CHITRADURGA NEWS | 28 JULY 2026
ಚಿತ್ರದುರ್ಗ: ಸಂಗೀತ ಮಾನಸಿಕ ನೆಮ್ಮದಿ ನೀಡುವುದರ ಜೊತೆಗೆ ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುತ್ತದೆಂದು ವಿಮುಕ್ತಿ ವಿದ್ಯಾಸಂಸ್ಥೆಯ ಆರ್.ವಿಶ್ವಸಾಗರ್ ಹೇಳಿದರು.
ಇದನ್ನೂ ಓದಿ: ಮಹಾಭಾರತದ ಭೀಷ್ಮನ ವ್ಯಕ್ತಿತ್ವ ಅತ್ಯಂತ ಕುತೂಹಲಕಾರಿ | ತಾರಿಣಿ ಶುಭದಾಯಿನಿ
ಮಠದ ಕುರುಬರಹಟ್ಟಿಯಲ್ಲಿರುವ ಬಸವೇಶ್ವರ ವಿದ್ಯಾಸಂಸ್ಥೆಯಲ್ಲಿ ವಿಶ್ವ ಸಂಗೀತ ದಿನಾಚರಣೆ ಅಂಗವಾಗಿ ಆಯಿತೋಳಿನ ಗಾನಯೋಗಿ ಸಂಗೀತ ಸಾಂಸ್ಕøತಿಕ ಕಲಾ ಸಂಘದ ವತಿಯಿಂದ ಭಾನುವಾರ ನಡೆದ ಸಂಗೀತೋತ್ಸವ ಉದ್ಘಾಟಿಸಿ ಮಾತನಾಡಿದರು.
ಇಡೀ ಜಗತ್ತಿನಲ್ಲಿ ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ಏಕೈಕ ಭಾಷೆಯೆಂದರೆ ಸಂಗೀತ, ಸಂಗೀತಕ್ಕೆ ತಲೆದೂಗದವರಲ್ಲಿ ಎಂದು ತಿಳಿಸಿದರು.
ಬಸವೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷೆ ಪ್ರಭಾವತಿ ಶಂಕರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಗೀತ ನಮ್ಮ ನೆಲದ ಸಂಸ್ಕøತಿಯ ಪ್ರತೀಕವಾಗಿದ್ದು, ಶಾಸ್ತ್ರೀಯ ಸಂಗೀತ, ವಚನ ಸಂಗೀತ, ಜಾನಪದ, ತತ್ವಪದ, ರಂಗಗೀತೆಗಳು ಗೀಗಿ ಪದ, ಲಾವಣಿಗಳು ಸೇರಿದಂತೆ ಮುಂತಾದ ಕಲಾ ಪ್ರಕಾರಗಳನ್ನು ಆಸ್ವಾದಿಸಿ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸಬೇಕೆಂದು ಕರೆ ನೀಡಿದರು.
ಕಲಾ ಸಂಘದ ಅಧ್ಯಕ್ಷ ಆಯಿತೋಳು ಚಂದ್ರಪ್ಪ ಮಾತನಾಡಿ ಸಂಗೀತವು ಭಾರತೀಯ ಪರಂಪರೆಯ ಹೆಮ್ಮೆ. ಪ್ರತಿಯೊಬ್ಬರು ಸಂಗೀತ ಕಲೆಯನ್ನು ಗೌರವಿಸುವ ಗುಣ ಹೊಂದಬೇಕು. ಇಂದಿನ ಆಧುನಿಕ ಜಗತ್ತಿನಲ್ಲಿ ಯುವ ಜನಾಂಗ ಪಾಶ್ಚಾತ್ಯ ಸಂಸ್ಕøತಿಯ ಕಡೆ ಮಾರು ಹೋಗುತ್ತಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ವಿದ್ಯಾರ್ಥಿಗಳ ಸುಧೀರ್ಘ ಹೋರಾಟಕ್ಕೆ ಸಂದ ಜಯ | ಎಎಪಿ ಜಿಲ್ಲಾಧ್ಯಕ್ಷ ಜಗದೀಶ್
ಬಸವೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ವಿ.ಕೆ.ಶಂಕರಪ್ಪ, ಗಾನಯೋಗಿ ಕಲಾ ಸಂಘದ ಕಾರ್ಯದರ್ಶಿ ಜಗದೀಶ್ ಆಯಿತೋಳು, ಗಾಯಕರುಗಳಾದ ಅಂಜಿನಪ್ಪ, ಹೇಮಂತ್ರಾಜ್, ಅಮಕುಂದಿ ಕೆ.ಗಂಗಾಧರ್, ಗಾಯಕಿ ಭಾಗ್ಯಮ್ಮ ಕೆ.ಹೆಚ್. ನಿಲಯ ಪಾಲಕ ಮಹಾದೇವಪ್ಪ, ಶಾಂತಮ್ಮ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

