CHITRADURGA NEWS | 18 NOVEMBER 2025
ಚಿತ್ರದುರ್ಗ: ರೈತರಿಗೆ ಹೊಲದಲ್ಲಿ ಬೆಳೆ ಹಾಗೂ ಕಳೆ ಯಾವುದು ಎನ್ನುವುದು ಗೊತ್ತಿರುತ್ತದೆ. ಕಳೆ ಕಿತ್ತು ಬೆಳೆ ಉಳಿಸಿಕೊಳ್ಳುತ್ತಾರೆ. ಅದೇ ರೀತಿ ನಾವು ಕೂಡಾ ನಮ್ಮ ಮನದಲ್ಲಿ ಕಳೆ ಯಾವುದು ಬೆಳೆ ಯಾವುದು ಎನ್ನುವುದನ್ನು ಅರಿತು ಮನದ ಅಹಂಕಾರದ ಕಳೆ ಕಿತ್ತು, ಸದ್ಭಾವದ ಬೆಳೆ ಬೆಳೆಯಬೇಕು ಎಂದು ಡಾ.ಬಸವಕುಮಾರ ಸ್ವಾಮೀಜಿ ತಿಳಿಸಿದರು.

ಇದನ್ನೂ ಓದಿ: ನ.26ಕ್ಕೆ ಮುರುಘಾ ಶರಣರ ತೀರ್ಪು !
ಮುರುಘಾ ಮಠದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಆಯೋಜಿಸಿರುವ ವಚನ ಕಾರ್ತಿಕದ 26ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ದುಡಿದು ತಿನ್ನುವವರನ್ನು ತಾತ್ಸಾರ ಮನೋಭಾವದಿಂದ ಕಾಣುತ್ತಾರೆ. ಅದೇ ಕೂತು ತಿನ್ನುವವನನ್ನು ಪುಣ್ಯವಂತ ಎನ್ನುತ್ತಾರೆ. ತಮ್ಮ ತಪ್ಪನ್ನು ಕಾಣದೇ ಬರೀ ಅನ್ಯರ ತಪ್ಪನ್ನು ಎತ್ತಿ ತೋರಿಸುವ ಕೆಲಸ ಮಾಡುತ್ತೇವೆ. ಇಲ್ಲವೇ ಬೇರೆಯವರ ತಪ್ಪಿನ ಬಗ್ಗೆ ಮನದಲ್ಲಿ ಕೊರಗುತ್ತೇವೆ.
ಇದು ಮನುಷ್ಯನ ಸಹಜ ಗುಣ. ಬೇರೆಯವರ ತಪ್ಪನ್ನು ಎಣಿಸುವುದು ಸಹ ತಪ್ಪೇ. ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳಬೇಕು. ನುಡಿ ಅಂತರಗದಲ್ಲಿ ಪರಿಣಮಿಸಬೇಕು. ನಡೆದು ನುಡಿಯಬೇಕು ಎಂದರು.
ಮನಸ್ಸಿಗೆ ಸಮಾಧಾನ, ನೆಮ್ಮದಿ, ಸಂತೋಷ ನೀಡುವ, ನಮ್ಮ ಕಣ್ಣೀರನ್ನು ಒರೆಸುವ ಶಕ್ತಿ ವಚನಗಳಿಗಿದೆ. ಮನಸ್ಸನ್ನು ಸುಧಾರಿಸುವವು ವಚನಗಳು. 12ನೆಯ ಶತಮಾನದಲ್ಲಿ ಶರಣರ ಹೆಸರುಗಳು ಅಣ್ಣ, ಅಕ್ಕ, ಅಯ್ಯ ಎಂದು ಗೌರವಪೂರ್ವಕವಾಗಿ ಕೊನೆಗೊಳ್ಳುತ್ತಿದ್ದವು. ತಮ್ಮನ್ನು ತಾವು ಆದಷ್ಟು ಸಣ್ಣವನನ್ನಾಗಿರಿಸಿ ಎಂದುಕೊAಡು ಶಿವಸ್ವರೂಪಿಗಳಾಗಿ ಬಾಳಿದವರು ಬಸವಾದಿ ಪ್ರಮಥರು ಎಂದು ನುಡಿದರು.
ಇದನ್ನೂ ಓದಿ: ಜೆಸಿಆರ್ ಬಡಾವಣೆಯಲ್ಲಿ ವಿದ್ಯುತ್ ಟ್ರಾನ್ಸ್‌ಫರ್ಮರ್‌ಗೆ ಬೆಂಕಿ
ಶ್ರೀ ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಜೋದರ ಮಾಯಣ್ಣ ಒಬ್ಬ ಯೋಧ. ಆತನ ಕಾಯಕ ಆನೆಯನ್ನು ಪಳಗಿಸುವುದಾಗಿತ್ತು. ಮಾವುತನ ಕೆಲಸ ನಿರ್ವಹಿಸುತ್ತಿದ್ದ. ಅವರ ವಚನಗಳಲ್ಲಿ ಸತ್ವ, ರಜೋ ಹಾಗೂ ತಮ ಗುಣಗಳನ್ನು ತಿಳಿಸಿದ್ದಾರೆ.
ಸತ್ವ ಗುಣವೆಂದರೆ, ಯೋಗ, ಧ್ಯಾನ, ಮನಸ್ಸಿಗೆ ಸಮಾಧಾನ ನೀಡುವ ಗುಣ. ರಜೋ ಗುಣವೆಂದರೆ ಕೋಪ, ತಾಪ, ದ್ವೇಷ, ಆಕ್ರೋಶದ ಗುಣ. ತಮ ಗುಣವೆಂದರೆ, ನಕರಾತ್ಮಕ ಆಲೋಚನೆ, ಅಸೂಯೆ, ಕಿಚ್ಚು, ತಿರಸ್ಕಾರ ಮನೋಭಾವದ ಗುಣ. ಆನೆ ಪಳಗಿಸಿದ ಹಾಗೆ ಈ ತ್ರಿಗುಣಗಳನ್ನು ಪಳಗಿಸಬೇಕೆಂದು ಜೋದರ ಮಾಯಣ್ಣ ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ ಎಂದು ಸ್ಮರಿಸಿದರು.
ಶಿವಶರಣ ದಶಗಣ ಸಿಂಗೀದೇವಯ್ಯ ಕುರಿತು ಎಸ್.ಜೆ.ಎಂ. ಬೃಹನ್ಮಠ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕಿ ಮಾಲಾ ನಾಗರಾಜ್ ಮಾತನಾಡಿ, ದಶಗಣ ಸಿಂಗೀದೇವಯ್ಯನವರ ಕಾಲಮಾನ 1160. ಇವರು ರಚಿಸಿದ 4 ವಚನಗಳು ನಮಗೆ ಲಭ್ಯವಿದೆ.
ಇದನ್ನೂ ಓದಿ: ಹಿರಿಯೂರು ತಾಲೂಕಿನಲ್ಲಿ ಕೆಇಬಿ ಸ್ಟೇಷನ್ | ವಿಕಾಸಸೌಧದಲ್ಲಿ ಸಚಿವ ಡಿ.ಸುಧಾಕರ್ ಸಭೆ
ಇವರು 12ನೆಯ ಶತಮಾನದ ಶರಣರಲ್ಲಿ ಒಬ್ಬರಾಗಿದ್ದರು. ಶರಣ ಸೇವಕ, ಸತ್ಯ ಶುದ್ಧ ಕಾಯಕ, ಸಂಗಮ ದಾಸೋಹಿ, ಪಾದೋದಕ ಪ್ರಾಣ ಜೀವ ಪೂಜೆ ನಿರತರಾಗಿರುತ್ತಾರೆ. ಇವರು ನಾಚಯ್ಯಪ್ರಿಯ ಮಲ್ಲಿನಾಥಯ್ಯ ಎಂಬ ವಚನಾಂಕಿತದಿಂದ ವಚನಗಳನ್ನು ರಚಿಸಿದ್ದಾರೆ ಎಂದರು.
ಎಸ್.ಜೆ.ಎಂ.ರೆಸಿಡೆನ್ಸಿಯಲ್ ಶಾಲೆ ಶಿಕ್ಷಕಿ ವೀಣಾ ಎಂ ಮಾತನಾಡಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
