
CHITRADURGA NEWS | 20 MARCH 2026
ಚಿತ್ರದುರ್ಗ: ಹಿಂದೂಗಳ ಪಾಲಿನ ಹೊಸ ವರ್ಷ ಯುಗಾದಿ ಹಬ್ಬ ಸಂಭ್ರಮದಿಂದ ನಡೆಯಿತು. ಬಿರು ಬಿಸಿಲಿನಲ್ಲೂ ವರ್ಷಾರಂಭದಲ್ಲಿ ಎಣ್ಣೆಸ್ನಾನದೊಂದಿಗೆ ಹಬ್ಬ ಶುಕ್ರವಾರ ಸಂಜೆ ಚಂದ್ರದರ್ಶನದ ಮೂಲಕ ಸಂಪನ್ನವಾಯಿತು.
ವಿಶೇಷ ಅಲಂಕಾರ:
ಹಳ್ಳಿ ಹಳ್ಳಿಗಳಲ್ಲೂ ಯುವಕರು, ಮಕ್ಕಳು ಮೈ ತುಂಬಾ ಎಣ್ಣೆ ಹಚ್ಚಿಕೊಂಡು ಓಡಾಡುತ್ತಿದ್ದರು. ಮಧ್ಯಾಹ್ನದ ನಂತರ ಸ್ನಾನ ಮಾಡಿ ದೇವರ ಪೂಜೆ, ದೇವಸ್ಥಾನಗಳಿಗೆ ಭೇಟಿ ನೀಡುವ ಮೂಲಕ ಹೊಸ ಸಂವತ್ಸರವನ್ನು ಸ್ವಾಗತಿಸಿದರು.
ಇದನ್ನೂ ಓದಿ: ಆಸಿಡ್ ದಾಳಿ ಸಂತ್ರಸ್ತರ ಆರೋಗ್ಯ ವಿಚಾರಿಸಿದ ನ್ಯಾ.ವಿಜಯ್
ಇನ್ನೂ ಶುಕ್ರವಾರ ಎರಡನೇ ಹಬ್ಬ ಚಂದ್ರ ದರ್ಶನವೂ ಸಂಭ್ರಮದಿಂದ ನಡೆಯಿತು. ಸಂಜೆಯಾಗುತ್ತಲೇ ಎಲ್ಲರ ದೃಷ್ಟಿ ಆಗಸದತ್ತ ನೆಟ್ಟಿತ್ತು.
ಸಂಜೆ 6.30 ಸುಮಾರಿಗೆ ಸಣ್ಣಗೆರೆಯಂತೆ ಚಂದ್ರ ದರ್ಶನವಾಗುತ್ತಲೇ ಕೈಮುಗಿದು, ತಂದೆ, ತಾಯಿ, ಹಿರಿಯರ ಆಶೀರ್ವಾದ ಪಡೆದುಕೊಳ್ಳುವ ದೃಶ್ಯಗಳು ಎಲ್ಲೆಲ್ಲೂ ಕಂಡು ಬಂದವು.
ಇದನ್ನೂ ಓದಿ: ಭದ್ರೆಗಾಗಿ ಸಿರಿಗೆರೆ ಶ್ರೀಗಳ ನಡೆ ಸ್ವಾಗತಾರ್ಹ
ಚಂದ್ರದರ್ಶನ ಆಗುತ್ತಿದ್ದಂತೆ ಎಲ್ಲರೂ ದೇವಸ್ಥಾನಗಳತ್ತ ದೌಡಾಯಿಸಿದರು. ದೇವಸ್ಥಾನಗಳಲ್ಲಿ ಜನವೋ ಜನ ಎನ್ನುವಂತೆ ತುಂಬಿ ತುಳುಕಿದವು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
