CHITRADURGA NEWS | 08 MAY 2025
ಚಿತ್ರದುರ್ಗ: Student Life is Golden Life ಎಂಬ ಮಾತಿದೆ. ಈ ಹಂತದಲ್ಲಿ ಬದುಕು ಕಟ್ಟಿಕೊಳ್ಳಬಹುದು. ಬದುಕನ್ನು ಸರ್ವನಾಶ ಕೂಡಾ ಮಾಡಿಕೊಳ್ಳಬಹುದು. ಆದರೆ, ಇದೆಲ್ಲದರ ನಡುವೆ ಆಟ, ಪಾಠ, ಮನರಂಜನೆ ಎಲ್ಲದರಲ್ಲೂ ಹಿತ, ಮಿತವಾಗಿ ಭಾಗವಹಿಸಿದರೆ ವಿದ್ಯಾರ್ಥಿ ಜೀವನ ನಿಜಕ್ಕೂ ಸ್ವರ್ಗ ಎನ್ನುವುದಕ್ಕೆ ಮೇಲಿನ ಮಾತು ಅನ್ವರ್ಥ.
ಅಂಥಹ ಅವಕಾಶಗಳು, ಬದುಕಿಗೆ ಬಣ್ಣ ಹಚ್ಚಿ ಸಂಭ್ರಮಿಸುವ ಕ್ಷಣಗಳು ವಿದ್ಯಾರ್ಥಿ ಜೀವದಲ್ಲೇ ಎದುರಾಗುತ್ತವೆ.

ಇದನ್ನೂ ಓದಿ: ಆಪರೇಷನ್ ಸಿಂಧೂರ | ಪಾಕಿಸ್ತಾನಕ್ಕೆ ತಕ್ಕ ಉತ್ತರ | ಕೆ.ಎಸ್.ನವೀನ್
ಓದು, ಪರೀಕ್ಷೆಯಲ್ಲಿ ಮಗ್ನರಾಗುವ ವಿದ್ಯಾರ್ಥಿಗಳಿಗೆ ಬದುಕು ಹಾಗೂ ಜಗತ್ತಿನ ಮತ್ತೊಂದು ಮಜಲನ್ನೂ ಪರಿಚಯಿಸುವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು.
ಈ ಪೀಠಿಕೆಗೆ ಕಾರಣ, ನಗರದ ಎಸ್.ಜೆ.ಎಂ.ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸ್ಪೂರ್ತಿ-2025 ರ ಅಂಗವಾಗಿ ಮಿಸ್ಟರ್ ಜೆ.ಎಂ.ಐ.ಟಿ ಅಂಡ್ ಮಿಸ್ ಜೆ.ಎಂ.ಐ.ಟಿ ಸ್ಪರ್ಧೆ.
ಇದನ್ನೂ ಓದಿ: ವಿವಿಧ ಹುದ್ದೆ | ಇಂದೇ ಅರ್ಜಿ ಸಲ್ಲಿಸಿ
ಸ್ಪರ್ಧೆಯಲ್ಲಿ ಇ&ಸಿ ವಿಭಾಗದ ಶೈಲೆಂದ್ರ ಮಿಸ್ಟರ್ ಜೆ.ಎಂ.ಐ.ಟಿ ಯಾಗಿ ಆಯ್ಕೆಯಾದರೆ, ಪ್ರಥಮ ವರ್ಷದ ತರುಣ್ ಪ್ರಥಮ ರನ್ನರ್ ಆಫ್ ಹಾಗೂ ಸಿವಿಲ್ ವಿಭಾಗದ ತಿಪ್ಪೇಸ್ವಾಮಿ ದ್ವೀತಿಯ ರನ್ನರ್ ಆಫ್ ಆಗಿ ಆಯ್ಕೆಯಾದರು.
ಸಿಎಸ್ ಇಂಜಿನಿಯರಿಂಗ್ ವಿಭಾಗದ ರಕ್ಷಿತ ಮಿಸ್ ಜೆ.ಎಂ.ಐ.ಟಿ ಯಾಗಿ ಆಯ್ಕೆಯಾದರೆ, ತೃಪ್ತಿ ಎ.ಜೆ ಪ್ರಥಮ ರನ್ನರ್ ಆಫ್ ಹಾಗೂ ಪ್ರಥಮ ವರ್ಷದ ಪ್ರಾಂಜಲ ದ್ವೀತಿಯ ರನ್ನರ್ ಆಫ್ ಆಯ್ಕೆಯಾದರು. ಸಿಎಸ್ ವಿಭಾಗದ ತೃಪ್ತಿ ಎ.ಜೆ-ಬೆಸ್ಟ್ ಅಟೈರ್, ಪ್ರಾಂಜಲ-ಸ್ಟೈಲೀಷ್ ವಾಕ್ ಹಾಗೂ ಇ&ಸಿ ವಿಭಾಗದ ಸ್ಪೂರ್ತಿ -ಸ್ಟೈಲ್ ಐಕಾನ್ ಆಗಿ ಆಯ್ಕೆಯಾದರು.
ಇದನ್ನೂ ಓದಿ: ಭಾರತ ಚೀನಾ ಯುದ್ಧದಲ್ಲಿ ದೇಶಕ್ಕಾಗಿ ಚಿನ್ನದ ಕಿರೀಟ ಕೊಡುಗೆ | ಜಯವಿಭವ ಶ್ರೀಗಳ ಸ್ಮರಣೆ
ಪ್ರಥಮ ವರ್ಷದ ತರುಣ್-ಬೆಸ್ಟ್ ಅಟೈರ್, ಸಿಎಸ್‌ಇ ವಿಭಾಗದ ಮಿನಾಲ್-ಸ್ಟೈಲಿಷ್ ವಾಕ್ ಹಾಗೂ ಮೆಕ್ಯಾನಿಕಲ್ ವಿಭಾಗದ ರಾಜು- ಸ್ಟೈಲ್ ಐಕಾನ್ ಆಗಿ ಆಯ್ಕೆಯಾದರು.

ಆಪರೇಷನ್ ಲಂಡನ್ ಕೆಫೆ ಚಲನಚಿತ್ರ ನಿರ್ದೇಶಕ ಕವಿಶ್ ಶೆಟ್ಟಿ ಹಾಗೂ ಮಾಡೆಲ್ ಚೈತ್ರಶ್ರೀ ನಾಯ್ಡು ತೀರ್ಪುಗಾರರಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ನಾನು ಮತ್ತು ಗುಂಡ-2 ಕನ್ನಡ ಚಲನಚಿತ್ರದ ನಾಯಕ ನಟ ರಾಕೇಶ ಅಡಿಗ ಹಾಗೂ ಪೇಟೆ ಹುಡುಗಿರ್ ಹಳ್ಳಿ ಲೈಪ್‌ನ ರಿಯಾಲಿಟಿ ಶೋ ಖ್ಯಾತಿಯ ಅರ್ಪಿತ ಆಗಮಿಸಿದ್ದರು.
ಇದನ್ನೂ ಓದಿ: ಯಾವ ದೇವರ ದೇವಾಲಯದಲ್ಲಿ ನೀವು ಎಷ್ಟು ಬಾರಿ ಪ್ರದಕ್ಷಿಣೆ ಹಾಕಬೇಕು ಎಂಬುದನ್ನು ತಿಳಿಯಿರಿ
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ.ಭರತ್ ಪಿ ಬಿ, ಸ್ಫೂರ್ತಿ-2025ರ ಸಂಚಾಲಕ ಡಾ.ಶಿವಕುಮಾರ್ ಎಸ್ ಪಿ, ಇಲಾಖಾ ಮುಖ್ಯಸ್ಥರಾದ ಡಾ.ಕುಮಾರಸ್ವಾಮಿ ಬಿ ಜಿ, ಡಾ.ಸಿದ್ಧೇಶ್ ಕೆ ಬಿ, ಡಾ.ಕೃಷ್ಣಾರೆಡ್ಡಿ ಕೆ ಆರ್, ಡಾ.ಶ್ರೀಶೈಲ ಜೆ ಎಂ, ಡಾ.ಲೋಕೇಶ್ ಹೆಚ್ ಜೆ, ಡಾ.ನಿರಂಜನ್ ಈ, ಪ್ರೊ. ಶಶಿಧರ್ ಎ ಪಿ, ಡಾ.ಕುಮಾರಸ್ವಾಮಿ ಕೆ, ಬೋಧಕ – ಬೋಧಕೇತರ ಸಿಬ್ಬಂದಿ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
