
CHITRADURGA NEWS | 23 FEBRUARY 2026
ಚಿತ್ರದುರ್ಗ: ನಗರದ ಜೈನ ಸಮುದಾಯದ ಮೂವರು ಯುವತಿಯರು ಜೈನ ಸನ್ಯಾಸಿಗಳಾಗಿ ಫೆ.25 ರಂದು ನಗರದ ವಾಲ್ಮೀಕಿ ಭವನದಲ್ಲಿ ದೀಕ್ಷೆ ಪಡೆಯಲಿದ್ದಾರೆ.
ಇದನ್ನೂ ಓದಿ: ಸ್ಫೋಟಕ ಸೇವಿಸಿ ಮುಧೋಳ ನಾಯಿ ಸಾವು!

ಮಾಗಿಲಾಲ್ ಸುಖಿಬಾಯಿ ಅವರ ಪುತ್ರಿ ಸವಿತಾ ಕುಮಾರಿ ಹಾಗೂ ಲಲಿತಾ ಕುಮಾರ್ ಜೀ ಮತ್ತು ಸುಶೀಲಾಬೆಹನ್ ಅವರ ಪುತ್ರಿಯರಾದ ಛವಿ ಕುಮಾರಿ, ಮತ್ತು ದಿವ್ಯ ಕುಮಾರಿ ಸನ್ಯಾಸತ್ವದತ್ತ ಒಲವು ತೋರಿಸಿದ್ದಾರೆ.
ಚಿತ್ರದುರ್ಗದಲ್ಲಿ ಶಿಕ್ಷಣ ಪಡೆದ 11 ಯುವತಿಯರು ಈವರೆಗೆ ಜೈನ ಸನ್ಯಾಸಿಗಳಾಗಿದ್ದಾರೆ.
ಇಲ್ಲಿ ಆಡಂಬರವಿಲ್ಲ. ಸುಖ, ಸಂತೋಷಕ್ಕಿಂತ ಭಗವಂತನ ಸೇವೆ ಮುಖ್ಯವಾಗಿರುತ್ತದೆ. ತಮಗೆ ಬಾಹ್ಯ ಪ್ರಪಂಚದಲ್ಲಿ ಇರುವ ಸುಖಕ್ಕಿಂತ ಸನ್ಯಾಸತ್ವದಲ್ಲಿ ಸುಖವಿದೆ ಅನ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜೈನ ಮುನಿಯಾಗಿ ತೆರಳಲು ಅಣಿಯಾಗಿದ್ದೇನೆ ಎಂದು ಸವಿತಾ ಕುಮಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಸರ್ಕಾರದ ವಿರುದ್ಧ ಸಿಡಿದೆದ್ದ ಗುತ್ತಿಗೆದಾರರು | ₹36,000 ಕೋಟಿ ಬಾಕಿ ಬಿಲ್‌ಗಾಗಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ
ಈ ಮೂರು ಜನರಿಗೆ ಫೆ. 25ರ ಬೆಳಿಗ್ಗೆ 9 ಗಂಟೆಗೆ ಆಭಯ ಶೇಖರ್ ಸುರೇಶ್ವರಜೀ ತಾರಕೇಶ್ವರ ಗುರುಗಳು ದೀಕ್ಷೆ ನೀಡಲಿದ್ದಾರೆ. ಫೆ.24 ರಂದು ಚಿತ್ರದುರ್ಗ ನಗರದಲ್ಲಿ ಜೈನ ಮುನಿಗಳಾಗುತ್ತಿರುವ ಈ ಮೂರು ಜನ ಬಾಲಕಿಯರ ಮೆರವಣಿಗೆ ನಡೆಸಲಾಗುತ್ತದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
