
CHITRADURGA NEWS | 10 JUNE 2024
ಚಿತ್ರದುರ್ಗ: ಕೆರೆಯ ಏರಿ ಮೇಲೆ ಲಾರಿಯೊಂದು ಪಲ್ಟಿಯಾಗಿ ಮದ್ಯದ ಬಾಟಲ್‌ಗಳು ಚೆಲ್ಲಾಪಿಲ್ಲಿಯಾದ ಘಟನೆ ಹೊಳಲ್ಕೆರೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಶಿವನ ಕೆರೆ ಏರಿಯ ಮೇಲೆ ಲಾರಿ ಪಲ್ಟಿಯಾಗಿದ್ದು, ₹33 ಲಕ್ಷ ಮೌಲ್ಯದ ಮದ್ಯ ನಾಶವಾಗಿದೆ. ಮೈಸೂರಿನ ಬನ್ನೂರು ಸಮೀಪದ ಬಿಯರ್ ಫ್ಯಾಕ್ಟರಿಯಿಂದ 1,500 ಬಾಕ್ಸ್ ಬಿಯರ್ ಬಾಟಲ್‌ಗಳನ್ನು ಲಾರಿಯಲ್ಲಿ ತುಂಬಿಕೊಂಡು ಹುಬ್ಬಳ್ಳಿಗೆ ಸಾಗಿಸಲಾಗುತ್ತಿತ್ತು.
ಕ್ಲಿಕ್ ಮಾಡಿ ಓದಿ: ಮೂರನೇ ಅವಧಿಗೆ ನರೇಂದ್ರ ಮೋದಿ ಪ್ರಮಾಣವಚನ | ಕೋಟೆನಾಡಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ
ಭಾನುವಾರ ನಸುಕಿನ 3.30ರಲ್ಲಿ ಕೆರೆ ಏರಿಯ ಮೇಲೆ ಕಾಡುಪ್ರಾಣಿಯೊಂದು ಅಡ್ಡ ಬಂದಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ.
ಕ್ಲಿಕ್ ಮಾಡಿ ಓದಿ: ಹತ್ತಿ ಬೆಳೆಗಾರರ ಜಾಗೃತಿ ಸಮಾವೇಶ | ಬೆಳೆಯ ಬಗ್ಗೆ ವೈಜ್ಞಾನಿಕ ಮಾಹಿತಿ
ಲಾರಿ ಪಲ್ಟಿಯಾದ ರಭಸಕ್ಕೆ ಮದ್ಯದ ಬಾಕ್ಸ್‌ಗಳು ಕೆಳಗೆ ಬಿದ್ದಿದ್ದು, ಶೇ 70ರಷ್ಟು ಬಾಟಲ್‌ಗಳು ಒಡೆದು ಹೋಗಿವೆ. ವಿಷಯ ತಿಳಿದ ಪೊಲೀಸರು ಲಾರಿ ಪಲ್ಟಿಯಾಗಿದ್ದ ರಸ್ತೆಯಲ್ಲಿ ವಾಹನ ಸಂಚಾರ ತಡೆದ ಜನರನ್ನು ಹತ್ತಿರಕ್ಕೆ ಬಿಡಲಿಲ್ಲ. ಇದರಿಂದ ಶೇ 30ರಷ್ಟು ಮದ್ಯ ಉಳಿದಿದೆ. ಲಾರಿ ಚಾಲಕ ಅರ್ಫತ್‌ಗೆ ಸಣ್ಣ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
