ಚಿತ್ರದುರ್ಗ ನ್ಯೂಸ್. ಕಾಂ: ಸಾರ್ವಜನಿಕರ ಸೇವಾ ವಾಹನ (ಟ್ಯಾಕ್ಸಿ) ಗಳಿಗೆ ಲೊಕೇಶನ್ ಟ್ರ್ಯಾಕಿಂಗ್(Location tracking device) ಹಾಗೂ ಎಮರ್ಜೆನ್ಸಿ ಪ್ಯಾನಿಕ್ ಬಟನ್(Emergency panic button) ಅಲವಡಿಸಲು ಕಾಲಾವಕಾಶ ನೀಡಲು ಒತ್ತಾಯಿಸಿ ಕೋಟೆನಾಡು ಅಪ್ಪು ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘದಿಂದ ಪ್ರಾದೇಶಿಕ ಸಾರಿಗೆ(RTO) ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕೋವಿಡ್ ಮಹಾಮಾರಿಯಿಂದ ಜೀವನ ಸಂಕಷ್ಟಕ್ಕೆ ಸಿಲುಕಿದ್ದು, ಸುಧಾರಿಸಿಕೊಳ್ಳುತ್ತಿರುವ ಹೊತ್ತಿನಲ್ಲೇ ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿ ಮಾಡುವ ಮೂಲಕ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದೇವೆ.
ಇದರಿಂದ ಟ್ಯಾಕ್ಸಿ ಚಾಲಕರು, ಮಾಲಕರು ಸಂಕಷ್ಟಕ್ಕೆ ಸಿಲುಕಿದ್ದೇವೆ. ಇನ್ಶುರೆನ್ಸ್, ಕಂತು ಎಫ್ಸಿ ಕಟ್ಟಲು ಪರದಾಡುತ್ತಿದ್ದೇವೆ. ಆದರೂ ಎಲ್ಲವನ್ನೂ ಸಕಾಲಕ್ಕೆ ಕಟ್ಟಿದ್ದೇವೆ.

ಇದನ್ನೂ ಓದಿ: ಚಿತ್ರದುರ್ಗ-ತುಮಕೂರು ನಡುವೆ ವಿಮಾನ ನಿಲ್ದಾಣ(AIRPORT) ನಿರ್ಮಾಣಕ್ಕೆ ಚಿಂತನೆ
ಆದರೆ, ರಾಜ್ಯ ಸರ್ಕಾರ ಲೊಕೇಶನ್ ಟ್ರ್ಯಾಕಿಂಗ್ ಡಿವೈಸ್ ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಸಲು ಆದೇಶ ಹೊರಡಿಸಿರುವುದು ಸರಿಯಲ್ಲ.
ಸರ್ಕಾರ ಮನಸೋ ಇಚ್ಛೆ ದಿನಕ್ಕೊಂದು ಯೋಜನೆ, ನಿಯಮಗಳನ್ನು ಜಾರಿಗೆ ತಂದರೆ ನಿಭಾಯಿಸುವ ಶಕ್ತಿ ನಮ್ಮಲ್ಲಿ ಇಲ್ಲವಾಗಿದೆ.
ಆದ್ದರಿಂದ ಸರ್ಕಾರ ಹಾಗೂ ಆರ್ಟಿಓ ಅಧಿಕಾರಿಗಳು ಹೊಸ ನಿಯಮ ಅಳವಡಿಸಿಕೊಳ್ಳಲು ಟ್ಯಾಕ್ಸಿ ಚಾಲಕರ ಮತ್ತು ಮಾಲಕರ ಸಂಘದಿಂದ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಟ್ಯಾಕ್ಸಿ ಚಾಲಕರ ಸಂಘದ ಸಂಜು, ತಿಪ್ಪೇಸ್ವಾಮಿ, ಅರುಣ್ ಕಮಾರ್, ಗೋವಿಂದರಾಜು, ಈಶಪ್ಪ ಮತ್ತಿತರರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
