ಮುಖ್ಯ ಸುದ್ದಿ
GOOD NEWS | ವಿವಿ ಸಾಗರ ಕೋಡಿ ಬೀಳೋದು ಪಕ್ಕಾ | ಭದ್ರಾದಿಂದ ಜನವರಿವರೆಗೆ ನೀರು ಹರಿಸಲು ಆದೇಶ


CHITRADURGA NEWS | 27 NOVEMBER 2024
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಈ ವರ್ಷಾಂತ್ಯಕ್ಕೆ ಮತ್ತೊಂದು ಹೊಸ ದಾಖಲೆ ನಿರ್ಮಾಣವಾಗಲಿದೆ.
ವಾಣಿವಿಲಾಸ ಸಾಗರ ಜಲಾಶಯ ನಿರ್ಮಾಣವಾದ ನಂತರ ಇತಿಹಾಸಲ್ಲಿ ಮೂರನೇ ಬಾರಿಗೆ ಕೋಡಿ ಬೀಳುವ ಮೂಲಕ ಮತ್ತೊಂದು ದಾಖಲೆ ನಿರ್ಮಾಣವಾಗಲಿದೆ.

ಇದನ್ನೂ ಓದಿ: ಅಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ | ರಾಶಿ ಬೆಲೆಯಲ್ಲಿ ಜಿಗಿತ
89 ವರ್ಷಗಳ ನಂತರ 2022 ರಲ್ಲಿ ಜಲಾಶಯ ಕೋಡಿ ಬೀಳುವ ಮೂಲಕ ಈ ತಲೆಮಾರಿನ ಜನ ಜಲಾಶಯ ಭರ್ತಿಯಾಗಿ ಕೋಡಿ ಹರಿದಿದ್ದನ್ನು ನೋಡಿ ಧನ್ಯರಾಗಿದ್ದರು.
ಈಗ ಮತ್ತೊಮ್ಮೆ ಅಂಥದ್ದೊಂದು ಸುವರ್ಣಾಕ್ಷರದಲ್ಲಿ ಬರೆದಿಡುವ ಘಳಿಗೆ ಕಣ್ಣೆದುರು ಬರುತ್ತಿದೆ.
ಭದ್ರಾದಿಂದ ಮತ್ತೆ ನೀರು ಹರಿಸಲು ಆದೇಶ:
ಭದ್ರಾ ಮೇಲ್ದಂಡೆ ಯೋಜನೆಯಡಿ ವಾಣಿವಿಲಾಸ ಸಾಗರ ಜಲಾಶಯಕ್ಕೆ 2025 ಜನವರಿ ವರೆಗೆ ಪ್ರತಿ ದಿನ 700 ಕ್ಯೂಸೆಕ್ ನೀರು ಹರಿಸಲು ಜಲಸಂಪನ್ಮೂಲ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.
ಇದನ್ನೂ ಓದಿ: ಶಾಸಕ ಟಿ.ರಘುಮೂರ್ತಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ನೇಮಕ | ರಾಜ್ಯ ಸರ್ಕಾರದಿಂದ ಆದೇಶ
ಭದ್ರಾ ಜಲಾಯಶದಿಂದ ಭದ್ರಾ ಮೇಲ್ದಂಡೆ ಯೋಜನೆಗೆ 12.50 ಟಿಎಂಸಿ ನೀರಿನ ಹಂಚಿಕೆಯಾಗಿದೆ. ಇದರಲ್ಲಿ ತರೀಕೆರೆ ಏತ ನೀರಾವರಿಗೆ 1.47 ಟಿಎಂಸಿ ಹಾಗೂ ವಾಣಿವಿಲಾಸ ಸಾಗರ ಜಲಾಶಯಕ್ಕೆ 2 ಟಿಎಂಸಿ ಸೇರಿ ಒಟ್ಟು 3.47 ಟಿಎಂಸಿ ಅಡಿ ನೀರೆತ್ತಲು ಅನುಮತಿ ನೀಡಲಾಗಿತ್ತು.
ಮುಂದುವರೆದು, ತರೀಕೆರೆ ಏತ ನೀರಾವರಿ ಯೋಜನೆಗೆ ಸಔಲಭ್ಯ ಕಲ್ಪಿಸಲು ಹಾಗೂ ವಾಣಿವಿಲಾಸ ಸಾಗರ ಜಲಾಶಯದಲ್ಲಿ ನೀರು ಸಂಗ್ರಹಿಸುವ ಸಲುವಾಗಿ ಉಳಿದ 9.03 ಟಿಎಂಸಿ ನೀರಿನ ಮಿತಿಯಲ್ಲಿ 2025 ಜನವರಿ ವರೆಗೆ 700 ಕ್ಯೂಸೆಕ್ ನೀರು ಹರಿಸಲು ಅನುಮತಿ ನೀಡಲಾಗಿದೆ.
