ನಿಧನವಾರ್ತೆ
ತಾಳ್ಯದ ಟಿ.ಕೆ.ಗಂಗಾಧರಪ್ಪ ನಿಧನ

Published on
CHITRADURGA NEWS | 31 MARCH 2024
ಚಿತ್ರದುರ್ಗ: ನೀರಾವರಿ ಇಲಾಖೆ ನಿವೃತ್ತ ನೌಕರ ಹೊಳಲ್ಕೆರೆ ತಾಲೂಕು ತಾಳ್ಯದ ಟಿ.ಕೆ.ಗಂಗಾಧರಪ್ಪ(74) ಇಂದು(ಭಾನುವಾರ) ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ.
ನೀರಾವರಿ ಇಲಾಖೆಯಲ್ಲಿ ಸ್ಟೋರ್ ಕೀಪರ್ ಹುದ್ದೆಯಲ್ಲಿದ್ದ ಗಂಗಾಧರಪ್ಪ, ದಾವಣಗೆರೆ, ಮಲೆಬೆನ್ನೂರು, ರಾಯಚೂರು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದರು.

ನೌಕರಿಗೆ ಸ್ವಯಂ ನಿವೃತ್ತಿ ಪಡೆದ ನಂತರ ಕುಟುಂಬದೊಂದಿಗೆ ತಾಳ್ಯದಲ್ಲಿ ನೆಲೆಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.
ಮೃತರು ಉದಯವಾಣಿ ಜಾಹೀರಾತು ವಿಭಾಗದ ಪ್ರತಿನಿಧಿ ಶ್ರೀನಿವಾಸ್ ಸೇರಿದಂತೆ ಪತ್ನಿ, ಸಹೋಧರರು, ಬಂಧುಗಳು, ಮೊಮ್ಮಕ್ಕಳನ್ನು ಅಗಲಿದ್ದಾರೆ.
ಸ್ವಗ್ರಾಮ ತಾಳ್ಯದ ತೋಟದಲ್ಲಿ ಏ.1 ಸೋಮವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Continue Reading
Related Topics:Chitradurga, death, Heart Attack, Holalkere, Talya, ಚಿತ್ರದುರ್ಗ, ತಾಳ್ಯ, ನಿಧನ, ಹೃದಯಾಘಾತ, ಹೊಳಲ್ಕೆರೆ

Click to comment