
CHITRADURGA NEWS | 11 JANUARY 2026
ಹೊಸದುರ್ಗ: ನಮ್ಮ ಮಠವನ್ನು ಜಾತ್ಯತೀತ ಮತ್ತು ಪಕ್ಷಾತೀತವಾಗಿ ಬೆಳೆಸಲು ಇಚ್ಚಿಸಿದ್ದು ಯಾವುದೇ ರಾಜಕೀಯ ವ್ಯಕ್ತಿಗಳ ಪರವು ಇಲ್ಲ ಯಾರ ವಿರುದ್ಧವು ಇಲ್ಲ ಎಂದು ಕುಂಚಗಿರಿ ಜಗದ್ಗುರು ಶ್ರೀ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಮತ್ತೊಂದು ಕಾರು ಅಪಘಾತ ಇಬ್ಬರು ಸ್ಥಳದಲ್ಲೇ ಸಾವು | ಕೊಲ್ಲಾಪುರ Dysp ಪ್ರಯಾಣಿಸುತ್ತಿದ್ದ ಕಾರು

ಹೊಸದುರ್ಗದ ಕುಂಚಿಟಿಗ ಮಠದಲ್ಲಿ ನಡೆದ ಸುಜ್ಞಾನ ಸಂಗಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ,
ಪ್ರಜಾಪ್ರಭುತ್ವದ ಆಶಯದಂತೆ ಮತದಾರರೇ ತೀರ್ಮಾನವೇ ಅಂತಿಮ. ನಮ್ಮ ಹೆಸರನ್ನು ಯಾರಾದರೂ ದುರುಪಯೋಗಪಡಿಸಿಕೊಂಡರೆ ತಕ್ಷಣ ಶ್ರೀಮಠಕ್ಕೆ ತಿಳಿಸಿ. ಮಠಗಳು ಧಾರ್ಮಿಕ ಮತ್ತು ಶೈಕ್ಷಣಿಕ ಸಾಂಸ್ಕೃತಿಕ ಸೇವಾ ಕೇಂದ್ರಗಳಾಗಬೇಕು ಎಂಬುದು ನಮ್ಮ ಆಶಯ ಇದಕ್ಕೆ ಭಕ್ತಾದಿಗಳು ಸಹಕರಿಸಬೇಕು ಮತ್ತು ಅನುಷ್ಠಾನಗೊಳಿಸಬೇಕು. ನಮ್ಮನ್ನು ಮತ್ತು ಮಠವನ್ನು ಯಾವುದೇ ಕಾರಣಕ್ಕೂ ಜಾತಿಗೆ ಪಕ್ಷಕ್ಕೆ ಗುರುತಿಸುವ ಅವಕಾಶ ಕೊಡಬೇಡಿ ಎಂದರು.
ಪ್ರಸ್ತುತ ಕಾಲಮಾನದಲ್ಲಿ ಸಾಂಸಾರಿಕ ವ್ಯವಹಾರಿಕ ಅಸಮತೋಲನಕ್ಕೆ ಒಳಗಾಗಿ ಮಾನವ ಜರ್ಜರಿತನಾಗಿದ್ದಾನೆ ಅವರಿಗೆ ಶಾಂತಿಯ ಹಾಗೂ ಸೂಕ್ತ ಗುರುವಿನ ಮಾರ್ಗದರ್ಶಕರ ಅವಶ್ಯಕತೆ ಇದೆ ಇದನ್ನು ಮನಗಂಡು ಶ್ರೀಮಠದಲ್ಲಿ ಪಂಚಾಯಿತಿ ಮಾಡುವ ಮೂಲಕ ಅನೇಕ ಸಮಸ್ಯೆಗಳನ್ನು ಬಗೆಹರಿಸುತಿದ್ದೇವೆ.
ಯಾವುದೇ ಕಾರಣಕ್ಕೆ ಭಕ್ತಾದಿಗಳು ಉದ್ವೇಗಕ್ಕೆ ಒಳಗಾಗದೆ ಸಮಾಧಾನದಿಂದ ಜೀವನವನ್ನು ನಡೆಸಬೇಕೆಂದು ಬಯಸುತ್ತೇವೆ. ಧ್ಯಾನ, ಪೂಜೆ, ಅಧ್ಯಯನ, ಆಧ್ಯಾತ್ಮಿಕ ಅಂತರ್ಮುಖಿಗಳಾದರೆ ಯಾವುದೇ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಮನೋಬಲ ವೃದ್ಧಿಸುತ್ತದೆ ಹಾಗಾಗಿ ಜೀವನದಲ್ಲಿ ನಡೆಯುವ ತಲ್ಲಣಗಳಿಂದ ಹೊರಬರಲು ಗುರುವಿನ ಮಾರ್ಗದರ್ಶನ, ಮೌನ, ಧ್ಯಾನ, ಭಜನೆ, ಸತ್ಸಂಗಗಳು ಅತ್ಯಂತ ಪರಿಣಾಮಕಾರಿ ಎಂಬುದನ್ನು ಮನಗಣಬೇಕು.
ಇದನ್ನೂ ಓದಿ: ಹಿರಿಯೂರು ಬಳಿ ಭೀಕರ ಅಪಘಾತ | ನಾಲ್ವರು ಯುವಕರು ಮೃತ | ಕಾರು – ಲಾರಿ ನಡುವೆ ಡಿಕ್ಕಿ
ಖಿನ್ನತೆ ಎಂಬುದು ಯುವ ಪೀಳಿಗೆಯ ಸರ್ವೇಸಾಮಾನ್ಯ ಕಾಯಿಲೆಯಾಗಿದೆ, ಹಾಗಾಗಿ ಯುವಕರು ಕೇವಲ ಮೋಜು ಮಸ್ತಿಗೆ ಒಳಗಾಗದೆ ಅಧ್ಯಯನ ಸೂಕ್ತ ಮಾರ್ಗದರ್ಶನ ಪಡೆಯುವ ಮೂಲಕ ಬದುಕಿನಲ್ಲಿ ಬೆಳವಣಿಗೆ ಮತ್ತು ಬೆಳಕನ್ನು ಕಾಣಬೇಕು. ಇವತ್ತಿನ ಯುವ ಜನತೆಗೆ ತಂದೆ ತಾಯಿಗಳು ಬುದ್ಧಿವಾದ ಹೇಳುವುದು ಅಪರಾಧವಾಗಿ ಭಾವಿಸುವ ಯುವಕರ ಸಂಖ್ಯೆಯೇ ಹೆಚ್ಚಾಗಿದೆ.
ಇಂದಿನ ಯುವ ಪೀಳಿಗೆ ಅರ್ಥೈಸಿಕೊಳ್ಳಬೇಕಾಗಿರುವುದು ತಂದೆ ತಾಯಿಗಳೆ ಮೊದಲ ದೇವರು ಎಂಬ ವಾಸ್ತವ್ಯ ಸತ್ಯವನ್ನ ಅರಿತು ಅವರ ನೆರಳಲ್ಲಿ ಅವರ ಮಾರ್ಗದರ್ಶನದಲ್ಲಿ ಅವರಿಗೆ ನೋವಾಗದಂತೆ ಜೀವನ ನಡೆಸಬೇಕಾಗಿರುವುದು ಮಕ್ಕಳ ಕರ್ತವ್ಯ ಮತ್ತು ಜವಾಬ್ದಾರಿ ಎಂದು ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಶಿಕ್ಷಕ ಪ್ರಕಾಶ್ ಮಾತನಾಡಿ, ಪರಮಪೂಜ್ಯರ ಪೀಠಕ್ಕೆ ಬಂದಾಗಿನಿಂದ ಅನೇಕ ರೀತಿಯ ಸವಾಲುಗಳನ್ನು ಮೆಟ್ಟಿನಿಂತು ಕ್ರಾಂತಿವೀರ ಶ್ರೀಗಳಾಗಿ, ಆದರ್ಶ ಗುರುಗಳಾಗಿ, ಆದರ್ಶ ರೈತರಾಗಿ, ತಮ್ಮ ಸರಳ ಸಜ್ಜನಿಕೆಯ ನಡಬಳಕೆಯ ಮೂಲಕ ಇತರರಿಗೆ ಮಾರ್ಗದರ್ಶಿಗಳಾಗಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ಮೂಲದ ಪ್ರೊ.ಬಿ.ಕೆ.ರವಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಯಾಗಿ ಅಧಿಕಾರ ಸ್ವೀಕಾರ
ಸಮಾಜಕ್ಕೆ ತಮ್ಮ ದುಡಿಮೆಯ ಮೂಲಕ ಹತ್ತಾರು ಕಟ್ಟಡಗಳನ್ನು ರಾಜ್ಯಾದ್ಯಂತ ಆಸ್ತಿಗಳನ್ನು ಮಾಡುವ ಮೂಲಕ ಸಮಾಜದ ಕಟ್ಟ ಕಡೆಯ ಬಡವರಿಗೆ ಶಿಕ್ಷಣ ಕೊಡುವ ಹಾಗೂ ರೈತರಿಗೆ ಆರ್ಥಿಕ ಸಬಲೀಕರಣ ಮಾಡುವ ಸಂಕಲ್ಪವನ್ನು ತೊಟ್ಟಿದ್ದಾರೆ.ಅವರ ಎಲ್ಲ ಕಾರ್ಯಗಳ ಹಿಂದೆ ನಾನು ನಿಲ್ಲುತ್ತೇನೆ ಮತ್ತು ಆರ್ಥಿಕ ಸಹಾಯ ಮಾಡುತ್ತೇನೆ ಎಂದು ತಿಳಿಸಿದರು.
ಉಪನ್ಯಾಸ ನೀಡಿದ ನಾಗಭೂಷಣ್, ನಡೆಯುವ ನೆಲವೊಂದೇ, ಕುಡಿಯುವ ಜಲ ಒಂದೇ, ಆದರೆ ನೆಲ ಒಂದೆಯಾದರೂ ಭಿನ್ನ-ಭಿನ್ನವಾದ ಮರಗಳನ್ನು, ಭಿನ್ನ-ಭಿನ್ನವಾದ ಹಣ್ಣುಗಳನ್ನು ಭೂಮಿ ನೀಡುತ್ತದೆ. ವಿಜ್ಞಾನ ಯಾವಾಗಲೂ ಸಂದೇಹ ಪಡುತ್ತದೆ. ಸುಜ್ಞಾನ ಸಂದೇಶ ಕೊಡುತ್ತದೆ. ವಿಜ್ಞಾನ ಮನೆಯನ್ನು ಬೆಳಗಿಸುತ್ತದೆ. ಸುಜ್ಞಾನ ಮನಸ್ಸನ್ನು ಪ್ರಕಾಶಿಸುತ್ತದೆ.
ಶ್ರೀಗಳು ಕೇವಲ ಕುಂಚಗಿರಿಯಲ್ಲಿ ಮಠವನ್ನು ಕಟ್ಟಿಲ್ಲ ನಿಮ್ಮ ಮನಸ್ಸಿನಲ್ಲಿ ಮಠವನ್ನು ಕಟ್ಟುವ ಕಾಯಕ ಮಾಡಿದ್ದಾರೆ. ನಾವು ಸತ್ತರೆ ಗುದ್ದಿಗೆ ಹಾಕುತ್ತಾರೆ. ಶ್ರೀಗಳು ಸತ್ತರೆ ಗದ್ದುಗೆಯಾಗುತ್ತಾರೆ. ವಿಜ್ಞಾನ ಕೈಯನ್ನು ಮುರಿದರೆ ಜೋಡಿಸುವುದನ್ನು ಕಲಿಸುತ್ತದೆ ಆದರೆ ಕೈಯನ್ನು ಜೋಡಿಸಿದವರಿಗೆ ಕೃತಜ್ಞತೆ ಹೇಳಿಸುವುದೇ ಸುಜ್ಞಾನ.
ಕುಮಾರಸ್ವಾಮಿ, ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ಅಶೋಕ ಮಾತನಾಡಿದರು. ಸನ್ಮಾನ ಸ್ವೀಕರಿಸಿ ನಿವೃತ್ತ ಶಿಕ್ಷಕರಾದ ವಿಜಯಲಕ್ಷ್ಮಿ, ಸಂಕಲ್ಪ ಸದಾಶಿವ ಮಾತನಾಡಿದರು.
ಇದನ್ನೂ ಓದಿ: ನಾಡೋಜ ಬರಗೂರು ರಾಮಚಂದ್ರಪ್ಪನವರ ಸೌಹಾರ್ದ ಭಾರತ ಕೃತಿಯ ಜನಾರ್ಪಣೆ
ಸಮಾರಂಭದಲ್ಲಿ ಸಂಗಮೇಶ್ವರ ನಿಧಿ ಸಂಗ್ರಹಿಸುವ ಸಂಗಮೇಶ್ವರ ಯುವ ವೇದಿಕೆಯನ್ನು ಉದ್ಘಾಟಿಸಲಾಯಿತು. ಭಜನಾ ಸೇವೆಯನ್ನು ಕುಂಚಶ್ರೀ ಸಂಗಮೇಶ್ವರ ಮಹಿಳಾ ಸಂಘದವರು ನೆರವೇರಿಸಿದರು.
ಸಮಾರಂಭದಲ್ಲಿ ಶ್ರೀ ಸಂಗಮೇಶ್ವರ ಸಮುದಾಯ ಭವನ ಸಮಿತಿ, ಶ್ರೀ ಸಂಗಮೇಶ್ವರರ ನೌಕರರ ಸಂಘ, ಶ್ರೀ ಸಂಗಮೇಶ್ವರ ಯುವ ವೇದಿಕೆ, ಕುಂಚಶ್ರೀ ಸಂಗಮೇಶ್ವರ ಮಹಿಳಾ ಸಂಘ, ಶಾಂತವೀರಶ್ರೀ ಸೌಹಾರ್ದ ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳು ಭಕ್ತರು ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
