
CHITRADURGA NEWS | 15 AUGUST 2025
ಚಿತ್ರದುರ್ಗ: ನಗರದಲ್ಲಿರುವ ಶ್ರೀ ಅಹೋಬಲ ಟಿವಿಎಸ್ ಶೋ ರೂಂ ನಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಯಿತು. ಶ್ರೀ ಅಹೋಬಲ ಟಿವಿಎಸ್ ಕಂಪನಿಯ ಸಿಇಒ ಪಿ.ವಿ.ಅರುಣ್ ಕುಮಾರ್ ಧ್ವಜರೋಹಣ ನೆರವೇರಿಸಿದರು.
ಇದನ್ನೂ ಓದಿ: ವಾರ್ತಾ ಇಲಾಖೆ | ಪತ್ರಕರ್ತರ ವಾಹನ ಹಸ್ತಾಂತರಿಸಿದ ಸಚಿವ ಡಿ.ಸುಧಾಕರ್

ಈ ವೇಳೆ ಪಿ.ವಿ.ಅರುಣ್ ಕುಮಾರ್ ಮಾತನಾಡಿ, ನಮ್ಮ ದೇಶದಲ್ಲಿ ಭಾವೈಕ್ಯತೆ ಕೊರತೆ ಕಾಣುತ್ತಿದೆ. ಸ್ವಾತಂತ್ರ್ಯ ಪಡೆದು 79 ವರ್ಷ ಕಳೆದರು ಸಹ ಜಾತಿ ವ್ಯವಸ್ಥೆ , ವರ್ಣ ವ್ಯವಸ್ಥೆ ಹೆಚ್ಚುತ್ತಿರುವುದು ಮುಂದಿನ ದಿನದಲ್ಲಿ ದೇಶದಲ್ಲಿ ಎಲ್ಲಾ ರಂಗದಲ್ಲಿ ಸುಧಾರಣೆ ಆಗಬೇಕಿದೆ ಎಂದರು.
ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ ಬ್ರಿಟಿಷ್ ವಿರುದ್ಧ ಹೋರಟ ಮಾಡಿ ನಮಗೆಲ್ಲ ಸ್ವಾತಂತ್ರ್ಯ ತಂದು ಕೊಟ್ಟಿದ್ದರು. ಆದರೆ ಸ್ವಾತಂತ್ರ್ಯ ಪಡೆಯುವಾಗ ಇದ್ದಂತಹ ಒಗ್ಗಟ್ಟು ಪ್ರಸ್ತುತ ದಿನಗಳಲ್ಲಿ ಕಾಣುತ್ತಿಲ್ಲ, ದೇಶ ಎತ್ತ ಸಾಗುತ್ತಿದೆ ಎಂಬುದನ್ನು ಮತ್ತೊಮ್ಮೆ ನಾವು ಪರಾಮರ್ಶೆ ಮಾಡಿಕೊಳ್ಳವ ಅವಶ್ಯತೆ ತುರ್ತಾಗಿ ಇದೆ.
ಮನುಷ್ಯ ಸಂಬಂಧಗಳು ನಶಿಸುತ್ತಿದೆ. ಜಾತಿ ವ್ಯವಸ್ಥೆ ಹೆಚ್ಚಳವಾಗುತ್ತಿದ್ದು ಮನುಷ್ಯ ಸಂಬಂಧಗಳಿಗೆ ಬೆಲೆ ಇಲ್ಲದಂತೆ ಹಾಕಿದ್ದು ಭವಿಷ್ಯದಲ್ಲಿ ಆತಂಕದ ದಿನಗಳು ಎದುರು ನೋಡುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ: ರಸ್ತೆ ಅಗಲೀಕರಣ ಶತಃಸಿದ್ಧ | ಮೆಡಿಕಲ್ ಕಾಲೇಜು ಹೊಸ ಡಿಸಿ ಆಫೀಸಿಗೆ | ಸಚಿವ ಸುಧಾಕರ್ ಮಹತ್ವದ ಸಭೆ
ಅಹೋಬಲ ಟಿವಿಎಸ್ ನಿರ್ದೇಶಕರಾದ ಎಸ್.ಪಿ.ಮಂಜುಳ, ಗ್ರಾಹಕರಾದ ಉಮೆಶ್, ಶ್ರೀನಿವಾಸ್, ಸಾಧಿಕ್, ಅಹೋಬಲ ಟಿವಿಎಸ್ ಸಿಬ್ಬಂದಿಗಳಾದ ರವಿ, ರಘು ಮತ್ತು ಸಿಬ್ಬಂದಿ ವರ್ಗ ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
