Connect with us

    ಮಠದ ಮುಂದಿನ ಕೆರೆಯ ದುರ್ವಾಸನೆಗೆ ಜನ ಹೈರಾಣ | ಸತ್ತು ತೇಲುತ್ತಿವೆ ಸಾವಿರಾರು ಮೀನುಗಳು

    ಸತ್ತು ತೇಲುತ್ತಿವೆ ಸಾವಿರಾರು ಮೀನುಗಳು

    ಮುಖ್ಯ ಸುದ್ದಿ

    ಮಠದ ಮುಂದಿನ ಕೆರೆಯ ದುರ್ವಾಸನೆಗೆ ಜನ ಹೈರಾಣ | ಸತ್ತು ತೇಲುತ್ತಿವೆ ಸಾವಿರಾರು ಮೀನುಗಳು

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 4 MAY 2024

    ಚಿತ್ರದುರ್ಗ: ದಾವಣಗೆರೆ, ಹುಬ್ಬಳ್ಳಿ, ಧಾರವಾಡ ಮತ್ತಿತರೆ ಕಡೆಗಳಿಂದ ಚಿತ್ರದುರ್ಗ ಪ್ರವೇಶಿಸುವ ಪ್ರವಾಸಿಗರು, ಸಾರ್ವಜನಿಕರಿಗೆ ಚಿತ್ರದುರ್ಗ ನಗರದ ಪ್ರವೇಶ ದ್ವಾರದಲ್ಲೇ ದುರ್ವಾಸನೆಯ ಸ್ವಾಗತ ಸಿಗುತ್ತಿದೆ.

    ನಗರದ ಮುರುಘಾ ಮಠದ ಮುಂದಿರುವ ಅರಸನ ಕೆರೆಯಲ್ಲಿ ನೀರು ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿದ್ದು, ಕೆರೆಯಲ್ಲಿದ್ದ ಸಾವಿರಾರು ಮೀನುಗಳು ಸತ್ತು ತೇಲುತ್ತಿವೆ. ಇದರಿಂದ ದುರ್ವಾಸನೆ ಸುತ್ತಲೂ ಹರಡಿದ್ದು, ಇಲ್ಲಿನ ನಿವಾಸಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ದಿನವೂ ಮೂಗು ಮುಚ್ಚಿ ಓಡಡುತ್ತಿದ್ದಾರೆ.

    ಇದನ್ನೂ ಓದಿ: ವಿಜೃಂಭಣೆಯ ಹಿರೇಗುಂಟನೂರು ದ್ಯಾಮಲಾಂಭ ದೇವಿ ರಥೋತ್ಸವ | ಸಹಸ್ರಾರು ಭಕ್ತರ ನಡುವೆ ಸಾಗಿದ ದೇವಿಯ ತೇರು

    ಮಠದ ಮುಂದಿನ ಕೆರೆಗೆ ಕೆಲ ಬಡಾವಣೆಗಳ ಚರಂಡಿ ನೀರು ಬಿಡಲಾಗುತ್ತಿದೆ. ವಿಪರೀತ ಬಿಸಿಲು ಸೇರಿದಂತೆ ಬೇರೆ ಬೇರೆ ಕಾರಣಗಳಿಗೆ ನೀರು ವಿಷಕಾರಿಯಾಗಿ ಮೀನುಗಳು ಸತ್ತಿರುವ ಸಾಧ್ಯತೆ ಇದೆ.

    ಇದರಿಂದಾಗಿ ಎಸ್‍ಜೆಎಂಐಟಿ, ಬಸವೇಶ್ವರ ಮೆಡಿಕಲ್ ಕಾಲೇಜು, ಡಿಪ್ಲೊಮಾ ಕಾಲೇಜಿಗೆ ಹೋಗುವ ಸಾವಿರಾರು ವಿದ್ಯಾರ್ಥಿಗಳು ಹೊರಗಿನಿಂದ ನಗರ ಪ್ರವೇಶಿಸುವ ನಾಗರೀಕರು, ಮುರುಘಾ ಮಠಕ್ಕೆ ಬರುವ ಪ್ರವಾಸಿಗರು, ಕೆರೆಯ ಸುತ್ತಮುತ್ತಾ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡಿರುವವರು, ಕೃಷ್ಣ ಭವನ, ಬಿಗ್ ಬಾಸ್ ಹೋಟೆಲ್ ಸೇರಿದಂತೆ ಎಲ್ಲರೂ ದುರ್ವಾಸನೆಗೆ ಹೈರಾಣಾಗಿದ್ದಾರೆ.

    ಇದನ್ನೂ ಓದಿ: ದುರ್ಗದ ಅಧಿದೇವತೆಗಳ ಅದ್ದೂರಿ ಮೆರವಣಿಗೆ | ಏಕನಾಥೇಶ್ವರಿ, ಬರಗೇರಮ್ಮ ದೇವಿಯರ ಕಣ್ತುಂಬಿಕೊಂಡ ಭಕ್ತರು

    ಕಳೆದ ನಾಲ್ಕೈದು ದಿನಗಳಿಂದ ಕೆಟ್ಟ ವಾಸನೆ ಬರುತ್ತಿದೆ. ಈ ಬಗ್ಗೆ ಸ್ಥಳೀಯರು ಮಠದ ಕುರುಬರಹಟ್ಟಿ ಗ್ರಾಮ ಪಂಚಾಯಿತಿ, ನಗರಸಭೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೂ, ತಕ್ಷಣ ಪ್ರತಿಸ್ಪಂದನೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಕೆರೆಯಲ್ಲಿ ಮೃತಪಟ್ಟು ತೇಲುತ್ತಿರುವ ಮೀನುಗಳು ಮಠದ ಎದುರಿನ ಜೆಎಂಐಟಿ ಕಡೆಗೆ ಬಂದು ಶೇಖರಣೆ ಆಗಿವೆ. ಇದರಿಂದ ರಾಷ್ಟ್ರೀಯ ಹೆದ್ದಾರಿಯಿಂದ ನಗರ ಪ್ರವೇಶಿಸುವ ಮಾರ್ಗದ ಉದ್ದಕ್ಕೂ ಹೊಂದಿಕೊಂಡ ಕೆರೆಯ ದಡದಲ್ಲಿ ಸಾವಿರಾರು ಮೀನುಗಳು ಸತ್ತು ಬಿದ್ದಿವೆ. ನಗರಸಭೆ, ಗ್ರಾಮ ಪಂಚಾಯಿತಿ ಹಾಗೂ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಇದನ್ನೂ ಓದಿ: ಲೋಕಸಭೆ ಚುನಾವಣೆ ಬೆನ್ನಲ್ಲೆ ಮತ್ತೊಂದು ಚುನಾವಣೆ | ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ವೇಳಾಪಟ್ಟಿ ಪ್ರಕಟ

    ಮಠದ ಮುಂದಿರುವ ಅರಸನ ಕೆರೆ ಮಠದ ಕುರುಬರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ನಗರಸಭೆ ವ್ಯಾಪ್ತಿಯ ಬಡಾವಣೆಗಳ ಚರಂಡಿ ನೀರು ಈ ಕೆರೆಯನ್ನು ಸೇರುತ್ತಿದೆ. ಈ ಕೆರೆಯಲ್ಲಿ ಮೀನು ಸಾಕಾಣಿಕೆಗೂ ಗ್ರಾಮ ಪಮಚಾಯಿತಿ ಅನುಮತಿ ನೀಡಿದೆ. ಅಸ್ವಚ್ಛ ನೀರು ಹಾಗೂ ಸಾಕಷ್ಟು ದಿನಗಳಿಂದ ಶೇಖರಣೆಯಾಗಿ ಮಲಿನಗೊಂಡಿದೆ. ಇದರೊಟ್ಟಿಗೆ ಬೇಸಿಗೆ ಬಿಸಿಲಿಗೂ ನೀರು ವಿಷಕಾರಿಯಾಗಿ ಮಾರ್ಪಟ್ಟು ದಪ್ಪ ಗಾತ್ರದ ಸಾವಿರಾರು ಮೀನುಗಳು ಸತ್ತಿರುವ ಸಾಧ್ಯತೆಯನ್ನು ಅಧಿಕಾರಿಗಳು ಅಂದಾಜಿಸಿದ್ದಾರೆ.

    ಇದನ್ನೂ ಓದಿ: ಮಾರಿ ಕಣಿವೆ ಶ್ರೀ ಕಣಿವೆ ಮಾರಮ್ಮ ದೇವಿ ಜಾತ್ರೆ | ಮೇ.10 ರಂದು ಬ್ರಹ್ಮ ರಥೋತ್ಸವ

    ಸುಂದರ ಪ್ರವಾಸಿ ತಾಣವಾಗಬೇಕಿದ್ದ ಕೆರೆಯ ದುಸ್ಥಿತಿ:

    ಅರಸನ ಕೆರೆ ಅಭಿವೃದ್ಧಿ ಪಡಿಸಿ ಸುಂದರ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ನಗರಾಭಿವೃದ್ಧಿ ಪ್ರಾಧಿಕಾರಿ ಕಳೆದ ನಾಲ್ಕೈದು ವರ್ಷಗಳಿಂದ ಯೋಜನೆ ರೂಪಿಸುತ್ತಿದೆ. ಇದಕ್ಕಾಗಿ ಈಗಾಗಲೇ ಒಂದೆರಡು ಕೋಟಿ ಅನುದಾನವೂ ಬಂದಿದೆ.

    ಇದನ್ನೂ ಓದಿ: ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

    ಆದರೆ, ಕೆರೆಯಲ್ಲಿ ನೀರು ತುಂಬಿದ್ದ ಕಾರಣಕ್ಕೆ ಎರಡು ವರ್ಷಗಳ ಹಿಂದೆ ಕಾಮಗಾರಿಗೆ ಹಿನ್ನಡೆಯಾಗಿತ್ತು. ಕೆರೆಯ ಸುತ್ತಲೂ ವಾಕಿಂಗ್ ಪಾಥ್, ಬೋಟಿಂಗ್ ಸೇರಿದಂತೆ ಆಕರ್ಷಕವಾಗಿ ನಿರ್ಮಿಸಲು ಈ ಹಿಂದೆ ಹಲವು ಸಭೆಗಳಲ್ಲಿ ಚಿಂತನೆ ನಡೆದಿದ್ದರೂ, ಅಧಿಕಾರಿಗಳು, ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆ ಕಾರಣಕ್ಕೆ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top