
CHITRADURGA NEWS | 01 SEPTEMBER 2024
ಚಿತ್ರದುರ್ಗ: ಮುಖಕ್ಕೆ ಮಂಕಿ ಕ್ಯಾಪ್ ಹಾಕಿ, ಕೈಯಲ್ಲೊಂದು ಸ್‍ಪ್ರೇ ಬಾಟಲಿ ಹಿಡಿದು ಎಟಿಎಂ ನುಗ್ಗಿದ ಕಳ್ಳನೊಬ್ಬ ATM ಮೆಷಿನ್ ಮುರಿದು ಹಣ ದೋಚಲು ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ.
ಕೈಯಲ್ಲಿ ಸ್ಪ್ರೆಯರ್ ಹಿಡಿದು ATM ಪ್ರವೇಶಿಸುವ ಚಾಲಾಕಿ ಮೊದಕು ಸಿ.ಸಿ.ಕ್ಯಾಮರಾಗಳಿಗೆ ಸ್ಪ್ರೆ ಮಾಡಿ ಮಸುಕಾಗುವಂತೆ ಮಾಡುತ್ತಾನೆ.

ಇದನ್ನೂ ಓದಿ: ಸಂಸದ ಗೋವಿಂದ ಕಾರಜೋಳ ಅವರ ಹೊಸ ಕಚೇರಿ ಹೇಗಿದೆ ಗೊತ್ತಾ
ಆನಂತರ ರಾಡ್ ಸಹಾಯದಿಂದ ATM ಯಂತ್ರದ ಸೇಪ್ಟಿ ಡೋರ್ ಮುರಿಯಲು ಯತ್ನಿಸಿದ್ದಾನೆ. ಆದರೆ, ಕಳ್ಳತನ ವಿಫಲವಾಗಿ ಅಲ್ಲಿಂದ ಕಾಲ್ಕಿತ್ತಿರುವ ದೃಶ್ಯಗಳು ಸೆರೆಯಾಗಿವೆ.
ಚಿತ್ರದುರ್ಗ ನಗರದ ಸರಸ್ವತಿ ಪುರಂ ಕೆನರಾ ಬ್ಯಾಂಕ್ ಶಾಖೆಯ ATM ನಲ್ಲಿ ಈ ಕೃತ್ಯ ನಡೆದಿದ್ದು, ಸೆಪ್ಟೆಂಬರ್ 1 ಬೆಳಿಗ್ಗೆ 6 ಗಂಟೆಗೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಸೇನೆಯಿಂದ ನಿವೃತ್ತಿ ಹೊಂದಿ ಬರುತ್ತಿರುವ ಯೋಧನ ಸ್ವಾಗತಕ್ಕೆ ಅದ್ದೂರಿ ಸಿದ್ಧತೆ
ಚಾಲಾಕಿ ಕಳ್ಳನ ಚಲನವಲನ ಅಅಖಿಗಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮುಖಕ್ಕೆ ಮಂಕಿ ಕ್ಯಾಪ್, ಕೈನಲ್ಲಿ ಗ್ಲೌಸ್ ಧರಿಸಿ ಂಖಿಒ ಒಡೆಯಲು ಎಂಟ್ರಿಯಾಗಿದ್ದ ದೃಶ್ಯ ಪೊಲೀಸರಿಗೆ ಲಭ್ಯವಾಗಿವೆ.
ಘಟನೆ ಕುರಿತಯ ಬ್ಯಾಂಕ್ ಮ್ಯಾನೇಜರ್ ಮೋಹನ್ ರಾವ್ ದೂರು ದಾಖಲಿಸಿದ್ದು, ಸ್ಥಳಕ್ಕೆ ಚಿತ್ರದುರ್ಗದ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಗ್ರಾಮ ಸಹಾಯಕರ ಹುದ್ದೆ | ಅರ್ಜಿ ಸಲ್ಲಿಕೆ ಅವಧಿ ಸೆ.9ರವರೆಗೆ ವಿಸ್ತರಣೆ


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
