ಮುಖ್ಯ ಸುದ್ದಿ
selected for state level; ವಿದ್ಯಾವಿಕಾಸ ಶಾಲೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

CHITRADURGA NEWS | 24 SEPTEMBER 2024
ಚಿತ್ರದುರ್ಗ: ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ 2 ತಂಡಗಳು 2024-25ನೇ ಸಾಲಿನ ಡಯಟ್‌ನಲ್ಲಿ ನಡೆದ ಜಿಲ್ಲಾ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ, ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ(state level) ಆಯ್ಕೆಯಾಗಿದ್ದಾರೆ.
ಕ್ಲಿಕ್ ಮಾಡಿ ಓದಿ: Davangere University ಅಧ್ಯಾಪಕರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

9ನೇ ತರಗತಿಯ ವಿದ್ಯಾರ್ಥಿಗಳಾದ ಜಾಗೃತ್.ಟಿ ಮತ್ತು ಹರ್ಷವರ್ಧನ್, ಧನುಷ್ ಮತ್ತು ಅನಿರುಧ್ ವಿ ಸಜ್ಜನ್ ತಂಡಗಳು ಭಾಗವಹಿಸಿ, ತಾಲ್ಲೂಕು ಮಟ್ಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ನಂತರ ಚಿತ್ರದುರ್ಗ ಡಯಟ್‌ನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಜಾಗೃತ್ ಟಿ ಮತ್ತು ಹರ್ಷವರ್ಧನ್ ಇಂಜಿನಿಯರಿಂಗ್ ವಿಭಾಗದಲ್ಲಿ ತಯಾರಿಸಿದ್ದ ‘ಅಧುನಿಕ ಎತ್ತಿನ ಬಂಡಿ ಮಾದರಿಗೆ’ ಮೆಚ್ಚುಗೆ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಈ ವಿದ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಕಿ ಸಿ.ಎಚ್.ಎಂ.ಆಶಾ ಮಾರ್ಗದರ್ಶನ ಮಾಡಿದ್ದರು.
