
CHITRADURGA NEWS | 20 JUNE 2024
ಮೊಳಕಾಲ್ಮೂರು: ಹಸಿ ಮೆಣಸಿನ ಕಾಯಿ ತುಂಬಿಕೊಂಡು ಆಂಧ್ರಪ್ರದೇಶದ ಕಡೆಗೆ ಹೋಗುತ್ತಿದ್ದ ಬೊಲೆರೋ ವಾಹನ ಜೂ.20 ಗುರುವಾರ ತಡರಾತ್ರಿ 2 ಗಂಟೆ ವೇಳೆಗೆ ಮೊಳಕಾಲ್ಮೂರು ತಾಲೂಕು ಬಿ.ಜಿ.ಕೆರೆ ಬಳಿ ಹಿಂದಿನ ಟೈಯರ್ ಪಂಕ್ಚರ್ ಆಗಿದೆ.
ಈ ವೇಳೆ ಚಾಲಕ ವಾಹನವನ್ನು ಪಕ್ಕಕ್ಕೆ ನಿಲ್ಲಿಸಿ ಪಾರ್ಕಿಂಗ್ ಲೈಟ್ ಹಾಕಿಕೊಂಡು, ರಿಫ್ಲೆಕ್ಟರ್ ಇಟ್ಟು ಬೊಲೆರೊಗೆ ಮತ್ತೊಂದು ಟೈಯರ್ ಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ | ಪಲ್ಟಿಯಾಗಿ ರಸ್ತೆ ಬದಿ ಗುಂಡಿಗೆ ಬಿದ್ದ ಕಾರು
ಇದೇ ವೇಳೆ ಬಿ.ಜಿ.ಕೆರೆ ಕಡೆಯಿಂದ ಹಾನಗಲ್ ಕಡೆಗೆ ಬರುತ್ತಿದ್ದ ಬೈಕ್ ಸವಾರ ಬೊಲೆರೋ ಚಾಲಕನಿಗೆ ಡಿಕ್ಕಿ ಹೊಡೆದಿದ್ದು, ಬೊಲೆರೋ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕು ಜನತಾ ಸೈಟ್ ಹೆಬ್ಬಾಳ ನಿವಾಸಿ 27 ವರ್ಷದ ಮನೋಜ್ ಕುಮಾರ್ ಮೃತಪಟ್ಟ ಬೊಲೆರೋ ಚಾಲಕ.
ಇದನ್ನೂ ಓದಿ: ಮನೆಯಲ್ಲಿದ್ದ ಫ್ರಿಡ್ಜ್ ಬ್ಲಾಸ್ಟ್ | ಶಾರ್ಟ್ ಸಕ್ರ್ಯೂಟ್‍ನಿಂದ ಅನಾಹುತ
ಹೆಬ್ಬಾಳದಲ್ಲಿ ಹಸಿ ಮೆಣಸಿನಕಾಯಿ ಲೋಡ್ ಮಾಡಿಕೊಂಡು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗಕ್ಕೆ ಹೋಗಲು ಮೊಳಕಾಲ್ಮೂರು ತಾಲ್ಲೂಕು ಬಿ.ಜಿ ಕೆರೆ ಗ್ರಾಮದ ಕಮ್ಮರ್ ಕಾವಲ್ ಸಮೀಪ ಹೋಗುತ್ತಿದ್ದಾಗ ಹಿಂಭಾಗದ ಬಲ ಬದಿಯ ಟೈಯರ್ ಪಂಕ್ಚರ್ ಆಗಿತ್ತು.
ಇದೇ ಸಮಯದಲ್ಲಿ ಬೈಕಿನಲ್ಲಿ ಬಂದ ಮೊರ್ಲಹಳ್ಳಿಯ ನಾಗೇಶ ಡಿಕ್ಕಿ ಹೊಡೆಸಿದ್ದಾನೆ. ಈ ಬಗ್ಗೆ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ನಂ: 82/2024 ಕಲಂ 279,337.304(ಎ) ರ ಐಪಿಸಿ ಅಡಿ ದೂರು ದಾಖಲಾಗಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
