CHITRADURGA NEWS | 27 JULY 2026
ಚಿತ್ರದುರ್ಗ: ಮಹಾ ಭಾರತದ ಕುರುಕುಲ ಪಿತಾಮಹ ಭೀಷ್ಮನ ಹುಟ್ಟು, ಶಿಕ್ಷಣ, ಪ್ರತಿಜ್ಞೆ, ಸಂಘರ್ಷ, ಕರ್ತವ್ಯ ಪಾಲನೆ, ಸಂಯಮ, ವೀರತ್ವ ದರ್ಶನ ಅನುಭವ, ದೈವಭಕ್ತಿ ಮತ್ತು ಸಾವು ಅತ್ಯಂತ ಕುತೂಹಲಕಾರಿ ಎಂದು ಸರ್ಕಾರಿ ಕಲಾ ಕಾಲೇಜು ಪ್ರಾಚಾರ್ಯರಾದ ತಾರಿಣಿ ಶುಭದಾಯಿನಿ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಹಿರಿಯೂರಿನಲ್ಲಿ ಡಿ.ಸುಧಾಕರ್ ನುಡಿ ನಮನ | ಸಿಎಂ ಡಿಕೆಶಿ, ಸಿದ್ದರಾಮಯ್ಯ ಸೇರಿ ಗಣ್ಯರು ಭಾಗೀ
ನಗರದ ಜೆಸಿಆರ್ ಬಡಾವಣೆಯಲ್ಲಿ ಗಮಕ ಕಲಾಭಿಮಾನಿಗಳ ಸಂಘದಿಂದ ಹಮ್ಮಿಕೊಂಡಿದ್ದ ಮಾಸಿಕ ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭೀಷ್ಮನ ಸಾಂಖ್ಯವು ಶಾಸ್ತ್ರಾಧಾರಿತ ಮತ್ತು ಯೋಗವು ಅನುಭವಾಧಾರಿತ ಎಂಬ ಮಾತು ಬಹುಜನ ಮಾನ್ಯ. ಅವನ ಶರಶಯ್ಯೆ ಹಾಗೂ ಇಚ್ಛಾಮರಣ ಹಲವು ಚಿಂತನೆಗಳಿಗೆ ಹಚ್ಚುವಂತಹದು ಎಂದು ವಿಶ್ಲೇಷಿಸಿದರು.
ಗಮಕಿ ವಿದುಷಿ ಮೀನಾಕ್ಷಿ ಭಟ್ ಅವರು ಕುಮಾರವ್ಯಾಸ ಭಾರತದ ಭೀಷ್ಮನ ಜೀವನದ ವಿಶೇಷಣಗಳನ್ನು ಕುರಿತ ಪದ್ಯಗಳನ್ನು ಗಮಕ ಶೈಲಿಯಲ್ಲಿ ವಾಚನ ಮಾಡಿದರು.
ಇದನ್ನೂ ಓದಿ: ವಿದ್ಯಾರ್ಥಿಗಳ ಸುಧೀರ್ಘ ಹೋರಾಟಕ್ಕೆ ಸಂದ ಜಯ | ಎಎಪಿ ಜಿಲ್ಲಾಧ್ಯಕ್ಷ ಜಗದೀಶ್
ಗಮಕ ಕಲಾಭಿಮಾನಿಗಳ ಸಂಘದ ಅಧ್ಯಕ್ಷರಾದ ಕೆ.ಆರ್.ರಮಾದೇವಿ ವೆಂಕಣ್ಣಾಚಾರ್ ಅಧ್ಯಕ್ಷತೆ ವಹಿಸಿದ್ದರು. ಕುಮಾರಿ ಸುರಭಿ ಪ್ರಾರ್ಥಿಸಿದರು. ಮೀನಾಕ್ಷಿ ಭಟ್ ಸ್ವಾಗತಿಸಿದರು. ವ್ಯಾಖ್ಯಾನಕಾರ ಅನಂತಕೃಷ್ಣ ವಂದಿಸಿದರು. ಬಿ.ಎಲ್.ಉಮಾ ನಿರ್ವಹಿಸಿದರು. ಸಭೆಯಲ್ಲಿ ಚಿದಾನಂದಪ್ಪ, ಪ್ರೊ.ಹರೀಶ್, ನಾಗರಾಜ್, ಲಕ್ಷ್ಮಿ ಇತರರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

