
CHITRADURGA NEWS | 14 JUNE 2025
ಚಿತ್ರದುರ್ಗ: 2024-25ನೇ ಸಾಲಿನಲ್ಲಿ ವೀರಶೈವ ಅರ್ಬನ್ ಕ್ರೆಡಿಟ್ ಕೊ-ಆಪರೇಟಿವ್ ಬ್ಯಾಂಕ್ ಗೆ 89 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಬ್ಯಾಂಕ್‍ನ ಅಧ್ಯಕ್ಷ ಪಟೇಲ್ ಶಿವಕುಮಾರ್ ಹೇಳಿದರು.
Also Read: ಭಾರತದ ಜನಪ್ರಿಯತೆ ಉತ್ತುಂಗಕ್ಕೆ | ಶಾಸಕ ಎಂ.ಚಂದ್ರಪ್ಪ

ನಗರದ ಬಿ.ಡಿ.ರಸ್ತೆಯ ಶ್ರೀ ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 24 ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು.
ವೀರಶೈವ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ಕಳೆದ 24 ವರ್ಷಗಳಿಂದ ಲಾಭಗಳಿಸುತ್ತಾ ಬಂದಿದೆ. 24 ವರ್ಷಗಳಿಂದ ಸಂಘವು ಎ ಶ್ರೇಣಿಯಲ್ಲಿ ಮುಂದುವರಿಯುತ್ತಿದೆ ಎಂದರು.
ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ದಿನಾಂಕ 02.08.2025ಕ್ಕೆ 24 ವರ್ಷಗಳನ್ನು ಪೂರೈಸಿ ಬೆಳ್ಳಿ ಹಬ್ಬ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ.
ಈ ರಜತ ಮಹೋತ್ಸವದ ಆಚರಣೆಯ ಸಂಭ್ರಮದ ಸವಿನೆನಪಿಗಾಗಿ ರಜತ ಮಹೋತ್ಸವ ಭವನವನ್ನು ತಮ್ಮೆಲ್ಲರ ಸಹಕಾರದೊಂದಿಗೆ ನಿರ್ಮಿಸಲು ಸಂಸ್ಥೆಯು ಅತ್ಯಂತ ಉತ್ಸಾಹದಲ್ಲಿದೆ.
Also Read: ತುರ್ತು ನಿರ್ವಹಣಾ ಕಾಮಗಾರಿ | ಇಂದು ಮತ್ತು ನಾಳೆ ವಿದ್ಯುತ್ ವ್ಯತ್ಯಯ
ಚಿತ್ರದುರ್ಗ ನಗರದ ಧವಳಗಿರಿ ಬಡಾವಣೆಯಲ್ಲಿ 60×180 ಅಡಿ ವಿಸ್ತೀರ್ಣದ ನಿವೇಶನವನ್ನು ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಂಸ್ಥೆಯ ಹೆಸರಿಗೆ ನೊಂದಾಯಿಸಿಕೊಳ್ಳಲಾಗಿರುತ್ತದೆ ಎಂದರು.
ಆಡಳಿತ ಮಂಡಳಿಯು ರಜತ ಮಹೋತ್ಸವ ಭವನ ನಿರ್ಮಾಣದ ಭೂಮಿ ಪೂಜೆಯನ್ನು ಬಸವ ಜಯಂತಿಯ ದಿನದಂದು ನೆರವೇರಿಸಲಾಯಿತು. ಈ ರಜತ ಮಹೋತ್ಸವ ಭವನಕ್ಕೆ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಸುಮಾರು ರೂ.3 ಕೋಟಿಗೂ ಅಧಿಕ ವೆಚ್ಚವಾಗಲಿದೆ.
ಸೊಸೈಟಿಯಲ್ಲಿ ಲಭ್ಯವಿರುವ ಕಟ್ಟಡ ನಿಧಿ ರೂ.1.55 ಕೋಟಿ ಲಭ್ಯವಿದ್ದು, ಉಳಿದ ಮೊತ್ತವನ್ನು ದಾನಿಗಳು ಹಾಗೂ ಸೊಸೈಟಿಯ ಎಲ್ಲಾ ಷೇರುದಾರರ ಸಹಕಾರದೊಂದಿಗೆ ನಿರ್ಮಿಸಲು ಆಡಳಿತ ಮಂಡಲಿ ಕಾರ್ಯೋನ್ಮುಖವಾಗಿದೆ. 2024-25ನೇ ಸಾಲಿನಲ್ಲಿ ಲೆಕ್ಕ ಪರಿಶೋಧಕರು ಸಂಘದ ಲೆಕ್ಕಪತ್ರಗಳನ್ನು ಪರಿಶೋಧಿಸಿ ಸಂಘವನ್ನು ಎ ಶ್ರೇಣಿಯ ಸಂಘವೆಂದು ಪರಿಗಣಿಸಿರುತ್ತಾರೆ ಎಂದು ತಿಳಿಸಿದರು.
ವೀರಶೈವ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯೂ 2024-25ನೇ ಸಾಲಿನಲ್ಲಿ 1721 ಸದಸ್ಯತ್ವವನ್ನು ಹೊಂದಿದ್ದು, ರೂ.80.18 ಲಕ್ಷ ಷೇರು ಬಂಡವಾಳವನ್ನು ಹೊಂದಿದ್ದು, ರೂ.368.04 ಲಕ್ಷ ಕಾಯ್ದಿಟ್ಟ ನಿಧಿಯನ್ನು ಹೊಂದಿದ್ದು, ರೂ.430.44 ಲಕ್ಷ ಇತರೆ ನಿಧಿಗಳನ್ನು ಹೊಂದಿದೆ.
ರೂ.1368.25 ಲಕ್ಷ ಠೇವಣಿಗಳನ್ನು ಹೊಂದಿದ್ದು, 758.39 ಲಕ್ಷ ರೂ. ಹೊಡಿಕೆಗಳನ್ನು ಮಾಡಲಾಗಿದೆ. 1227.23 ಲಕ್ಷ ರೂ ವಿವಿಧ ರೀತಿಯ ಸಾಲವನ್ನು ನೀಡಲಾಗಿದೆ. ರೂ.2131.51 ಲಕ್ಷ ದುಡಿಯುವ ಬಂಡವಾಳವನ್ನು ಹೊಂದಿದ್ದು, ಈ ಸಾಲಿನಲ್ಲಿ ಸಂಘವು ರೂ.89 ಲಕ್ಷ ನಿವ್ವಳ ಲಾಭಗಳಿಸಿದೆ ಎಂದರು.
Also Read: ಮೊಡವೆಗಳನ್ನು ಕಡಿಮೆ ಮಾಡಲು ಅರಿಶಿನದೊಂದಿಗೆ ಇದನ್ನು ಮಿಕ್ಸ್ ಮಾಡಿ ಹಚ್ಚಿ
ಈ ಸಂದರ್ಭದಲ್ಲಿ ಸಂಘದ ಸದಸ್ಯರ ಮಕ್ಕಳು ಎಸ್.ಎಸ್.ಎಲ್.ಸಿ. ಹಾಗೂ ದ್ವೀತಿಯ ಪಿ.ಯು.ನಲ್ಲಿ ಉತ್ತಮ ಅಂಕಗಳಿಸಿದವರನ್ನು ಸನ್ಮಾನ ಮಾಡಲಾಯಿತು.
ಸಭೆಯಲ್ಲಿ ವೀರಶೈವ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಜಿ.ಟಿ.ಸುರೇಶ್, ನಿರ್ದೇಶಕರುಗಳಾದ ಎಸ್.ಪರಮೇಶ್ವರಪ್ಪ, ಎಸ್.ವಿ.ನಾಗರಾಜಪ್ಪ, ಎಸ್.ಷಣ್ಮುಖಪ್ಪ, ಡಿ.ಎಸ್., ಮಲ್ಲಿಕಾರ್ಜನಪ್ಪ, ಬಿ.ಎಂ.ಕರಿಬಸವಯ್ಯ, ಸಿ.ಚಂದ್ರಪ್ಪ, ಜಯಶ್ರೀ, ಆರ್.ಶೈಲಜಾ, ಬ್ಯಾಂಕ್‍ನ ವ್ಯವಸ್ಥಾಪಕರಾದ ಕುಸುಮ ಜವಳಿ ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
