
CHITRADURGA NEWS | 13 NOVEMBER 2025
ಚಿತ್ರದುರ್ಗ: ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೆಬೆನ್ನೂರಿನಲ್ಲಿ ನವೆಂಬರ್ 6,7 ಮತ್ತು 8ನೇ ತಾರೀಖಿನಂದು ನಡೆದ 40ನೇ ರಾಜ್ಯಮಟ್ಟದ ಸಬ್ ಜೂನಿಯರ್ ಕೆಡಿಟ್, ಜೂನಿಯರ್ ಮತ್ತು ಸೀನಿಯರ್ ಟೇಕ್ವಾಂಡೋ ಪಂದ್ಯಾವಳಿಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿದ್ದಾರೆ.
ಎಂ.ಬಿ.ವಿಭಾ, ವಿ.ಸಾನ್ವಿ 7ನೇ ತರಗತಿ, ವೈ.ಸನ್ನಿಧಿ, ವಿ.ದೈವಿಕ್ 6ನೇ ತರಗತಿ,ಸಿ.ಪೃಥ್ವಿ 5ನೇ ತರಗತಿ, ಸಿ.ಭೂಮಿಕ 3ನೇ ತರಗತಿ, ವಿ.ಸನತ್ 2ನೇ ತರಗತಿ ವಿಜೇತ ವಿದ್ಯಾರ್ಥಿಗಳು.
ಇದನ್ನೂ ಓದಿ: ಸಾರ್ವತ್ರಿಕ ರಜೆ ದಿನಗಳಲ್ಲಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು | ಡಿಸಿ ಸೂಚನೆ
ಎಂ.ಬಿ.ವಿಭಾ, ವಿ.ಸಾನ್ವಿ, ವೈ.ಸನ್ನಿಧಿ ವಿದ್ಯಾರ್ಥಿಗಳು ಬಂಗಾರ ಪದಕಗಳಿಸಿ ನವೆಂಬರ್ 21, 22, 23ರಂದು ಉತ್ತರ ಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಟೇಕ್ವಾಂಡೋ ಸ್ಪರ್ಧೆಗೆ ಆಯ್ಕೆಯಾಗಿರೆ.
ರಾಷ್ಟ್ರಮಟ್ಟ ಟೇಕ್ವಾಂಡೋ ಸ್ಪರ್ಧೆಗೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಶಾಲೆಯ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
