CHITRADURGA NEWS | 16 AUGUST 2025
ಚಿತ್ರದುರ್ಗ: ಹಣ, ಆಸ್ತಿ, ಅಂತಸ್ಸು ಇದ್ದವರು ಶ್ರೀಮಂತರಲ್ಲ, ಉತ್ತಮವಾದ ಆರೋಗ್ಯವನ್ನು ಹೊಂದಿರುವವನೆ ಇಂದಿನ ದಿನಮಾನದಲ್ಲಿ ಶ್ರೀಮಂತ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.
ಇದನ್ನೂ ಓದಿ: SJM ಕ್ಯಾಂಪಸ್‌ನಲ್ಲಿ ಸ್ವಾತಂತ್ರ‍್ಯ ದಿನಾಚರಣೆ | ಶಿವಯೋಗಿ ಸಿ.ಕಳಸ ಧ್ವಜಾರೋಹಣ
ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಸಂಘ ಹಾಗೂ ಎಸ್.ಎಸ್.ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ ವತಿಯಿಂದ ನಗರದ ಪ್ರವಾಸಿ ಮಂದಿರದ ಮುಂಭಾಗದಲ್ಲಿನ ಮದಕರಿ ನಾಯಕ ಫೌಡ್ರಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು,
ಕಳೆದ 35 ರಿಂದ 38 ವರ್ಷಗಳ ಕಾಲ ನೀವುಗಳು ಸರ್ಕಾರಿ ನೌಕರರಾಗಿ ನಿಮ್ಮ ಆರೋಗ್ಯವನ್ನು ಸಹಾ ಲೆಕ್ಕಿಸದೆ ಕೆಲಸ ಮಾಡಿದ್ದೀರಾ. ಈಗ ನಿವೃತ್ತಿಯಾದ ಮೇಲಾದರೂ ಸಹಾ ನಿಮ್ಮ ಆರೋಗ್ಯದ ಕಡೆಯಲ್ಲಿ ಗಮನ ನೀಡಿ.
ಇಂದಿನ ಒತ್ತಡದ ಬದುಕಿನಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ಮುಖ್ಯವಾಗಿದೆ. ಇವೆರಡರಲ್ಲಿ ಯಾವುದಾರೂ ಒಂದು ಕೈಕೊಟ್ಟರೆ ಮನುಷ್ಯ ಕುಸಿದು ಹೋಗುತ್ತಾನೆ. ಮಾನಸಿಕವಾಗಿ ಏನಾದರೂ ಚಿಂತೆ ಹಚ್ಚಿಕೊಂಡರೆ ಅದು ಚಿತೆಯ ಹತ್ತಿರ ಕರೆದುಕೊಂಡು ಹೋಗುತ್ತದೆ. ಚಿಂತೆ ಹೊಂದಿದವರು ಚಿತೆಗೆ ಹತ್ತಿರವಾಗುತ್ತಾರೆ.
ಇದನ್ನೂ ಓದಿ: ಅಹೋಬಲ TVS ಶೋ ರೂಂನಲ್ಲಿ ಸ್ವಾತಂತ್ರ್ಯ ದಿನಾಚರಣೆ
ದೈಹಿಕವಾಗಿ ಸದೃಢವಾಗಿದ್ದೆರೆ ಮಾತ್ರ ಉತ್ತಮವಾದ ಆರೋಗ್ಯವನ್ನು ಹೊಂದಲು ಸಾಧ್ಯವಿದೆ. ಇತ್ತಿಚಿನ ದಿನಮಾನದಲ್ಲಿ ಯುವ ಜನಾಂಗದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಆಹಾರ, ಜೀವನ ಪದ್ದತಿ ಇಂದಿನ ಯುವ ಜನಾಂಗದ ಮೇಲೆ ದುಷ್ಪರಿಣಾಮ ಬೀರಿದೆ. ಇದಕ್ಕೆ ನಾವು ದೈಹಿಕವಾಗಿ ಆಹಾರ, ಮಾನಸಿಕ ಆಲೋಚನೆ ಸರಿದಾರಿಗೆ ತೆಗೆದುಕೊಂಡು ಹೋಗುವ ಆಲೋಚನೆ ಮಾಡಬೇಕಿದೆ.
ಇಂದಿನ ದಿನದಲ್ಲಿ ನಿವೃತ್ತಿಯಾಗಿ ಉತ್ತಮ ಆರೋಗ್ಯ ಹೊಂದಿರುವವರು ಯುವ ಜನಾಂಗಕ್ಕೆ ಸ್ಪೂರ್ತಿಯಾಗಿರಬೇಕಿದೆ ಎಂದರು.
ಈ ತಪಾಸಣೆ ಶಿಬಿರದಲ್ಲಿ ವೈದ್ಯರು ನೀಡುವ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ನಿಮ್ಮ ನಿರ್ಧಾರ ತೆಗೆದುಕೊಳ್ಳಬೇಡಿ. ಇದರಿಂದ ಉತ್ತಮವಾದ ಆರೋಗ್ಯವನ್ನು ಹೊಂದಲು ಸಾಧ್ಯವಿದೆ ಎಂದರು.
ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ಕೆ.ಹನುಮಂತಪ್ಪ ಮಾತನಾಡಿ, ನಾವು ಸಹಾ ಹಲವಾರು ವರ್ಷಗಳ ಕಾಲ ವಿವಿಧ ಇಲಾಖೆಯಲ್ಲಿ ಸೇವೆಯನ್ನು ಮಾಡುವುದರ ಮೂಲಕ ನಿವೃತ್ತಿಯನ್ನು ಕಾಣಲಾಗಿದೆ.
ಇದನ್ನೂ ಓದಿ: ವಾರ್ತಾ ಇಲಾಖೆ | ಪತ್ರಕರ್ತರ ವಾಹನ ಹಸ್ತಾಂತರಿಸಿದ ಸಚಿವ ಡಿ.ಸುಧಾಕರ್
ಕರ್ತವ್ಯ ಸಮಯದಲ್ಲಿ ಆರೋಗ್ಯವಾಗಿ ಇದ್ದ ನಾವುಗಳು ನಿವೃತ್ತಿಯಾದ ನಂತರ ವಿವಿಧ ರೀತಿಯ ಖಾಯಿಲೆಗಳು ಬರುತ್ತವೆ, ಇದಕ್ಕೆ ಚಿಕಿತ್ಸೆ ಪಡೆಯಲು ಆರ್ಥಿಕವಾಗಿ ನಾವುಗಳು ಸಬಲರಾಗಿಲ್ಲ, ನಮಗೆ ಬರುವ ಪಿಂಚಿಣಿಯಿಂದ ನಾವುಗಳು ನಮ್ಮ ಕುಟುಂಬವನ್ನು ಸಲಹೆ ಬೇಕಿದೆ. ಇದರ ಮಧ್ಯದಲ್ಲಿ ನಮ್ಮ ಆರೋಗ್ಯವನ್ನು ಸಹಾ ಕಾಪಾಡಿಕೊಳ್ಳಬೇಕಿದೆ.
ಚಿಕಿತ್ಸೆ ಪಡೆಯಲು ಲಕ್ಷಾಂತರ ರೂ ವೆಚ್ಚವಾಗುತ್ತದೆ ಈ ಹಿನ್ನಲೆಯಲ್ಲಿ ನಮಗೂ ಸಹಾ ಸರ್ಕಾರಿ ನೌಕರರಿಗೆ ನೀಡಿದಂತೆ ಜ್ಯೋತಿ ಸಂಜೀವಿನಿ ಯೋಜನೆಯನ್ನು ಉಚಿತವಾಗಿ ಜಾರಿ ಮಾಡಿದರೆ ಅನುಕೂಲವಾಗುತ್ತದೆ ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಸುಮಾರು 300ಕ್ಕೂ ಹೆಚ್ಚು ನಿವೃತ್ತ ನೌಕರರ ಹೃದಯ ರೋಗ, ಕಿಡ್ನಿ ಸಮಸ್ಯೆ, ನರರೋಗ, ಮೂತ್ರಕೋಶ ಹಾಗೂ ಗ್ಯಾಸ್ಟೋ ಸೈನ್ಸಸ್ ಬಗ್ಗೆ ಆರೋಗ್ಯ ತಪಾಸಣೆ ಮಾಡಲಾಯಿತು.
ಇದನ್ನೂ ಓದಿ: ರಸ್ತೆ ಅಗಲೀಕರಣ ಶತಃಸಿದ್ಧ | ಮೆಡಿಕಲ್ ಕಾಲೇಜು ಹೊಸ ಡಿಸಿ ಆಫೀಸಿಗೆ | ಸಚಿವ ಸುಧಾಕರ್ ಮಹತ್ವದ ಸಭೆ
ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಸಂಘದ ಗೌರವಾಧ್ಯಕ್ಷ ನಾಗರಾಜ್ ಸಂಗಂ, ಪ್ರಧಾನ ಕಾರ್ಯದರ್ಶಿ ಹೆಚ್.ಪರಮೇಶ್ವರಪ್ಪ, ನಿವೃತ್ತ ಪಿಎಸ್.ಐ.ನಾಗರಾಜ್, ಎಸ್.ಎಸ್.ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್‍ನ ಕೋ-ಆಡಿನೇಟರ್ ಎಸ್.ಎ.ಗುಡ್ಡಪ್ಪ, ಮದಕರಿನಾಯಕ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ವಸಂತಕುಮಾರ್, ಡಾ.ರಾಕೇಶ್, ಗೋವಿಂದಪ್ಪ, ಶಿವಕುಮಾರ್, ಹಾಲನಾಯ್ಕ್, ತಿಮ್ಮಾರೆಡ್ಡಿ, ಪ್ರೇಮಾ, ಸೇರಿದಂತೆ ಇತರರು ಭಾಗವಹಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
