
CHITRADURGA NEWS | 09 MAY 2024
ಹೊಸದುರ್ಗ: ಖಾಸಗಿ ಶಾಲೆ ಶಿಕ್ಷಕಿ ನೇಣು ಬಿಗಿದುಕೊಂಡು ಮೃತಪಟ್ಟಿರುವ ಘಟನೆ ಹೊಸದುರ್ಗ ಪಟ್ಟಣದ ಗೊರವಿನಕಲ್ಲು ಗ್ರಾಮದಲ್ಲಿ ಬುಧವಾರ ನಡೆದಿದೆ.
ಗೊರವಿನಕಲ್ಲು ಗ್ರಾಮದ ಪ್ರಭುಕುಮಾರ ಎಂಬುವವರ ಪತ್ನಿ ಗೀತಶ್ರೀ(32) ಮೃತ ಗೃಹಿಣಿ.
ತುಮಕೂರು ಮೂಲದ ಗೀತಶ್ರೀ ಅವರನ್ನು 2016ರಲ್ಲಿ ಹೊಸದುರ್ಗ ತಾಲೂಕು ಗೊರವಿನಕಲ್ಲು ಗ್ರಾಮದ ಪ್ರಭುಕುಮಾರ ಎಂಬುವವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು.
ಇದನ್ನೂ ಓದಿ: ಮಹಾದೇವಪುರ ಬಳಿ ಭರ್ಜರಿ ಮಳೆ | ನೀರು ಹರಿಯುವ ವೀಡಿಯೋ ವೈರಲ್
ಮದುವೆ ನಂತರ ಹೊಸದುರ್ಗ ಪಟ್ಟಣದಲ್ಲಿ ಗೀತಶ್ರೀ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದರು. ಈ ದಂಪತಿಗೆ ಆರು ವರ್ಷದ ಹೆಣ್ಣು ಮಗುವಿದೆ.
ಗೀತಶ್ರೀ ರೀಲ್ಸ್ ಮೂಲಕ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದ್ದರು ಎನ್ನಲಾಗಿದೆ.
ಪತಿಯೊಂದಿಗೆ ಅನ್ಯೋನ್ಯವಾಗಿದ್ದಂತೆ ಕಾಣುತ್ತಿದ್ದ ಈ ಮಹಿಳೆ ಬುಧವಾರ ಬೆಳಗ್ಗೆ ಮೃತಪಟ್ಟಿರುವುದು ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: ಹಿರೇಗುಂಟನೂರಿನಲ್ಲಿ ಗಾಳಿಯ ಅವಾಂತರ | ಧರೆಗುರುಳಿದ ಮರ, ವಿದ್ಯುತ್ ಕಂಬಗಳು
ಗೀತಶ್ರೀ ಪತಿ ಪ್ರಭುಕುಮಾರ ಕೆಲಸಕ್ಕೆ ಹೋಗುತ್ತಿರಲಿಲ್ಲ. ಪತ್ನಿ ದುಡಿಯುತ್ತಿದ್ದ ಹಣದಲ್ಲೇ ಜೀವನ ನಡೆಸುತ್ತಿದ್ದ. ಅತ್ತೆ ಮಾವ ಕೂಡಾ ಹಣ ಕೇಳುತ್ತಿದ್ದರು ಎಂದು ಆರೋಪಿಸಿ ಮೃತ ಮಹಿಳೆಯ ತಂದೆ ಮಲ್ಲಿಕಾರ್ಜುನ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
