ಕ್ರೈಂ ಸುದ್ದಿ
LOVE: ಪ್ರೀತಿಸಿ ಮದುವೆಯಾಗಿದ್ದಕ್ಕೆ ಬಿತ್ತು ಹೆಣ | ಭೀಕರವಾಗಿ ಕೊಲೆಯಾದ ಯುವಕ

CHITRADURGA NEWS | 28 NOVEMBER 2024
ಚಿತ್ರದುರ್ಗ: ಪ್ರೀತಿಸಿ (LOVE) ಮದುವೆಯಾದ ಕಾರಣಕ್ಕೆ ಜೀವವನ್ನೇ ತೆಗೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಚಿತ್ರದುರ್ಗ ತಾಲೂಕು ಕೋಣನೂರು ಗ್ರಾಮದಲ್ಲಿ ನಿನ್ನೆ ಬುಧವಾರ ಸಂಜೆ ಈ ಘಟನೆ ನಡೆದಿದ್ದು, ಇಡೀ ಗ್ರಾಮ ಬೆಚ್ಚಿ ಬಿದ್ದಿದೆ.

ಇದನ್ನೂ ಓದಿ: 20 ವರ್ಷ ಮೇಲ್ಪಟ್ಟ ವಾಹನಗಳಿಗೆ ಬ್ರೇಕ್ ಹಾಕಿ | ಡಿಸಿ ವೆಂಕಟೇಶ್
ಕೋಣನೂರು ಗ್ರಾಮದ ಮಂಜುನಾಥ ಕೊಲೆಯಾದ ಯುವಕ. ಇದೇ ಗ್ರಾಮದ ರಕ್ಷಿತಾ ಎಂಬ ಯುವತಿ ಜೊತೆ ಮೂರು ತಿಂಗಳ ಹಿಂದೆ ದೇವಸ್ಥಾನದಲ್ಲಿ ಮದುವೆಯಾಗಿದ್ದ.
ಇಬ್ಬರನ್ನೂ ಉಪಾಯದಲ್ಲಿ ಊರಿಗೆ ಕರೆಯಿಸಿಕೊಂಡು, ಊರಿನಲ್ಲಿ ಅದ್ದೂರಿಯಾಗಿ ಮದುವೆ ಮಾಡಿಕೊಡುವ ಭರವಸೆ ನೀಡಿ, ಕರೆದೊಯ್ದು, ಬುಧವಾರ ರಕ್ಷಿತಾ ತಂದೆ ಸೇರಿದಂತೆ ಸುಮಾರು 20 ಜನರ ತಂಡ ಮಂಜುನಾಥ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದೆ.
ಇದನ್ನೂ ಓದಿ: ವಿವಿ ಸಾಗರದ ಒಳಹರಿವು ಮತ್ತಷ್ಟು ಹೆಚ್ಚಳ | ಭರ್ತಿಗೆ 1.40 ಅಡಿ ಬಾಕಿ
ಇದೇ ವೇಳೆ ಮಂಜುನಾಥನ ತಂದೆ ಚಂದ್ರಪ್ಪ, ತಾಯಿ ಅನುಸೂಯಮ್ಮ ಕೂಡಾ ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರನ್ನೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಜುನಾಥ್ ಮೇಲೆ ಕಟ್ಟಿಗೆ, ಕಬ್ಬಿಣದ ರಾಡ್, ಕಲ್ಲಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ. ಕೊಲೆ ನಂತರ ಎಲ್ಲರೂ ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ: ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಚಿತ್ರದುರ್ಗದ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
ಜಿಲ್ಲಾ ಆಸ್ಪತ್ರೆಗೆ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
