Connect with us

    Varaha Rupam: ಹಿಂದೂ ಮಹಾಗಣಪತಿ ಸನ್ನಿಧಾನದಲ್ಲಿ ‘ವರಾಹ ರೂಪಂ…’ | ಗಾಯಕ ಸಾಯಿ ವಿಘ್ನೇಶ್‌ರಿಂದ ಲೈನ್‌ ಇನ್‌ ಕಾನ್ಸರ್ಟ್‌

    VARAH ROOPA

    ಮುಖ್ಯ ಸುದ್ದಿ

    Varaha Rupam: ಹಿಂದೂ ಮಹಾಗಣಪತಿ ಸನ್ನಿಧಾನದಲ್ಲಿ ‘ವರಾಹ ರೂಪಂ…’ | ಗಾಯಕ ಸಾಯಿ ವಿಘ್ನೇಶ್‌ರಿಂದ ಲೈನ್‌ ಇನ್‌ ಕಾನ್ಸರ್ಟ್‌

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 09 SEPTEMBER 2024
    ಚಿತ್ರದುರ್ಗ: ಕಾಂತಾರ ಸಿನಿಮಾದ ‘ವರಾಹ ರೂಪಂ…’ ಹಾಡಿಗೆ ದೈವಿ ಕಳೆತುಂಬಿದ ಗಾಯಕ ಸಾಯಿ ವಿಘ್ನೇಶ್ ಕೋಟೆನಾಡಿಗೆ ಆಗಮಿಸುತ್ತಿದ್ದಾರೆ.

    ವಿಶ್ವ ಹಿಂದು ಪರಿಷದ್‌– ಬಜರಂಗದಳದಿಂದ ನಗರದ ಜೈನಧಾಮದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ಮಹೋತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ಸೋಮವಾರ ಸಂಜೆ 6.30ರಿಂದ 9.30 ರವರೆಗೆ ಸಾಯಿ ವಿಘ್ನೇಶ್‌ ಅವರ ಲೈನ್‌ ಇನ್‌ ಕಾನ್ಸರ್ಟ್‌ ನಡೆಯಲಿದೆ. ಸತತ ಮೂರು ಗಂಟೆ ಸಾಯಿ ವಿಘ್ನೇಶ್‌ ತಂಡ ಹಾಡುಗಳನ್ನು ಪ್ರಸ್ತುತಪಡಿಸಲಿದೆ.

    ಮೂಲತಃ ಚೆನ್ನೈನ ಸಾಯಿ ವಿಘ್ನೇಶ್‌ ಪೂರ್ಣ ಹೆಸರು ಸಾಯಿ ವಿಘ್ನೇಶ್‌ ರಾಮಕೃಷ್ಣನ್‌. ಸಂಗೀತದಲ್ಲಿ ಮುಖ್ಯ ತರಬೇತಿ ಕರ್ನಾಟಕದಲ್ಲಿ ಆಗಿರುವುದು ವಿಶೇಷ. ಇಳಯರಾಜ, ಎಸ್‌.ಪಿ.ಬಾಲಸುಬ್ರಮಣ್ಯಂ, ಶಂಕರ್ ಮಹದೇವನ್ ಅವರಂತಹ ಸಂಗೀತ ದಂತಕಥೆಗಳೊಂದಿಗೆ ಪ್ರದರ್ಶನ ನೀಡಿದ್ದಾರೆ. ತಮಿಳು,ತೆಲುಗು ಮತ್ತು ಕನ್ನಡದಲ್ಲಿ ಯಶಸ್ವಿ ಹಿನ್ನೆಲೆ ಗಾಯಕರಾಗಿದ್ದಾರೆ.

    ಕ್ಲಿಕ್ ಮಾಡಿ ಓದಿ: ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಶ್ರದ್ಧಾಂಜಲಿ | 5 ದಿನ ಸಮಾರಂಭ

    ಸಾಯಿ ವಿಘ್ನೇಶ್‌ ಏರ್‌ಟೆಲ್‌ ಸೂಪರ್‌ ಸಿಂಗರ್‌ 4 ರಲ್ಲಿ ಸ್ಪರ್ಧಿಯಾಗಿ ಗಮನಸೆಳೆದಿದ್ದು. ಅವರು 2018 ರಲ್ಲಿ ಏಘಂತಂ ಮೂಲಕ ಹಿನ್ನೆಲೆ ಗಾಯನಕ್ಕೆ ಪಾದಾರ್ಪಣೆ ಮಾಡಿದರು. ಆದರೆ 2022 ರಲ್ಲಿ ಸೀತಾ ರಾಮಮ್‌ನ ‘ಕುರುಮುಗಿಲ್‌’ ಮತ್ತು ಕಾಂತಾರ ಚಿತ್ರದ ಬ್ಲಾಕ್‌ ಬಸ್ಟರ್ ಗೀತೆ ‘ವರಾಹ ರೂಪಂ..’ ಸಾಯಿ ವಿಘ್ನೇಶ್‌ ವೃತ್ತಿ ಬದುಕಿನ ಮೈಲಿಗಲ್ಲುಗಳಾಗಿವೆ. ಆಲ್‌ ಇಂಡಿಯಾ ರೇಡಿಯೋದ ‘ಎ’ ಉನ್ನತ ದರ್ಜೆಯ ಕಲಾವಿದರಾಗಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top