
CHITRADURGA NEWS | 08 MAY 2024
ಹೊಳಲ್ಕೆರೆ: ಗುಂಡಿಗೆ ಇಳಿದಿದ್ದ ಟ್ರ್ಯಾಕ್ಟರ್ ಸಮೀಪಕ್ಕೆ ಹೋದ ವ್ಯಕ್ತಿಯ ತಲೆ, ಎದೆ ಭಾಗಕ್ಕೆ ಟ್ರ್ಯಾಕ್ಟರ್ ಮುಂದಿನ ಟೈಯರ್ ತಾಗಿ ಮೃತಪಟ್ಟಿದ್ದಾರೆ.
ಹೊಳಲ್ಕೆರೆ ತಾಲ್ಲೂಕಿನ ಗಂಗಸಮುದ್ರ ಗ್ರಾಮದ ನಿವಾಸಿ 60 ವರ್ಷದ ಕುಬೇರಪ್ಪ ಮೃತ ವ್ಯಕ್ತಿ.
ಇದನ್ನೂ ಓದಿ: ಹಿರೇಗುಂಟನೂರಿನಲ್ಲಿ ಗಾಳಿಯ ಅವಾಂತರ | ಧರೆಗುರುಳಿದ ಮರ, ವಿದ್ಯುತ್ ಕಂಬಗಳು
ಬುಧವಾರ ಬೆಳಿಗ್ಗೆ 7.30ರ ಸಮಯದಲ್ಲಿ ಮನೆಯಿಂದ ತೋಟಕ್ಕೆ ಹೋಗಿ ಬರುವುದಾಗಿ ತಿಳಿಸಿ ನಡೆದುಕೊಂಡು ಹೋಗುತ್ತಿದ್ದಾಗ ಅದೇ ಗ್ರಾಮದ ಟ್ರ್ಯಾಕ್ಟರ್ ರಾಮಗಿರಿ ಕಾವಲು ಕಡೆಯಿಂದ ವೇಗವಾಗಿ ಬಂದು ರಸ್ತೆ ಮಗ್ಗುಲಿನ ಗುಂಡಿಗೆ ಇಳಿದಿದೆ. ಗುಂಡಿಯಲ್ಲಿ ಟ್ರ್ಯಾಕ್ಟರ್ನ ಬಟನ್ ಟೈಯರ್ ಸಿಲುಕಿಕೊಂಡಿದೆ.
ಇದೇ ವೇಳೆ ಟ್ರ್ಯಾಕ್ಟರ್ ಸಮೀಪಕ್ಕೆ ಕುಬೇರಪ್ಪ ತೆರಳಿದ್ದು, ಚಾಲಕನ ನಿರ್ಲಕ್ಷ್ಯತನದಿಂದ ಇಂಜಿನ್ ಮೇಲಕ್ಕೆ ಹಾರಿದ್ದು, ಕುಬೇರಪ್ಪ ಅವರ ಎದೆಗೆ ಬಲವಾದ ಪೆಟ್ಟು ಬಿದ್ದಿವೆ. ಜೊತೆಗೆ ತರಚಿದ ಗಾಯಗಳಾಗಿವೆ.
ಇದನ್ನೂ ಓದಿ: ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶಕ್ಕೆ ಮತ್ತೊಮ್ಮೆ ಹರಿಯಲಿದೆ ನೀರು | ಡಿಸಿ ನೇತೃತ್ವದ ಸಭೆಯಲ್ಲಿ ತೀರ್ಮಾನ
ಗಾಯಾಳು ಕುಬೇರಪ್ಪನನ್ನು ಹೊಳಲ್ಕೆರೆ ಆಸ್ಪತ್ರೆಗೆ ಕರೆತಂದಿದ್ದು, ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಹೊಳಲ್ಕೆರೆ police ಠಾಣೆಯಲ್ಲಿ ಮೊಕದ್ದಮೆ ನಂ :166/2024 ಕಲಂ 279, 304(ಎ) ರ ಐಪಿಸಿ ಅಡಿಯಲ್ಲಿ ದೂರು ದಾಖಲಾಗಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
