CHITRADURGA NEWS | 18 APRIL 2025
ಚಿತ್ರದುರ್ಗ: ಏಪ್ರಿಲ್ 28, 29 ಹಾಗೂ 30ರಂದು ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಬಸವೇಶ್ವರರ ಜಯಂತಿ ಅಂಗವಾಗಿ ವಿಶೇಷ ಕಾರ್ಯಕ್ರಮಗಳು ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
Also Read: ರಾಶಿ ಅಡಿಕೆ ಬೆಲೆ 58 ಸಾವಿರದತ್ತ ದಾಪುಗಾಲು
ಏ.28ರಂದು ಸೋಮವಾರ ಬೆಳಗ್ಗೆ 10 ಗಂಟೆಗೆ ಶ್ರೀಮಠದ ಅನುಭವ ಮಂಟಪದಲ್ಲಿ ವಚನ ಕಂಠಪಾಠ ಸ್ಪರ್ಧೆ, ಅದೇ ಸಮಯದಲ್ಲಿ ಶ್ರೀಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಬಸವಾದಿ ಶಿವಶರಣರ ವೇಷಭೂಷಣ ಸ್ಪರ್ಧೆ ಹಾಗೂ ಶ್ರೀಮಠದ ಆವರಣದಲ್ಲಿ ರಂಗೋಲಿ ಸ್ಪರ್ಧೆ (ಇದರಲ್ಲಿ ಬಸವಾದಿ ಶಿವಶರಣರ ಚಿತ್ರಗಳನ್ನೂ ಬಿಡಿಸಬಹುದಾಗಿದೆ) ನಡೆಯಲಿದೆ.
ಏ.29ರಂದು ಮಂಗಳವಾರ ಬೆಳಗ್ಗೆ 10 ಗಂಟೆಗೆ ಅನುಭವ ಮಂಟಪದಲ್ಲಿ 18 ವರ್ಷ ಮೇಲ್ಪಟ್ಟವರಿಗೆ 1 ಗಂಟೆ ಕಾಲಾವಧಿಯಲ್ಲಿ “ಸರ್ವಶರಣರ ದೃಷ್ಟಿಯಲ್ಲಿ ಬಸವಣ್ಣ”ನವರು ವಿಷಯ ಕುರಿತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಪಿಯುಸಿ, ಪದವಿ ಹಾಗೂ ಪದವೀಧರರಿಗೆ 7 ನಿಮಿಷಗಳ ಕಾಲಾವಧಿಯಲ್ಲಿ “ಸಾಂಸ್ಕೃತಿಕ ನಾಯಕ ಬಸವಣ್ಣ” ವಿಷಯ ಕುರಿತಾಗಿ ಭಾಷಣ ಸ್ಪರ್ಧೆಯನ್ನು ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.
Also Read: ಹೊಳಲ್ಕೆರೆ, ಅಮೃತಪುರ ನಿಲ್ದಾಣದಲ್ಲಿ ಹೊಸಪೇಟೆ-ಬೆಂಗಳೂರು ರೈಲು ನಿಲುಗಡೆ | ಗೋವಿಂದ ಕಾರಜೋಳ
ಆಯಾ ವಿಭಾಗದಲ್ಲಿ ವಿಜೇತರಾದವರಿಗೆ ಪ್ರಥಮ ರೂ.5000, ದ್ವಿತೀಯ ರೂ.3000, ತೃತೀಯ ರೂ.2000 ನಗದು ಬಹುಮಾನ ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ ವಿತರಿಸಲಾಗುವುದು. ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ.
ಸ್ಪರ್ಧೆಗಳಲ್ಲಿ ಭಾಗವಹಿಸುವವರು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಏ. 24 ಗುರುವಾರ ಕಡೆ ದಿನವಾಗಿರುತ್ತದೆ.
Also Read: ಪಿಸಿಒಡಿ ಸಮಸ್ಯೆ ಇರುವವರು ಮೊಟ್ಟೆಯ ಗುಣಮಟ್ಟವನ್ನು ಸುಧಾರಿಸಲು ಈ ಸಲಹೆ ಪಾಲಿಸಿ
ಸ್ವ-ವಿವರವುಳ್ಳ ಮಾಹಿತಿಯನ್ನು ಈ ಕೆಳಕಂಡ 94482 95901, 94499 74004, 9902929701, 97400 37176, 944864932 , 9886840737 ಮೊಬೈಲ್ ನಂಬರ್‌ಗಳಿಗೆ ಸಂಪರ್ಕಿಸಬಹುದು, ಇಲ್ಲವೇ ಖುದ್ದಾಗಿ ಭೇಟಿ ಹಾಗೂ ಫೋನಿನಲ್ಲಿ ಮಾಹಿತಿಯನ್ನು ನೀಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
