CHITRADURGA NEWS | 05 MAY 2024
ಚಿತ್ರದುರ್ಗ: ಹಿರಿಯೂರು ನಗರದಲ್ಲಿ ಹಾಡ ಹಗಲೇ ಮನೆಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದ್ದು, ಮನೆಯ ಮಾಲಿಕ ಬಂದ ತಕ್ಷಣ ಕಳ್ಳರು ಪರಾರಿಯಾಗುವ ದೃಶ್ಯ ಸಿ.ಸಿ.ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮನೆಯ ಮಾಲಿಕ ಕಳ್ಳರನ್ನು ಅಟ್ಟಿಸಿಕೊಂಡು ಹೋಗುವ ದೃಶ್ಯ ಕೂಡಾ ಸೆರೆಯಾಗಿದ್ದು, ಸಿನಿಮೀಯಾ ಮಾದರಿಯಲ್ಲಿ ಕಳ್ಳತನ ಯತ್ನ ನಡೆದಿದೆ. ಈ ಕುರಿತ ವೀಡಿಯೋ ಕೂಡಾ ಈ ಸುದ್ದಿಯ ಜೊತೆಗಿದ್ದು, ಚಿತ್ರದುರ್ಗ ನ್ಯೂಸ್ ಯೂಟ್ಯೂಬ್ ಮೂಲಕ ನೋಡಬಹುದಾಗಿದೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ತಂಪಾದ ಮಡಿಕೆ ನೀರಿನ ಅರವಟಿಗೆ ಆರಂಭ | ಎಲ್ಲಿ ಅಂತಿರಾ ಈ ಸುದ್ದಿ ಓದಿ..
ಹಿರಿಯೂರು ನಗರದ ಲಕ್ಷ್ಮಮ್ಮ ಲೇಔಟ್‍ನ ಸಂದೀಪ್ ಜೈನ್ ಎನ್ನುವವರ ಮನೆಯಲ್ಲಿ ಕಳ್ಳತನ ಯತ್ನ ನಡೆದಿದ್ದು, ಮನೆಯ ಮುಂದಿನ ಬಾಗಿಲಿನ ಬೀಗ ಹಾಗೂ ಕಿಟಿಕಿ ಗಾಜು ಹೊಡೆಯಲಾಗಿದೆ.
ಕಳ್ಳನೊಬ್ಬ ಮನೆಯ ಬಾಗಿಲು ಮುರಿದಿದ್ದು, ಇದೇ ವೇಳೆಗೆ ಮನೆ ಮಾಲಿಕ ಸಂದೀಪ್ ಜೈನ್ ಮನೆಗೆ ಬಂದಿದ್ದಾರೆ. ತಕ್ಷಣ ಕಳ್ಳಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಇದನ್ನೂ ಓದಿ: ಮಠದ ಮುಂದಿನ ಕೆರೆಯ ದುರ್ವಾಸನೆಗೆ ಜನ ಹೈರಾಣ | ಸತ್ತು ತೇಲುತ್ತಿವೆ ಸಾವಿರಾರು ಮೀನುಗಳು
ಸಂದೀಪ್ ಕಳ್ಳನನ್ನು ರಸ್ತೆಯಲ್ಲಿ ಅಟ್ಟಿಸಿಕೊಂಡು ಬಂದಿದ್ದು, ತಕ್ಷಣ ಅಲ್ಲಿಗೆ ಬರುವ ಕಾರೊಂದರಲ್ಲಿ ಕಳ್ಳ ಕುಳಿತು ಪರಾರಿ ಆಗುವ ದೃಶ್ಯ ಸೆರೆಯಾಗಿದೆ.
ಈ ಸಂಬಂಧ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
