CHITRADURGA NEWS | 09 MAY 2025
ಚಿತ್ರದುರ್ಗ: ಆರೋಪಿಯೊಬ್ಬ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಆತನ ಮೇಲೆ ಫೈರಿಂಗ್ ಮಾಡಿರುವ ಘಟನೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಕರಣವೊಂದರಲ್ಲಿ ಬೇಕಾಗಿದ್ದ ಆರೋಪಿಯನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆಗೆ ಯತ್ನಿಸಿದ ಆರೋಪಿಯ ಕಾಲಿಗೆ ಗುಂಡು ಹಾರಿಸಿರುವ ಪ್ರಕರಣ ಚಿತ್ರದುರ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ: ಕುರಿ ಮೈ ತೊಳೆಯಲು ಹಳ್ಳಕ್ಕೆ ಇಳಿದಿದ್ದ ದಂಪತಿ ಸಾವು | ಕಾನಿಹಳ್ಳದಲ್ಲಿ ಘಟನೆ
ಗಾಂಜಾ ಪೆಡ್ಲಿಂಗ್ ಪ್ರಕರಣದಲ್ಲಿ ಬೇಕಾಗಿದ್ದ ಚಿತ್ರದುರ್ಗ ನಗರದ ಚೇಳುಗುಡ್ಡದ ಆರೋಪಿ ಮಹಮ್ಮದ್ ಕಮ್ರಾನ್ ಹಿಡಿಯಲು ಶುಕ್ರವಾರ ಬೆಳಗಿನ ಜಾವ ೫ ಗಂಟೆ ಸುಮಾರಿಗೆ ತಾಲೂಕಿನ ಸೀಬಾರ ಬಳಿ ತೆರಳಿದ್ದ ಪೊಲೀಸರ ಮೇಲೆ ಆರೋಪಿ ಹಲ್ಲೆಗೆ ಯತ್ನಿಸಿದ್ದಾನೆ.
ಪೊಲೀಸ್ ಸಿಬ್ಬಂದಿ ತಿಮ್ಮರಾಯಪ್ಪ ಆರೋಪಿ ಕಮ್ರಾನ್ ಹಿಡಿಯಲು ಹೋದಾಗ ಚಾಕು ಹಿಡಿದು ಹೊಟ್ಟೆಗೆ ಚುಚ್ಚಲು ಯತ್ನಿಸಿದ್ದಾನೆ. ಈ ವೇಳೆ ತಿಮ್ಮರಾಯಪ್ಪ ಅಡ್ಡಿಪಡಿಸಿದಾಗ ಕೈಗೆ ಚಾಕು ತಗುಲಿದೆ. ಈ ವೇಳೆ ಗ್ರಾಮಾಂತರ ಠಾಣೆ ಪಿಐ ಮುದ್ದುರಾಜ್ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗಲು ತಿಳಿಸಿದ್ದಾರೆ.
ಇದನ್ನೂ ಓದಿ: ಗ್ರಾಮ ಪಂಚಾಯತಿ ಉಪಚುನಾವಣೆ | ವೇಳಾಪಟ್ಟಿ ಪ್ರಕಟ
ಆದರೆ, ಆರೋಪಿ ಕಮ್ರಾನ್ ಪೊಲೀಸರಿಗೆ ಚಾಕು ತೋರಿಸಿ ಕೊಲೆಗೆ ಯತ್ನಿಸಿದಾಗ ಪಿಐ ಮುದ್ದುರಾಜ್, ಪೊಲೀಸ್ ಸಿಬ್ಬಂದಿಯ ಆತ್ಮ ರಕ್ಷಣೆಗಾಗಿ ಆರೋಪಿ ಕಡೆಗೆ ಗುಂಡು ಹಾರಿಸಿದ್ದು, ಸದರಿ ಗುಂಡು ಕಮ್ರಾನ್ ಮೊಣಕಾಲಿಗೆ ತಗುಲಿದೆ.
ಕೂಡಲೇ ಆರೋಪಿ ಹಾಗೂ ಪೊಲೀಸ್ ಸಿಬ್ಬಂದಿ ತಿಮ್ಮರಾಯಪ್ಪ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆತಂದು ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.
ಇದನ್ನೂ ಓದಿ: ಮಿಸ್ಟರ್ ಅಂಡ್ ಮಿಸ್ ಜೆಎಂಐಟಿ ಸ್ಪರ್ಧೆ | ಶೈಲೇಂದ್ರ, ರಕ್ಷಿತಾ ಆಯ್ಕೆ | ಸ್ಟೈಲಿಷ್ ವಾಕ್, ಸ್ಟೈಲ್ ಐಕಾನ್ ಪೈಪೋಟಿ
ಏಪ್ರಿಲ್ 23 ರಂದು ಆರೋಪಿ ಕಮ್ರಾನ್ ಸೆರಿದಂತೆ ಸಾದತ್ ಹಾಗೂ ಸುಹೇಲ್ ಕಾಪ್ರಾ ಪೆಟ್ರೋಲ್ ಬಂಕ್ ಬಳಿ ಗಾಂಜಾ ಮಾರಾಟಕ್ಕೆ ನಿಂತಿದ್ದಾಗ ಸೈಬರ್ ಠಾಣೆ ಪೊಲೀಸರು ದಾಳಿ ನಡೆಸಿ ಹಿಡಿಯಲು ಮುಂದಾಗಿದ್ದಾರೆ.
ಈ ವೇಳೆ ಎಸ್‌ಇಎನ್ ಠಾಣೆ ಎಎಸ್‌ಐ ದಿವಾಕರ್ ಅವರಿಗೆ ಬೈಕ್ ಗುದ್ದಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.
ಪೊಲೀಸರು ಸುಹೇಲ್ ಮತ್ತು ಸಾದತ್ ಬಂದಿಸಿದ್ದು, ಕಮ್ರಾನ್ ತಪ್ಪಿಸಿಕೊಂಡಿದ್ದ. ಇದೇ ಪ್ರಕರಣದಲ್ಲಿ ಆರೋಪಿಯಾಗಿದ್ದ ಕಾರಣಕ್ಕೆ ಇಂದು ಬಂಧನಕ್ಕೆ ಪೊಲೀಸರು ನಸುಕಿನಲ್ಲಿ ತೆರಳಿದ್ದರು. ಈಗ ಆರೋಪಿ ಮೇಲೆ ಗ್ರಾಮಾಂತರ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
