾಮದಲ್ಲಿ 1.25 ಕೋಟಿ ವೆಚ್ಚದ ಚೆಕ್‍ಡ್ಯಾಂ ಗೋಕಟ್ಟೆ ನಿರ್ಮಾಣಕ್ಕೆ ಭೂಮಿಪೂಜೆ
    ನೆಲ್ಲಿಕಟ್ಟೆ ಗ್ರಾಮದಲ್ಲಿ 1.25 ಕೋಟಿ ವೆಚ್ಚದ ಚೆಕ್‍ಡ್ಯಾಂ ಗೋಕಟ್ಟೆ ನಿರ್ಮಾಣಕ್ಕೆ ಭೂಮಿಪೂಜೆ 
    36 minutes ago
    ಡಿಜಿಟಲ್ ಡೆಮಾಗ್ರಫಿ ಮತ್ತು ಆರ್ಟಿಫಿಷಿಯಲ್ ಇನ್‌ಟೆಲಿಜನ್ಸ್ ಕಾರ್ಯಾಗಾರ
    ಡಿಜಿಟಲ್ ಡೆಮಾಗ್ರಫಿ ಮತ್ತು ಆರ್ಟಿಫಿಷಿಯಲ್ ಇನ್‌ಟೆಲಿಜನ್ಸ್ ಕಾರ್ಯಾಗಾರ ಯಶಸ್ವಿ
    14 hours ago
    ವಿಧಾನಸಭಾ ಕ್ಷೇತ್ರದ ಬಿಜೆಪಿ ನಗರ ಮಂಡಲದ ಮಾಸಿಕ ಸಭೆ
    ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ನಗರ ಮಂಡಲದ ಮಾಸಿಕ ಸಭೆ 
    14 hours ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    ಚಿತ್ರದುರ್ಗ ಅಪರಾಧ
    ಜಾನುಕೊಂಡ ಬಳಿ ಭೀಕರ ಅಪಘಾತ | ಇಬ್ಬರು ಕುರಿಗಾಯಿಗಳು, 14 ಕುರಿ ಧಾರುಣ ಸಾವು
    3 days ago
    Accident near molakalmuru
    ಮೊಳಕಾಲ್ಮೂರು ಬಳಿ ಮತ್ತೊಂದು ಅಪಘಾತ | ಚಳ್ಳಕೆರೆಯ 5 ಜನ ಸಾವು | ಒಂದೇ ದಿನದ ಅಂತರದಲ್ಲಿ ಜಿಲ್ಲೆಯಲ್ಲಿ ಹತ್ತು ಸಾವು
    1 week ago
    ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ | 5 ಜನರ ದುರ್ಮರಣ
    2 weeks ago
    Accident between bike and car
    ಬೈಕ್‌ – ಕಾರು ನಡುವೆ ಅಪಘಾತ | ಸ್ಥಳದಲ್ಲೇ ಇಬ್ಬರು ಮೃತ
    2 weeks ago
    ಬೈಕ್ – ಕಾರ್ ನಡುವೆ ಭೀಕರ ಅಪಘಾತ | ಬೈಕ್ ಸವಾರರು ಇಬ್ಬರು ಸಾವು
    2 months ago
  • ತಾಲೂಕು
    ತಾಲೂಕುShow More
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ 
    6 days ago
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    6 days ago
    ವಾಲಿಬಾಲ್ ಹೊನಲು ಬೆಳಕಿನ ಪಂದ್ಯಾವಳಿ
    ಸೋಲು ಮುಂದಿನ ಗೆಲುವಿಗೆ ಪ್ರೇರಣೆ | ಸಾಣೇಹಳ್ಳಿ ಶ್ರೀ 
    2 weeks ago
    ರಂಗಶಾಲಾ ನಾಟಕೋತ್ಸವ
    ಸಾಣೇಹಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ರಂಗಶಾಲಾ ನಾಟಕೋತ್ಸವ
    2 weeks ago
    ಕುಂಚಿಟಿಗ ಮಠದಲ್ಲಿ ವಿಶ್ವ ತಾಯಂದಿರ ದಿನಾಚರಣೆ
    ತಾಯಂದಿರ ದಿನಾಚರಣೆ ವಿಶೇಷ | ಕುಂಚಿಟಿಗ ಮಠದಲ್ಲಿ ಮಾತೃ ಸಂಗಮ
    4 weeks ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    ARECANUT RATE
    ಅಡಿಕೆ ಧಾರಣೆ | 6 ಜೂನ್‌ | ಭೀಮಸಮುದ್ರ, ಚನ್ನಗಿರಿ, ತೀರ್ಥಹಳ್ಳಿ ಹಾಗೂ ರಾಜ್ಯದ ಅಡಿಕೆ ರೇಟ್‌
    2 days ago
    ARECANUT RATE
    ಅಡಿಕೆ ಧಾರಣೆ | 5 ಜೂನ್‌ | ಇಂದಿನ ಅಡಿಕೆ ಮಾರುಕಟ್ಟೆ ವಿವರ
    3 days ago
    ARECANUT RATE
    ಭೀಮಸಮುದ್ರ, ಚನ್ನಗಿರಿ, ತೀರ್ಥಹಳ್ಳಿ, ಸಾಗರ ಹಾಗೂ ರಾಜ್ಯದ ಅಡಿಕೆ ರೇಟ್‌
    4 days ago
    ARECANUT RATE
    ಅಡಿಕೆ ಧಾರಣೆ | 4 ಜೂನ್‌ | ಇಂದಿನ ರಾಶಿ, ಚಾಲಿ, ಕೆಂಪಡಕೆ ರೇಟ್‌
    5 days ago
    Adike rate
    ಅಡಿಕೆ ಧಾರಣೆ | 2 ಜೂನ್‌ | ಯಾವ ಅಡಿಕೆಗೆ ಎಷ್ಟು ರೇಟ್‌ ?
    6 days ago
  • Dina Bhavishya
    Dina BhavishyaShow More
    ದಿನ ಭವಿಷ್ಯ
    ದಿನ ಭವಿಷ್ಯ | ಜೂನ್ 08 | ನಿರುದ್ಯೋಗಿಗಳಿಗೆ ಶುಭ ಸುದ್ದಿ, ಹೊಸ ವಾಹನ ಖರೀಧಿ
    3 hours ago
    ದಿನ ಭವಿಷ್ಯ
    ದಿನ ಭವಿಷ್ಯ | ಜೂನ್ 07 | ಪ್ರಯಾಣದಲ್ಲಿ ಅಡೆತಡೆಗಳು, ಆರೋಗ್ಯದ ಕಡೆ ಜಾಗೃತಿ ವಹಿಸಿ
    1 day ago
    ದಿನ ಭವಿಷ್ಯ
    ದಿನ ಭವಿಷ್ಯ | ಜೂನ್ 06 | ಉದ್ಯೋಗಗಳಲ್ಲಿ ನಿರುತ್ಸಾಹ ವಾತಾವರಣ, ಕೈಗೊಂಡ ಕೆಲಸದಲ್ಲಿ ಯಶಸ್ಸು
    2 days ago
    ದಿನ ಭವಿಷ್ಯ
    ದಿನ ಭವಿಷ್ಯ | ಜೂನ್ 05 | ಉದ್ಯೋಗಿಗಳಿಗೆ ಅಧಿಕಾರಿಗಳ ಬೆಂಬಲ, ವ್ಯವಹಾರದಲ್ಲಿ ನಿರೀಕ್ಷಿತ ಪ್ರಗತಿ
    3 days ago
    ದಿನ ಭವಿಷ್ಯ
    ದಿನ ಭವಿಷ್ಯ | ಜೂನ್ 04 | ವೃತ್ತಿಪರ ವ್ಯವಹಾರಗಳಲ್ಲಿ ಲಾಭ, ದೂರ ಪ್ರಯಾಣದ ಸೂಚನೆ
    4 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಜೂನ್ 05 | ಮೆಕ್ಕೆಜೋಳ, ರಾಗಿ, ಶೇಂಗಾ ರೇಟ್..
    3 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಜೂನ್ 01 | ಮೆಕ್ಕೆಜೋಳ, ರಾಗಿ ರೇಟ್..
    7 days ago
    ಮಾರುಕಟ್ಟೆ ಧಾರಣೆ
    ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್..
    1 week ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಮೇ.29 | ಮೆಕ್ಕೆಜೋಳ, ರಾಗಿ, ಶೇಂಗಾ ರೇಟ್..
    1 week ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಮೇ.27 | ರಾಗಿ, ಶೇಂಗಾ ರೇಟ್..
    2 weeks ago
  • ಹೊಳಲ್ಕೆರೆ
    ಹೊಳಲ್ಕೆರೆShow More
    ಆರೋಗ್ಯ ಕ್ಷೇಮ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
    ನೂತನ ಆರೋಗ್ಯ ಕ್ಷೇಮ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಚಂದ್ರಪ್ಪ ಭೂಮಿಪೂಜೆ 
    3 days ago
    ಸಿ.ಸಿ.ರಸ್ತೆ ಕಾಮಗಾರಿಗೆ ಭೂಮಿ ಪೂಜೆ
    ಮೂರ್ನಾಲ್ಕು ದಿನಗಳಲ್ಲೇ ತಾಳಿಕಟ್ಟೆ ಕೆರೆಗೆ‌ ನೀರು | ಶಾಸಕ‌ ಎಂ.ಚಂದ್ರಪ್ಪ
    1 week ago
    ಪೂರ್ವಭಾವಿ ಸಭೆ
    ಹೊಳಲ್ಕೆರೆ ಜಿಲ್ಲೆಯಲ್ಲಿಯೇ ಮಾದರಿ ಕ್ಷೇತ್ರ | ಶಾಸಕ ಎಂ.ಚಂದ್ರಪ್ಪ 
    1 month ago
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ | ಸಿದ್ಧಯ್ಯನಕೋಟೆ ಶ್ರೀ, ಎಚ್.ಆಂಜನೇಯ ಭಾಗೀ 
    2 months ago
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ 
    2 months ago
  • ಹಿರಿಯೂರು
    ಹಿರಿಯೂರುShow More
    Babburu Horticulture college
    ಕೃಷಿ ಪ್ರಾಯೋಗಿಕ ಮರು ಪರೀಕ್ಷೆ ಜೂನ್ 1ಕ್ಕೆ ನಿಗದಿ
    2 weeks ago
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    2 months ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    4 months ago
    Power Cut chitradurga News (3)
    ಹಿರಿಯೂರು | ಇಂದು ವಿದ್ಯುತ್ ವ್ಯತ್ಯಯ
    4 months ago
    Shree SHADAKSHARAMUNI SWAMIJI
    ಆದಿಜಾಂಬವ ಶಾಖಾ ಮಠದ ಹೆಸರಿನ ಸಭೆಗೆ ನಮ್ಮ ಸಮ್ಮತಿ ಇಲ್ಲ | ದಾವಣಗೆರೆಯಲ್ಲಿ ಫೆ.14 ರಂದು ಕರೆದಿರುವ ಸಭೆಗೆ ಸ್ಪಷ್ಟೀಕರಣ | ಶ್ರೀ ಷಡಾಕ್ಷರಮುನಿ ಸ್ವಾಮೀಜಿ
    4 months ago
  • ಹೊಸದುರ್ಗ
    ಹೊಸದುರ್ಗShow More
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ 
    6 days ago
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    6 days ago
    ವಾಲಿಬಾಲ್ ಹೊನಲು ಬೆಳಕಿನ ಪಂದ್ಯಾವಳಿ
    ಸೋಲು ಮುಂದಿನ ಗೆಲುವಿಗೆ ಪ್ರೇರಣೆ | ಸಾಣೇಹಳ್ಳಿ ಶ್ರೀ 
    2 weeks ago
    ರಂಗಶಾಲಾ ನಾಟಕೋತ್ಸವ
    ಸಾಣೇಹಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ರಂಗಶಾಲಾ ನಾಟಕೋತ್ಸವ
    2 weeks ago
    ಕುಂಚಿಟಿಗ ಮಠದಲ್ಲಿ ವಿಶ್ವ ತಾಯಂದಿರ ದಿನಾಚರಣೆ
    ತಾಯಂದಿರ ದಿನಾಚರಣೆ ವಿಶೇಷ | ಕುಂಚಿಟಿಗ ಮಠದಲ್ಲಿ ಮಾತೃ ಸಂಗಮ
    4 weeks ago
  • Life Style
    Life StyleShow More
    thyroid problems
    ಥೈರಾಯ್ಡ್ ಸಮಸ್ಯೆ ಇದ್ದಾಗ ಯಾವ ಹಣ್ಣುಗಳನ್ನು ತಪ್ಪಿಸಬೇಕು?
    2 hours ago
    liver
    ಲಿವರ್ ದಾನ ಮಾಡಿದವರು ಶೀಘ್ರವಾಗಿ ಚೇತರಿಸಿಕೊಳ್ಳಲು ವೈದ್ಯರ ಈ ಸಲಹೆಗಳನ್ನು ಪಾಲಿಸಿರಿ
    2 hours ago
    Purple seed powder
    ಖಾಲಿ ಹೊಟ್ಟೆಯಲ್ಲಿ ನೇರಳೆ ಬೀಜದ ಪುಡಿಯನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ಕುಡಿದರೆ ಏನಾಗುತ್ತದೆ ಗೊತ್ತಾ?
    1 day ago
    rose water
    ರೋಸ್ ವಾಟರ್ ಬೆರೆಸಿದ ನೀರಿನಲ್ಲಿ ಸ್ನಾನ ಮಾಡಿದರೆ ಈ ಪ್ರಯೋಜನ ಪಡೆಯಬಹುದು
    1 day ago
    Apply beetroot to your hair
    ಕೂದಲಿಗೆ ಬೀಟ್‌ರೂಟ್ ಹಚ್ಚಿ ಈ ಅದ್ಭುತ ಪ್ರಯೋಜನಗಳನ್ನು ಪಡೆಯಿರಿ
    2 days ago
Reading: Constitution: ಸಂವಿಧಾನ ಸನ್ಮಾನ | ಕಾನೂನು ಸಚಿವ ಸ್ಥಾನಕ್ಕೆ ಅಂಬೇಡ್ಕರ್ ರಾಜಿನಾಮೆ ಕೊಟ್ಟಿದ್ದೇಕೆ ?
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

Constitution: ಸಂವಿಧಾನ ಸನ್ಮಾನ | ಕಾನೂನು ಸಚಿವ ಸ್ಥಾನಕ್ಕೆ ಅಂಬೇಡ್ಕರ್ ರಾಜಿನಾಮೆ ಕೊಟ್ಟಿದ್ದೇಕೆ ?

chitradurganews.com
Last updated: 28 November 2024 19:32
chitradurganews.com
2 years ago
Share
Samvidan sanmana programe
ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ವೇದಿಕೆಯಿಂದ ಆಯೋಜಿಸಿದ್ದ ಸಂವಿಧಾನ ಸನ್ಮಾನ ಕಾರ್ಯಕ್ರಮ
SHARE

CHITRADURGA NEWS | 28 NOVEMBER 2024

ಚಿತ್ರದುರ್ಗ: ಸಂವಿಧಾನ (Constitution) ರಚನೆ ಮಾಡಿದ ಬಾಬಾ ಸಾಹೇಬ್ ಅಂಬೇಡ್ಕರರು ಕಾನೂನು ಸಚಿವ ಸ್ಥಾನಕ್ಕೆ ಯಾಕೆ ರಾಜಿನಾಮೆ ಕೊಟ್ಟರು ಎನ್ನುವ ವಿಚಾರದ ಬೆನ್ನತ್ತಿದರೆ ಕಾಂಗ್ರೆಸ್ ಪಕ್ಷದ ಅನೇಕ ವಿಚಾರಗಳು ಬೆಳಕಿಗೆ ಬರುತ್ತವೆ ಎಂದು ಸಾಮರಸ್ಯ ವೇದಿಕೆ ಸಂಚಾಲಕ ವಾದಿರಾಜ್ ಹೇಳಿದರು.

ಚಿತ್ರದುರ್ಗದ ಕ್ರೀಡಾಭವನದಲ್ಲಿ ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ವೇದಿಕೆಯಿಂದ ಆಯೋಜಿಸಿದ್ದ ಸಂವಿಧಾನ ಸನ್ಮಾನ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಭಾರತದ ಸಂವಿಧಾನಕ್ಕೆ 75 ವರ್ಷ ತುಂಬಿರುವ ಈ ಸಂದರ್ಭದಲ್ಲಿ ಸಂವಿಧಾನ ಸನ್ಮಾನ ಕಾರ್ಯಕ್ರಮದ ಮೂಲಕ ಜನವರಿ 26 ರವರೆಗೆ ಜನರಿಗೆ ಮುಟ್ಟಿಸುವ ಕೆಲಸ ಆಗಬೇಕು ಎಂದರು.

ಇದನ್ನೂ ಓದಿ: ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಚಿತ್ರದುರ್ಗದ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ 

ದೇಶದ ಸಂವಿಧಾನ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರರಿಗೆ ಕಾಂಗ್ರೆಸ್ ಮಾಡಿದಷ್ಟು ಅಪಚಾರವನ್ನು ಬೇರಾರು ಮಾಡಿಲ್ಲ. ಹೀಗಿದ್ದೂ, ನಾವೇ ಸಂವಿಧಾನದ ರಕ್ಷಕರು ಎಂಬಂತೆ ಬಿಂಬಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ದೇಶದಲ್ಲಿ ಸಂವಿಧಾನ ಜಾರಿಯಾಗಿ 75 ವರ್ಷ ಕಳೆದಿದೆ. ಈ ಅವಧಿಯಲ್ಲಿ ಸಂವಿಧಾನಕ್ಕೆ 106 ತಿದ್ದುಪಡಿ ಮಾಡಲಾಗಿದೆ. ಕಾಲ ಕಾಲಕ್ಕೆ ಅಗತ್ಯವಿದ್ದಲ್ಲಿ ತಿದ್ದುಪಡಿ ಮಾಡಿಕೊಳ್ಳಿ ಎಂದು ಡಾ.ಬಿ.ಆರ್.ಅಂಬೇಡ್ಕರರೇ ಹೇಳಿದ್ದಾರೆ. ಆದರೆ, ಯಾರ ಅವಧಿಯಲ್ಲಿ ಯಾವ ಉದ್ದೇಶಕ್ಕೆ ತಿದ್ದುಪಡಿಗಳಾಗಿದೆ ಎನ್ನುವುದನ್ನು ನೋಡಿದಾಗ ಕಾಂಗ್ರೆಸ್ ಬಂಡವಾಳ ಬಯಲಿಗೆ ಬರುತ್ತದೆ ಎಂದರು.

Samvidana sanmana program
ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ವೇದಿಕೆಯಿಂದ ಆಯೋಜಿಸಿದ್ದ ಸಂವಿಧಾನ ಸನ್ಮಾನ ಕಾರ್ಯಕ್ರಮ

ಕಾಂಗ್ರೆಸ್ ಆಡಳಿತವಿದ್ದಾಗ ಸಂವಿಧಾನಕ್ಕೆ 75 ತಿದ್ದುಪಡಿಯಾದರೆ, ಕಾಂಗ್ರೆಸ್ಸೇತರ ಸರ್ಕಾರಗಳ ಅವಧಿಯಲ್ಲಿ 31 ತಿದ್ದುಪಡಿ ಮಾಡಲಾಗಿದೆ.

ಇದನ್ನೂ ಓದಿ: ವಿವಿ ಸಾಗರದ ಒಳಹರಿವು ಮತ್ತಷ್ಟು ಹೆಚ್ಚಳ | ಭರ್ತಿಗೆ 1.40 ಅಡಿ ಬಾಕಿ

ರಾಯ್‍ಬರೇಲಿಯಿಂದ ಆಯ್ಕೆಯಾದ ಇಂದಿರಾಗಾಂಧಿ ಚುನಾವಣಾ ಅಕ್ರಮ ನಡೆಸಿದ್ದಾರೆ ಎಂದು ಅಲಹಬಾದ್ ಹೈಕೋರ್ಟ್ 1975 ಜೂನ್ 12 ರಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‍ಗೆ ಹೋಗಲಾಗುತ್ತದೆ. ಸುಪ್ರೀಂ ಕೋರ್ಟ್ ಏಕಸದಸ್ಯ ಪೀಠ ಅಲಹಬಾದ್ ಹೈಕೋರ್ಟ್ ತೀರ್ಪನ್ನು ಭಾಗಶಃ ಸತ್ಯವಾಗಿದೆ ಎನ್ನುತ್ತದೆ. ಆದರೆ, ಪ್ರಧಾನಮಂತ್ರಿಗ ಪ್ರಕರಣವಾದ್ದರಿಂದ ಇದನ್ನು ಹೆಚ್ಚು ನ್ಯಾಯಾಧೀಶರ ಪೀಠಕ್ಕೆ ಒಪ್ಪಿಸುತ್ತಾರೆ.

ಅಷ್ಟರಲ್ಲಿ ಇಂದಿರಾಗಾಂಧಿ ತಮ್ಮ ಕುರ್ಚಿ ಅಲ್ಲಾಡುತ್ತಿದೆ ಎನ್ನುವುದನ್ನು ಅರಿತು ಇಡೀ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುತ್ತಾರೆ. ಈ ಅವಧಿಯಲ್ಲಿ ತಮ್ಮ ಸ್ವಾರ್ಥಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರುತ್ತಾರೆ ಎಂದು ವಿವರಿಸಿದರು.

ಬಿಜೆಪಿ, ಸಂಘ ಪರಿವಾದವರು ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿಯೇ ಇಲ್ಲ ಎಂದು ಹೇಳುವ ಸಿದ್ದರಾಮಯ್ಯನವರು, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯಾದಾಗ ಏಕೆ ಮಾತನಾಡಲಿಲ್ಲ. ಅವರಿಗಿಂತ ಕಿರಿಯರೆಲ್ಲಾ ಹೋರಾಡಿ ಜೈಲು ಸೇರಿದ್ದರು, ಕಾನೂನು ಪದವೀಧರರಾಗಿದ್ದರೂ ಸಿದ್ದರಾಮಯ್ಯ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದಕ್ಕೆ ಬಿತ್ತು ಹೆಣ | ಭೀಕರವಾಗಿ ಕೊಲೆಯಾದ ಯುವಕ

ಜನಸಂಘದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಡಾ.ಶ್ಯಾಮಪ್ರಸಾದ್ ಮುಖರ್ಜಿ ಅವರು ಒಂದು ದೇಶದಲ್ಲಿ ಎರಡು ಸಂವಿಧಾನ ನಡೆಯಲ್ಲ ಎಂದು ಹೋರಾಟ ಮಾಡಿದವರು. ಆದರೆ, ಕಾಂಗ್ರೆಸ್ ಬಿಜೆಪಿಯಿಂದ ಸಂವಿಧಾನಕ್ಕೆ ಧಕ್ಕೆ ಎಂದು ಪ್ರಚಾರ ಮಾಡುತ್ತಾರೆ. ನಿಜವಾಗಿ ಸಂವಿಧಾನದ ಉಳವಿಗೆ ಕೆಲಸ ಮಾಡಿರುವುದು ಬಿಜೆಪಿ ಎಂದರು.

ಈ ದೇಶದಲ್ಲಿ ಒಂದೇ ಕುಟುಂಬದವರು ಸಂವಿಧಾನವನ್ನು ಗುತ್ತಿಗೆ ಪಡೆದವರಂತೆ 43 ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ. ಕಾಶ್ಮೀರದಲ್ಲಿ ಕೂಡಾ ಇದೇ ಆಗಿದೆ. ಆದರೆ, ವಾಜಪೇಯಿ ಅವರ ಸರ್ಕಾರದಲ್ಲಿ ಬ್ಯಾಕ್‍ಲಾಗ್ ಹುದ್ದೆಗಳು ಪರಿಶಿಷ್ಟರಿಗೆ ಸೇರಬೇಕು ಎಂದು ಸಂವಿಧಾನಕ್ಕೆ ತಿದ್ದುಪಡಿ ಮಾಡಲಾಗಿದೆ. ಹಿಂದುಳಿದ, ಎಸ್ಸಿ, ಎಸ್ಟಿ ಆಯೋಗ ರಚನೆಗೆ ತಿದ್ದುಪಡಿಗಳಾಗಿವೆ. ಮೀಸಲಾತಿ ವಿಸ್ತರಣೆಗೆ ತಿದ್ದುಪಡಿಗಳಾಗಿವೆ. ಎಂದೂ ಕೂಡಾ ಸ್ವಾರ್ಥದ ಉದ್ದೇಶಕ್ಕೆ ಮಾಡಿಲ್ಲ ಎನ್ನುವುದನ್ನು ದಾಖಲೆಗಳ ಮೂಲಕ ಮನನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಬಾಬಾ ಸಾಹೇಬರು ಮುಂಬೈನಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದಾಗ ಸೋಲಿಸಿದ್ದು ಕಾಂಗ್ರೆಸ್. ಈ ವೇಳೆ ಜೋಗೇಂದ್ರನಾಥ್ ಮಂಡಲ್ ಅವರು ಪೂರ್ವ ಪಾಕಿಸ್ಥಾನ ಭಾಗದಲ್ಲಿ ಅಂಬೇಡ್ಕರರನ್ನು ಆಹ್ವಾನಿಸಿ ಗೆಲ್ಲಿಸುತ್ತಾರೆ. ಆದರೆ, ಕಾಂಗ್ರೆಸ್ ಆ ಭಾಗವನ್ನು ಬಾಂಗ್ಲಾ ದೇಶಕ್ಕೆ ಸೇರಿಸಿ ಭಾರತದ ಸಂಸತ್ತಿಗೆ ಬರದಂತೆ ಮಾಡುತ್ತಾರೆ. ಆನಂತರ ಕಾನೂನು ಸಚಿವರಾಗಿ ಬಂದಾಗ ಹಿಂದು ಕೋಡ್ ಬಿಲ್ ಗೆ ಮಾನ್ಯತೆ ಸಿಗದಿರುವುದು, ಒಬಿಸಿ ಮೀಸಲಾತಿಗೆ ತಕರಾರು, ಕಾನೂನು ಖಾತೆ ಬದಲು ಯೋಜನಾ ಖಾತೆ ಕೊಡಲು ನೆಹರು ಒಪ್ಪದಿರುವುದು, ದಲಿತರ ಕಡೆಗಣನೆ, 800 ವರ್ಷಗಳ ಕಾಲ ಆಡಳಿತ ನಡೆಸಿದ ಮುಸ್ಲೀಮರಿಗೆ ಆದ್ಯತೆ ನೀಡಿದ್ದು ಸೇರಿದಂತೆ ಹಲವು ವಿಚಾರಗಳನ್ನು ಇಟ್ಟುಕೊಂಡು ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಡುತ್ತಾರೆ ಎಂದರು.

ಇದನ್ನೂ ಓದಿ: ವಿವಿ ಸಾಗರ ಕೋಡಿ ಬೀಳೋದು ಪಕ್ಕಾ | ಭದ್ರಾದಿಂದ ಜನವರಿವರೆಗೆ ನೀರು ಹರಿಸಲು ಆದೇಶ

ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ಅಂಬೇಡ್ಕರರ ವ್ಯಕ್ತಿತ್ವದಷ್ಟೇ ದೊಡ್ಡದು ಭಾರತದ ಸಂವಿಧಾನ. ದಿನೇ ದಿನೇ ಅಂಬೇಡ್ಕರ್ ಕುರಿತಂತೆ ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಜಗತ್ತಿನಲ್ಲಿ ಹೆಚ್ಚಾಗುತ್ತಲೇ ಇದೆ ಎಂದು ಹೇಳಿದರು.

Samvidana sanmana program
ಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ವೇದಿಕೆಯಿಂದ ಆಯೋಜಿಸಿದ್ದ ಸಂವಿಧಾನ ಸನ್ಮಾನ ಕಾರ್ಯಕ್ರಮ

ಭಾರತದ ಸಂವಿಧಾನಕ್ಕೆ 75 ವರ್ಷ. ಅದನ್ನು ದೇಶದ ಎಲ್ಲ ಹಂತಗಳಲ್ಲೂ ಇನ್ನೂ ಚೆನ್ನಾಗಿ ಅಳವಡಿಸಿದರೆ ದೇಶವನ್ನು ಇನ್ನೂ ಉತ್ತಮವಾಗಿ ಮುನ್ನಡೆಸಬಹುದು. ಸಂವಿಧಾನವನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇಂದಿನಿಂದ ಎರಡು ತಿಂಗಳ ಕಾಲ ಸಂವಿಧಾನ ಸನ್ಮಾನ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಭಾರತದ ಸಂವಿಧಾನ ಸರಳವಾಗಿದೆ. ಎಲ್ಲ ಸಂದರ್ಭಗಳಿಗೂ ಅದರಲ್ಲಿ ಪರಿಹಾರ ಇದೆ. ಸಂವಿಧಾನವನ್ನು ಹೆಚ್ಚು ಅಧ್ಯಯನ ಮಾಡಬೇಕು. ದಲಿತ ವರ್ಗಗಳನ್ನು ಹಿಂದೆ ಮನೆಯ ಒಳಗೆ ಬಿಟ್ಟುಕೊಳ್ಳುತ್ತಿರಲಿಲ್ಲ. ಈ ಎಲ್ಲಾ ಸಮಸ್ಯೆಗೆ ಸಂವಿಧಾನದಲ್ಲಿ ಪರಿಹಾರ ಒದಗಿಸಿ, ಅಸ್ಪೃಶ್ಯತೆ ಆಚರಣೆ ನಿμÉೀಧಿಸಿದೆ. ಬಸವಣ್ಣನವರು ಇದನ್ನು ವಿರೋಧಿಸಿದ್ದರು ಕಠಿಣ ಕಾನೂನು ಜಾರಿಗೆ ತಂದವರು ಅಂಬೇಡ್ಕರ್ ಎಂದರು.

ಇದನ್ನೂ ಓದಿ: 20 ವರ್ಷ ಮೇಲ್ಪಟ್ಟ ವಾಹನಗಳಿಗೆ ಬ್ರೇಕ್ ಹಾಕಿ | ಡಿಸಿ ವೆಂಕಟೇಶ್

ಇಂತಹ ಅಂಬೇಡ್ಕರರನ್ನು ಕಾಂಗ್ರೆಸ್ ಹೇಗೆ ನಡೆಸಿಕೊಂಡಿದೆ ಎನ್ನುವುದು ಗಂಭೀರ ವಿಷಯ. ಸಂವಿಧಾನವನ್ನು ಕಾಂಗ್ರೆಸ್ ದೇಶಾದ್ಯಂತ ಒಂದೇ ರೀತಿಯಲ್ಲಿ ಅಳವಡಿಸಲಿಲ್ಲ. ಜಮ್ಮು ಕಾಶ್ಮೀರಕ್ಕೆ ಅನ್ವಯ ಆಗುತ್ತಿರಲಿಲ್ಲ. ಕಾಶ್ಮೀರಕ್ಕೆ ನೆಹರು ಅವರು ವಿಶೇಷ ಸ್ಥಾನಮಾನ ಕೊಟ್ಟಿದ್ದರು. ಇದನ್ನು ಹೋಗಲಾಡಿಸಿದ್ದು ನರೇಂದ್ರ ಮೋದಿ ಸರ್ಕಾರ ಎಂದು ತಿಳಿಸಿದರು.

ಸಂಸದ ಗೋವಿಂದ ಕಾರಜೋಳ ಮಾತನಾಡಿ, ಅನಂತಕುಮಾರ ಹೆಗಡೆ ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳಿದಾಗ ಇಡೀ ಬಿಜೆಪಿ ತಲೆಗೆ ಕಟ್ಟಿ ಕಾಂಗ್ರೆಸ್ ಪ್ರಚಾರ ಮಾಡಿತು. ಸಂಘ ಪರಿವಾರ ಸಂವಿಧಾನ ಬದಲಾಯಿಸುತ್ತದೆ ಎಂದು ಹೇಳಿದರು. ಆದರೆ, ಸಂಘ ಪರಿವಾರ ಅನಂತಕುಮಾರ ಹೆಗಡೆಯನ್ನೇ ಬದಲಾಯಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಅಭಿಯಾನ ಸಮಿತಿ ಅಧ್ಯಕ್ಷ ಜಿ.ಎಚ್.ಮೋಹನ್, ವಿಭಾಗ ಸಂಚಾಲಕ ಭೈರಪ್ಪ, ಸಹ ಸಂಚಾಲಕ ರಾಜಣ್ಣ, ಭಾರ್ಗವಿ ದ್ರಾವಿಡ್, ಸುರೇಶ್ ನಾಯ್ಕ್ ಇತರರಿದ್ದರು.

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:Baba Saheb AmbedkarBJPChitradurgaChitradurga LatestChitradurga newsCitizens for Social JusticecongressConstitutionEmergencyfeaturedHarmonyIndira GandhiJan SanghKannada NewsNehruRSSWadirajಆರೆಸ್ಸೆಸ್ಸ್ಇಂದಿರಾಗಾಂಧಿಕನ್ನಡ ಸುದ್ದಿಕಾಂಗ್ರೆಸ್ಚಿತ್ರದುರ್ಗಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಲೇಟೆಸ್ಟ್ಜನಸಂಘತುರ್ತು ಪರಿಸ್ಥಿತಿನೆಹರುಬಾಬಾ ಸಾಹೇಬ್ ಅಂಬೇಡ್ಕರ್ಬಿಜೆಪಿವಾದಿರಾಜ್ಸಂವಿಧಾನಸಾಮರಸ್ಯಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್
Share This Article
Facebook Email Print
Previous Article ನಗರಸಭೆ 15ನೇ ವಾರ್ಡ್ ಸದಸ್ಯರಾಗಿ ನರಸಿಂಹಮೂರ್ತಿ ಆಯ್ಕೆ Congress: ನಗರಸಭೆ 15ನೇ ವಾರ್ಡ್ ಸದಸ್ಯರಾಗಿ ನರಸಿಂಹಮೂರ್ತಿ ಆಯ್ಕೆ | ಕಾಂಗ್ರೆಸ್ ಕಚೇರಿಯಲ್ಲಿ ಸನ್ಮಾನ
Next Article ಜಿಲ್ಲಾಧಿಕಾರಿ ಟಿ.ವೆಂಕಟೇಶ್ Groundwater: ಇನ್ನು ಮುಂದೆ‌ ಈ ಸ್ಥಳಗಳಲ್ಲಿ ಬೋರ್ ವೆಲ್ ಹಾಕಿಸಲು ಅನುಮತಿ ಕಡ್ಡಾಯ | ಜಿಲ್ಲಾಧಿಕಾರಿ
Leave a Comment

Leave a Reply Cancel reply

Your email address will not be published. Required fields are marked *

ಭೂ ಒಡೆತನ ಯೋಜನೆ
ಭೂ ಒಡೆತನ ಯೋಜನೆಯಡಿ ಆಸಕ್ತ ಭೂ ಮಾಲೀಕರಿಂದ ಜಮೀನು ಖರೀದಿ
ಮುಖ್ಯ ಸುದ್ದಿ
ಅಂಚೆ ಜೀವ ವಿಮೆ ಪ್ರತಿನಿಧಿಗಳ ನೇಮಕಾತಿ | ನೇರ ಸಂದರ್ಶನ
ಮುಖ್ಯ ಸುದ್ದಿ
ನೆಲ್ಲಿಕಟ್ಟೆ ಗ್ರಾಮದಲ್ಲಿ 1.25 ಕೋಟಿ ವೆಚ್ಚದ ಚೆಕ್‍ಡ್ಯಾಂ ಗೋಕಟ್ಟೆ ನಿರ್ಮಾಣಕ್ಕೆ ಭೂಮಿಪೂಜೆ
ನೆಲ್ಲಿಕಟ್ಟೆ ಗ್ರಾಮದಲ್ಲಿ 1.25 ಕೋಟಿ ವೆಚ್ಚದ ಚೆಕ್‍ಡ್ಯಾಂ ಗೋಕಟ್ಟೆ ನಿರ್ಮಾಣಕ್ಕೆ ಭೂಮಿಪೂಜೆ 
ಮುಖ್ಯ ಸುದ್ದಿ
thyroid problems
ಥೈರಾಯ್ಡ್ ಸಮಸ್ಯೆ ಇದ್ದಾಗ ಯಾವ ಹಣ್ಣುಗಳನ್ನು ತಪ್ಪಿಸಬೇಕು?
Life Style
© Chitradurga News 2025 | Powered By Karnatakabest.com

Loading Comments...

    Welcome Back!

    Sign in to your account

    Username or Email Address
    Password

    Lost your password?

    Not a member? Sign Up