
CHITRADURGA NEWS | 06 MAY 2025
ಹೊಸದುರ್ಗ: ತಾಲೂಕಿನ ಅತ್ತಿಮಗೆ ಗ್ರಾಮದಲ್ಲಿ ಕುರಿಗಳ ಮೈ ತೊಳೆಯಲು ಹಳ್ಳಕ್ಕೆ ಹೋಗಿದ್ದ ದಂಪತಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.
Also Read: KSRTC ಬಸ್ ಅಪಘಾತ | ಓರ್ವ ಸಾವು | 26 ಜನರಿಗೆ ಗಾಯ

ಅತ್ತಿಮಗೆ ಗ್ರಾಮದ ಕುರಿಗಾಯಿ ತಿಮ್ಮೇಶ, ಪತ್ನಿ ಪುಟ್ಟಮ್ಮ ಮೃತ ದಂಪತಿಗಳಾಗಿದ್ದಾರೆ.
ಕುರಿಗಳ ಮೈ ತೊಳೆಯಲು ಗ್ರಾಮದ ಹೊರವಲಯದ ಕಾನಿಹಳ್ಳಕ್ಕೆ ದಂಪತಿ ಕುರಿಗಳನ್ನು ಹೊಡೆದುಕೊಂಡು ಹೋಗಿದ್ರು. ಈ ವೇಳೆ ಆಕಸ್ಮಿಕವಾಗಿ ಕಳ್ಳದ ಆಳವಾದ ನೀರಿಗೆ ಜಾರಿ ದಂಪತಿ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಹೊಸದುರ್ಗ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Also Read: ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಪಡೆಯಲು ಅವಕಾಶ | ಈ ದಾಖಲಾತಿ ತಂದರೇ ಸಾಕು
ಅಗ್ನಿಶಾಮಕ ದಳದ ಸಿಬ್ಬಂದಿ ಮೃತ ದೇಹ ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
